Anu Kannadati: ನಿಜಕ್ಕೂ ಯಾರು ಈ ಕನ್ನಡತಿ ಅನು ಅಕ್ಕ, ಈಕೆ ಸರ್ಕಾರೀ ಶಾಲೆಗಳಿಗೆ ಬಣ್ಣ ಹಚ್ಚಲು ಅಸಲಿ ಕಾರಣ ಏನು…?

ಅನು ಕನ್ನಡತಿ ಸರ್ಕಾರೀ ಶಾಲೆಗಳಿಗೆ ಬಣ್ಣ ಹಚ್ಚಲು ಹಿಂದಿರುವ ಉದ್ದೇಶವೇನು ಗೊತ್ತಾ...?

Kannadati Anu Akka: ದೇಶದಲ್ಲಿ ಅದೆಷ್ಟೋ ಜನರು ತಮ್ಮ ನಿಸ್ವಾರ್ಥ ಸೇವೆಯ ಮೂಲಕ ಹೆಸರುವಾಸಿ ಆಗಿದ್ದಾರೆ. ತಮಗೆ ಯಾವುದೇ ಲಾಭವಿಲ್ಲದೆ ಸಮಾಜಕ್ಕಾಗಿ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಇಂತಹ ಅದೆಷ್ಟೋ ಜನರಿದ್ದು, ಅಂತವರನ್ನು ಗುರುತಿಸಿ ಅವರಿಗೆ ಗೌರವವನ್ನು ನೀಡಲಾಗುತ್ತಿದೆ.

ಇನ್ನು ಟೆಲಿವಿಷನ್ ನಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ Zee ಕನ್ನಡ ವಾಹಿನಿಯು ಕಳೆದ ವಾರ ಮಹಿಳಾ ದಿನಾಚರಣೆಯ ಅಂಗವಾಗಿ “Zee ಕನ್ನಡ ಸ್ತ್ರೀ ಅವಾರ್ಡ್” ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಹಾಗೆಯೇ ಸಮಾಜಕ್ಕಾಗಿ ನಿಸ್ವಾರ್ಥ ಸೇವೆಯನ್ನು ಮಾಡುತ್ತಿರುವವರನ್ನು ಗುರಿತಿಸಿ, ಗೌರವಿಸಿ ಜೀ ವಾಹಿನಿಯು ಪ್ರಶಸ್ತಿಯನ್ನು ನೀಡಿದೆ.

Anu Kannadati Latest News
Image Credit: Instagram

ಸರ್ಕಾರೀ ಶಾಲೆಗಳಿಗೆ ಬಣ್ಣ ಹಚ್ಚುತ್ತಾರೆ ಅನು ಕನ್ನಡತಿ
ಇನ್ನು ಸೋಶಿಯಲ್ ಮೀಡಿಯಾದಲ್ಲಿ ಹೆಸರುವಾಸಿಯಾದ Anu Kannadati ಇವರನ್ನು ಕಾರ್ಯಕ್ರಮದಲ್ಲಿ ಗೌರವಸಲಾಗಿದೆ. ಅನು ಅವರು ಎಲ್ಲರಿಂದಲೂ ಅನು ಅಕ್ಕ ಎಂದು ಕರಿಸಿಕೊಳ್ಳುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಇವರಿಗೆ ಸಾಕಷ್ಟು ಜನ ಫಾಲೋವರ್ಸ್ ಇದ್ದಾರೆ. ಇವರ ಅನುಯಾಯಿಗಳು ಇವರ ಉದ್ದೇಶವನ್ನು ಗೌರವಿಸುತ್ತಾರೆ.

ಇನ್ನು ಅನು ಕನ್ನಡತಿ ಅವರು ಸರ್ಕಾರೀ ಶಾಲೆಗಳಿಗೆ ಬಣ್ಣ ಬಳಿಯುತ್ತ ತಮ್ಮ ನಿಸಾರ್ಥ ಸೇವೆಯನ್ನು ಸಲ್ಲಿಸುತ್ತಾರೆ. ಈ ಸೇವೆಯಿಂದಲೇ ಅನು ಅವರು ಎಲ್ಲರ ಪ್ರೀತಿಯನ್ನು ಪಡೆದುಕೊಂಡಿದೆ. ಇನ್ನು ಅನು ಅವರು ತಾವು ಸರ್ಕಾರೀ ಶಾಲೆಗಳಿಗೆ ಬಣ್ಣ ಬಳಿಯುವುದರ ಹಿಂದಿನ ಉದ್ದೇಶ ಏನು ಎನ್ನುವ ಬಗ್ಗೆ ವೇದಿಕೆ ಮೇಲೆ ಮಾಹಿತಿ ಹಂಚಿಕೊಂಡಿದ್ದಾರೆ.

Anu Kannadati Latest Update
Image Credit: Instagram

ಅನು ಕನ್ನಡತಿ ಸರ್ಕಾರೀ ಶಾಲೆಗಳಿಗೆ ಬಣ್ಣ ಹಚ್ಚಲು ಹಿಂದಿರುವ ಉದ್ದೇಶವೇನು ಗೊತ್ತಾ…?
ಅನು ಕನ್ನಡತಿ ಅವರು ಹಳೆಯ ಸರ್ಕಾರೀ ಶಾಲೆಗಳು ಅಂದರೆ ಬಣ್ಣ ಕಾಣದೆ ಹಳೆಯದಾಗಿರುವ ಶಾಲೆಗಳಿಗೆ ತಮ ಸ್ವಂತ ಖರ್ಚಿನಲ್ಲಿ ಬಣ್ಣವನ್ನು ಹಚ್ಚುತ್ತಾ ಶಾಲೆಯನ್ನು ಸ್ವಚ್ಛಗೊಳಿಸುತ್ತಾರೆ. ಇವರ ನಿಸ್ವಾರ್ಥ ಸೇವೆಗೆ ಸಹಾಯ ಮಾಡಲು ಸಾಕಷ್ಟು ಜನ ಕೈಜೋಡಿಸುತ್ತಾರೆ. ಅನು ಅವರು ಸ್ವತಃ ತಾವೇ ಕೈಯಲ್ಲಿ ಬ್ರಶ್ ಹಿಡಿದುಕೊಂಡು ಬಣ್ಣವನ್ನು ಹಚ್ಚುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಇವರ ವಿಡಿಯೋಗಳು ಆಗಾಗ ವೈರಲ್ ಆಗುತ್ತಾ ಇರುತ್ತದೆ.

Join Nadunudi News WhatsApp Group

ಇನ್ನು Zee ಕನ್ನಡ ಸ್ತ್ರೀ ಅವಾರ್ಡ್ ಕಾರ್ಯಮದಲ್ಲಿ ಅನು ಅವರು ಸರ್ಕಾರೀ ಶಾಲೆಗಳಿಗೆ ಬಣ್ಣ ಹಚ್ಚಲು ಹಿಂದಿರುವ ಉದ್ದೇಶವನ್ನು ಹೇಳಿಕೊಂಡಿದ್ದಾರೆ. ಎಲ್ಲರಿಗೂ ನಮಸ್ಕಾರ, ನಾನು ಅನು ಕನ್ನಡತಿ, ನಾನು ಕಳೆದ ಐದು ವರ್ಷಗಳಿಂದ ಸರ್ಕಾರಿ ಶಾಲೆಯನ್ನು ಉಳಿಸಿ ಅಭಿಯಾನ ಮಾಡುತ್ತಿದ್ದೇನೆ. ಇದಕ್ಕೆ ಕಾರಣ ಭಾರತ ಹಳ್ಳಿಗಳ ರಾಷ್ಟ್ರ, ಇದನ್ನು ಹಿಂದುಳಿದ ರಾಷ್ಟ್ರ ಎಂದು ಕರೆಯಲಾಗುತ್ತದೆ. ಪ್ರಗತಿಯ ಹಾದಿಯಲ್ಲಿದೆ ಎಂದು ನಾವು ಓದುತ್ತಿದ್ದೇವೆ. ಆದರೆ ಪ್ರಗತಿ ಪಥದತ್ತ ಸಾಗಲು ಏನು ಮಾಡಬೇಕೋ ಅದನ್ನು ಮಾಡುತ್ತಿಲ್ಲ. ಸರ್ಕಾರೀ ಶಾಲೆಗಳ ಉಳಿವು ಅಗತ್ಯವಾಗಿದೆ ಎಂದಿದ್ದಾರೆ.

Zee Kannada Niswartha Seva Award To Anu Kannadathi
Image Credit: Filmibeat

Join Nadunudi News WhatsApp Group