Anushka Wedding: ಫಿಕ್ಸ್ ಆಯಿತು ನಟಿ ಅನುಷ್ಕಾ ಶೆಟ್ಟಿ ಮದುವೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಅನುಷ್ಕಾ ಮದುವೆ ಡೇಟ್

ಏಪ್ರಿಲ್ ನಲ್ಲಿ ಹಸೆಮಣೆ ಏರಲಿದ್ದಾರೆ ಪ್ರಭಾಸ್ ಹಾಗೂ ಅನುಷ್ಕಾ, ಸುದ್ದಿ ವೈರಲ್

Anushka And Prabhas Marriage Update: ಟಾಲಿವುಡ್ ನಲ್ಲಿ ಕಮಲ್ ಸೃಷ್ಟಿಸಿದ Anushka Shetty ಹಾಗು Prabhas ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಇನ್ನು ಟಾಲಿವುಡ್ ಇಂಡಸ್ಟ್ರಿಯಲ್ಲಿ ಪ್ರಭಾಸ್ ಹಾಗೂ ಅನುಷ್ಕಾ ಹಿಟ್ ಜೋಡಿ ಆಗಿದ್ದಾರೆ. ಬಾಹುಬಲಿ 2 ಚಿತ್ರದ ಮೂಲಕ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಜೋಡಿ ಎಲ್ಲರ ಗಮನ ಸೆಳೆದಿದೆ.

ಈ ಹಿಂದೆ ಸಾಕಷ್ಟು ಬಾರಿ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಡೇಟಿಂಗ್ ವಿಚಾರವಾಗಿ ಸುದ್ದಿಯಲ್ಲಿದ್ದರು. ಈ ಇಬ್ಬರು ಮದುವೆಯಾಗುತ್ತಾರೆ ಎನ್ನುವ ಬಗ್ಗೆ ನಾನಾ ರೀತಿಯಲ್ಲಿ ಗಾಸಿಪ್ ಆಗಿ ಹರಡಿತ್ತು. ಇದೀಗ ಮತ್ತೆ ಅನುಷ್ಕಾ ಹಾಗೂ ಪ್ರಭಾಸ್ ಲವ್ ಕಹಾನಿ ಮತ್ತೆ ಚಿಗುರೊಡೆದಿದೆ. ಈ ಇಬ್ಬರ ಮದುವೆಯ ಸುದ್ದಿ ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

Anushka And Prabhas Marriage Update
Image Credit: The Times Of India

ಸದ್ಯದಲ್ಲೇ ಮದುವೆ ಆಗ್ತಾರಂತೆ ಪ್ರಭಾಸ್ ಹಾಗೂ ಅನುಷ್ಕಾ
ಇನ್ನು ಇತ್ತೀಚಿಗೆ ನಟಿ ಅನುಷ್ಕಾ ಶೆಟ್ಟಿ ಚಿತ್ರರಂಗದಿಂದ ದೂರ ಆಗಲಿದ್ದಾರೆ ಎನ್ನುವ ಬಗ್ಗೆ ಕೂಡ ಸುದ್ದಿ ಹರಿದಾಡುತ್ತಿದೆ. ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ ಚಿತ್ರದ ನಂತರ ಅನುಷ್ಕಾ ಯಾವುದೇ ಸಿನಿಮಾ ಪ್ರೊಜೆಕ್ಟ್ ಗಳನ್ನೂ ಕೈಗೆತ್ತಿಕೊಂಡಿಲ್ಲ.

ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ ಚಿತ್ರ ಅನುಷ್ಕಾ ನಟನೆಯ ಕೊನೆಯ ಚಿತ್ರ ಆಗಲಿದೆ ಎನ್ನುವ ಬಗ್ಗೆ ಕೂಡ ಸುದ್ದಿ ಹರಿದಾಡಿತ್ತು. ಸದ್ಯ ಈ ಎಲ್ಲಾ ವಿಚಾರಗಳ ಬೆನ್ನಲ್ಲೇ ಇದೀಗ ಮತ್ತೆ ಪ್ರಭಾಸ್ ಹಾಗೂ ಅನುಷ್ಕಾ ಲವ್ ಕಹಾನಿ ಮತ್ತೆ ಆರಂಭವಾಗಿದೆ ಎನ್ನಲಾಗುತ್ತಿದೆ. ಹಲವು ವರ್ಷಗಳ ನಂತರ ಅಭಿಮಾನಿಗಳಿಗೆ ಅನುಷ್ಕಾ ಮತ್ತು ಪ್ರಭಾಸ್ ಗುಡ್ ನ್ಯೂಸ್ ನೀಡುತ್ತಾರೆ ಎನ್ನುವ ಬಗ್ಗೆ ಚರ್ಚೆ ಹೆಚ್ಚುತ್ತಿದೆ.

Anushka And Prabhas Marriage
Image Credit: Cinejosh

ಮಾರ್ಚ್ ನಲ್ಲಿ ನಿಶ್ಚಿತಾರ್ಥ, ಏಪ್ರಿಲ್ ನಲ್ಲಿ ಮದುವೆ..!
ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಜೊತೆಯಾಗಿ ನಟಿಸಿದ ಚಿತ್ರಗಳು ಭರ್ಜರಿ ಯಶಸ್ಸು ಗಳಿಸಿದೆ. ಟಾಲಿವುಡ್ ಇಂಡಸ್ಟ್ರಿಯಲ್ಲಿ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಅವರಿಗೆ ಸಪರೇಟ್ ಫ್ಯಾನ್ಸ್ ಇದ್ದಾರೆ. ಈ ಜೋಡಿ ರೀಲ್ ನಲ್ಲಿ ಅಲ್ಲದೆ ರಿಯಲ್ ಆಗಿ ಜೋಡಿ ಆಗಲಿ ಎನ್ನುವುದು ಇಬ್ಬರು ಅಭಿಮಾನಿಗಳ ಆಸೆಯಾಗಿದೆ. ಅದರಂತೆ ಇದೀಗ ಮತ್ತೆ ಈ ಇಬ್ಬರ ಮದುವೆ ವಿಚಾರ ಟಾಲಿವುಡ್ ಇಂಡಸ್ಟ್ರಿಯಲ್ಲಿ ಸ್ಟಾರ್ಟ್ ಆಗಿದೆ.

Join Nadunudi News WhatsApp Group

ಪ್ರಭಾಸ್ ಹಾಗೂ ಅನುಷ್ಕಾ ಮಾರ್ಚ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದು, ಏಪ್ರಿಲ್ ನಲ್ಲಿ ಹಸೆಮಣೆ ಏರಲಿದ್ದಾರೆ ಎನ್ನುವ ಬಗ್ಗೆ ಮಾಹಿತಿ ವೈರಲ್ ಆಗುತ್ತಿದೆ. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ರೀತಿಯೇ ಇಬ್ಬರು ಸಡನ್ ಆಗಿ ಎಂಗೇಜ್ಮೆಂಟ್ ಎನೌನ್ಸ್ ಮಾಡಬಹುದು ಎಂದು ಅಭಿಮಾನಿಗಳು ಅಂದುಕೊಂಡಿದ್ದಾರೆ. ಈ ಬಾರಿ ಆದರೂ ಪ್ರಭಾಸ್ ಹಾಗೂ ಅನುಷ್ಕಾ ಅವರ ಮದುವೆ ಸುದ್ದಿ ನಿಜವಾಗುತ್ತ ಎನ್ನುವುದು ಸದ್ಯದಲ್ಲೇ ತಿಳಿಯಲಿದೆ.

Join Nadunudi News WhatsApp Group