Prabhas Movie: ಹಲವು ವರ್ಷಗಳ ನಂತರ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಅನುಷ್ಕಾ ಮತ್ತು ಪ್ರಭಾಸ್, ಒಂದಾದ ಜೋಡಿಗಳು.
ಮತ್ತೆ ಒಂದಾಗುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಪ್ರಭಾಸ ಹಾಗೂ ಅನುಷ್ಕಾ ಶೆಟ್ಟಿ.
Prabhas And Anushka Shetty New Movie: ಬಾಹುಬಲಿ ಜೋಡಿ ಪ್ರಭಾಸ್ (Prabhas) ಹಾಗೂ ಅನುಷ್ಕಾ ಶೆಟ್ಟಿ (Anushka Shetty) ಆಗಾಗ ಸುದ್ದಿಯಾಗುತ್ತಾರೆ. ಈ ಹಿಂದೆ ಸಾಕಷ್ಟು ಬಾರಿ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಡೇಟಿಂಗ್ ವಿಚಾರವಾಗಿ ಸುದ್ದಿಯಲ್ಲಿದ್ದರು. ಈ ಇಬ್ಬರು ಮದುವೆಯಾಗುತ್ತಾರೆ ಎನ್ನುವ ಬಗ್ಗೆ ನಾನಾ ರೀತಿಯಲ್ಲಿ ಗಾಸಿಪ್ ಹರಡಿತ್ತು.
ಆದರೆ ಕೆಲವು ದಿನಗಳಲ್ಲಿ ಈ ಸುದ್ದಿಗೆ ಸ್ಪಷ್ಟನೆ ಕೂಡ ಸಿಕ್ಕಿತ್ತು. ಇನ್ನು ಟಾಲಿವುಡ್ ಇಂಡಸ್ಟ್ರಿಯಲ್ಲಿ ಪ್ರಭಾಸ್ ಹಾಗೂ ಅನುಷ್ಕಾ ಹಿಟ್ ಜೋಡಿ ಆಗಿದ್ದಾರೆ. ಬಾಹುಬಲಿ 2 ಚಿತ್ರದ ಮೂಲಕ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಜೋಡಿ ಎಲ್ಲರ ಗಮನ ಸೆಳೆದಿದೆ.
ಟಾಲಿವುಡ್ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ
ಇನ್ನು ಇತ್ತೀಚಿಗೆ ನಟಿ ಅನುಷ್ಕಾ ಶೆಟ್ಟಿ ಚಿತ್ರರಂಗದಿಂದ ದೂರ ಆಗಲಿದ್ದಾರೆ ಎನ್ನುವ ಬಗ್ಗೆ ಕೂಡ ಸುದ್ದಿ ಹರಿದಾಡುತ್ತಿದೆ. ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ ಚಿತ್ರದ ಮೇಲೆ ಅನುಷ್ಕಾ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ ಚಿತ್ರ ಅನುಷ್ಕಾ ನಟನೆಯ ಕೊನೆಯ ಚಿತ್ರ ಆಗಲಿದೆ ಎನ್ನುವ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ. ಕೊನೆಯಲ್ಲಿ ಒಳ್ಳೆ ಸಿನಿಮಾದ ಮೂಲಕ ಅನುಷ್ಕಾ ಶೆಟ್ಟಿ ಚಿತ್ರರಂಗಕ್ಕೆ ವಿದಾಯ ಹೇಳಲಿದ್ದಾರೆ ಎನ್ನುವ ಗಾಸಿಪ್ ಹರಿದಾಡುತ್ತಿದೆ.
ಇನ್ನು ಆಗಸ್ಟ್ ಮೊದಲ ವಾರದಲ್ಲೇ ಬಿಡುಗಡೆ ಆಗಬೇಕಿದ್ದ ಅನುಷ್ಕಾ ಮೂವಿ ಮುಂದೂಡಲ್ಪಟ್ಟಿದೆ. ಅಷ್ಟಕ್ಕೂ ನಟಿ ಅನುಷ್ಕಾ ಚಿತ್ರರಂಗಕ್ಕೆ ವಿದಾಯ ಹೇಳಲು ಸೈಜ್ ಜೀರೋ ಚಿತ್ರವೇ ಕಾರಣ ಎನ್ನುವ ಬಗ್ಗೆ ಕೂಡ ಮಾಹಿತಿ ಕೇಳಿ ಬಂದಿದೆ. ಆದರೆ ಇದೀಗ ಅನುಷ್ಕಾ ಶೆಟ್ಟಿ ಚಿತ್ರರಂಗ ತೊರೆಯುವ ಸುದ್ದಿಯ ಜೊತೆಗೆ ಅನುಷ್ಕಾ ಹೊಸ ಮೂವಿ ಅಪ್ಡೇಟ್ ಕೊಡ ಲಭಿಸಿದೆ.
ಹಲವು ವರ್ಷಗಳ ನಂತರ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಅನುಷ್ಕಾ ಮತ್ತು ಪ್ರಭಾಸ್
ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಜೊತೆಯಾಗಿ ನಟಿಸಿದ ಚಿತ್ರಗಳು ಭರ್ಜರಿ ಯಶಸ್ಸು ಗಳಿಸಿದೆ. ಟಾಲಿವುಡ್ ಇಂಡಸ್ಟ್ರಿಯಲ್ಲಿ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಅವರಿಗೆ ಸಪರೇಟ್ ಫ್ಯಾನ್ಸ್ ಇದ್ದಾರೆ. ಇನ್ನು ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಹೊಸ ಚಿತ್ರದಲ್ಲಿ ನಟಿಸುವ ಬಗ್ಗೆ ಸುದ್ದಿಯಾಗಿದೆ.
ಲೋಕೇಶ್ ಕನಗರಾಜ್ ನಿರ್ದೇಶನದಲ್ಲಿ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಕಥೆ ರಚಿಸಲಾಗಿದೆ ಎನ್ನಲಾಗುತ್ತಿದೆ. ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೆ ಈ ಸುದ್ದಿ ಹೆಚ್ಚಿನ ಕುತೂಹಲ ಮೂಡಿಸಿದೆ. ಇನ್ನು ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಅವರ ಹೊಸ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಿಲ್ಲ. ಚಿತ್ರತಂಡದಿಂದ ಅಧಿಕೃತ ಮಾಹಿತ ಬರುವವರೆಗೂ ಕಾದು ನೋಡಬೇಕಿದೆ.