Yuva Nidhi Scheme: ಗ್ಯಾರಂಟಿ ಯೋಜನೆಗಳ ಬಗ್ಗೆ ಇನ್ನೊಂದು ಮಾಹಿತಿ ಕೊಟ್ಟ ಸರ್ಕಾರ, 3000 ರೂ ಖಾತೆಗೆ
Yuva Nidhi Scheme: ಕಾಂಗ್ರೆಸ್(Congress) ಸರಕಾರದ ಗ್ಯಾರಂಟಿ ಯೋಜನೆಗಳು ಈಗಾಗಲೆ ಆರಂಭ ವಾಗಿದ್ದು ಅದರಲ್ಲಿ ಯುವ ನಿಧಿ ಯೋಜನೆ ಒಂದು ಬಾಕಿ ಇದೆ, ಈಗಾಗಲೇ ನಿರುದ್ಯೋಗ ಯುವಕ ಯುವತಿಯರು ಈ ಯೋಜನೆಗಾಗಿ ಕಾಯ್ತಾ ಇದ್ದಾರೆ. ಇದೀಗ ಈ ಯೋಜನೆ ಕುರಿತಂತೆ ಗುಡ್ ನ್ಯುಸ್ ಮಾಹಿತಿ ಬಂದಿದ್ದು ಯಾವಾಗ ಜಾರಿಯಾಗಲಿದೆ? ಯಾರೆಲ್ಲ ಈ ಯೋಜನೆ ಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿ ಲಭ್ಯವಾಗಿದೆ.
ಯಾರು ಅರ್ಜಿ ಸಲ್ಲಿಸಬಹುದು?
ಯುವಕರಲ್ಲಿ ಭಾರೀ ಕುತೂಹಲ ಹುಟ್ಟಿಸಿದ್ದ ಯೋಜನೆ ಇದಾಗಿದ್ದು, 2022 – 23 ರಲ್ಲಿ ವ್ಯಾಸಂಗ ಮಾಡಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಈ ಯೋಜನೆಯ ಸೌಲಭ್ಯ ಸಿಗಲಿದೆ. ಪದವೀಧರರಿಗೆ ಉದ್ಯೋಗ ಸಿಗುವ ವರೆಗೆ ಅಂದರೆ ಎರಡು ವರ್ಷಗಳ ವರೆಗೆ ಪ್ರತಿ ತಿಂಗಳೂ ನಿರುದ್ಯೋಗ ಭತ್ಯೆ ಸಿಗಲಿದೆ. ಕೆಲಸ ಇಲ್ಲದ ಪದವೀಧರರಿಗೆ ಪ್ರತಿ ತಿಂಗಳೂ 3,000 ಸಾವಿರ ರೂಪಾಯಿ ಮತ್ತು ಡಿಪ್ಲೊಮಾ ಮಾಡಿ ನಿರುದ್ಯೋಗಿ ಹೊಂದಿದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳೂ 1,500 ರೂ. ಹಣ ಸಿಗಲಿದೆ.
ಸಿಎಂ ಮಾಹಿತಿ
ಇದೀಗ ಐದನೇ ಗ್ಯಾರಂಟಿ ಯೋಜನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಹತ್ವದ ಸುದ್ದಿಯೊಂದನ್ನು ನೀಡಿದ್ದಾರೆ. ಮೈಸೂರು ದಸರಾ ಉದ್ಘಾಟನಾ ವೇಳೆ ಮಹತ್ವದ ಮಾಹಿತಿ ನೀಡಿದ್ದಾರೆ. ಹೌದು ಈ ಯೋಜನೆ ಶೀಘ್ರವಾಗಿ ಆರಂಭ ಮಾಡುವುದಾಗಿ ಮಾಹಿತಿ ನೀಡಿದ್ದಾರೆ.
ಯಾವಾಗ ಜಾರಿ
ಈ ಬಗ್ಗೆ ಮಾತನಾಡಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮುಂದಿನ ಜನವರಿಯಿಂದ ಈ ಯೋಜನೆಯ ಸೌಲಭ್ಯ ಸಿಗಲಿದೆ ಎಂದು ನಿರುದ್ಯೋಗ ಯುವಕ ಯುವತಿಯರಿಗೆ ಮಾಹಿತಿ ನೀಡಿದ್ದಾರೆ. ಐದು ಗ್ಯಾರಂಟಿ ಯೋಜನೆಗಳಲ್ಲಿ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಈಗಾಗಲೇ ಜಾರಿ ಮಾಡಿದ್ದು ಈ ಯೋಜನೆಯ ಸೌಲಭ್ಯ ಗಳನ್ನು ಜನರು ಈಗಾಗಲೇ ಪಡೆಯುತ್ತಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.
ಒಟ್ಟಿನಲ್ಲಿ ಐದನೇ ಗ್ಯಾರಂಟಿ ಯೋಜನೆ ಯಾವಾಗ ದೊರೆಯಲಿದೆ ಎಂಬ ಕಾದು ಕುಳಿತ್ತಿದ್ದ ಯುವಕ ಯುವತಿಯರಿಗೆ ಗುಡ್ ನ್ಯುಸ್ ಸಿಕ್ಕಿದಂತಾಗಿದೆ