Virat Kohli Commitment: ವಿರಾಟ್ ಕೊಹ್ಲಿ ಕಮಿಟ್ ಮೆಂಟ್ ಕಥೆ ಹೇಳಿದ ಅನುಷ್ಕಾ ಶರ್ಮಾ.
Virat Kohli And Anushka Sharma: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕರಾದ ವಿರಾಟ್ ಕೊಹ್ಲಿ (Virat Kohli) ವಿಶ್ವದ ಅತ್ಯತ್ತಮ ನಾಯಕರಲ್ಲಿ ಒಬ್ಬರು. ಅತ್ಯಂತ ಪ್ರಸಿದ್ಧ ಕ್ರೀಡಾಪುವಾಗಿರುವ ವಿರಾಟ್ ಕೊಹ್ಲಿ ಅಹಮದಾಬಾದ್ ಟೆಸ್ಟ್ (Ahmedabad test) ನಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ ನಿಂದ ಭರ್ಜರಿ ರನ್ ಗಳಿಸಿದ್ದಾರೆ.
ಕೊಹ್ಲಿ ಅವರು 1206 ದಿನಗಳ ಬಳಿಕ ಟೆಸ್ಟ್ ಕ್ರಿಕೆಟ್ ನಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದರು. ಅಹಮದಾಬಾದ್ ಟೆಸ್ಟ್ ನಲ್ಲಿ ವಿರಾಟ್ ಉತ್ತಮ ಬ್ಯಾಟಿಂಗ್ ಮಾಡಿದರು. ಕೊಹ್ಲಿ ಈ ಪಂದ್ಯದಲ್ಲಿ 186 ರನ್ ಗಳ ಅಬ್ಬರದ ಇನ್ನಿಂಗ್ಸ್ ಆಡಿದ್ದರು. ಈ ವೇಳೆ ಅವರ ಬ್ಯಾಟ್ ನಿಂದ 15 ಬೌಂಡರಿಗಳು ಹೊರಹೊಮ್ಮಿದವು.
ನಾಥನ್ ಲಿಯಾನ್ ಮತ್ತು ಟಾಡ್ ಮರ್ಫಿಯಂತಹ ಸ್ಪಿನ್ನರ್ ಗಳು ವಿರಾಟ್ ನನ್ನ ಔಟ್ ಮಾಡಲು ಹೆಣಗಾಡಿದರು ಆದರೆ ವಿರಾಟ್ ವಿಭಿನ್ನ ಆಟದ ಯೋಜನೆಯೊಂದಿಗೆ ಮೈದಾನಕ್ಕೆ ಬಂದಿದ್ದರು. ವಿರಾಟ್ ಔಟಾದ ನಂತರ ಪತ್ನಿ, ಅನುಷ್ಕಾ ಶರ್ಮಾ (Anushka sharma) ಹೊಸ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಈ ಇನ್ನಿಂಗ್ಸ್ ನಲ್ಲಿ ವಿರಾಟ್ ಸಂಪೂರ್ಣ ಫಿಟ್ ಆಗಿರಲಿಲ್ಲ ಎಂದು ಪತ್ನಿ ಅನುಷ್ಕಾ ಹೇಳಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ವಿರಾಟ್ ಕೊಹ್ಲಿ ಅವರ ಪಂದ್ಯದ ಚಿತ್ರವನ್ನು ಹಂಚಿಕೊಂಡಿರುವ ಅನುಷ್ಕಾ ಶರ್ಮಾ, ಅನಾರೋಗ್ಯದ ನಡುವೆಯೂ ಆಡುವುದು ಮತ್ತು ಮೈದಾನದಲ್ಲಿ ಈ ರೀತಿಯ ಮಾನಸಿಕ ಸಮತೋಲನವು ನನಗೆ ತುಂಬಾ ಸ್ಪೂರ್ತಿ ನೀಡುತ್ತದೆ ಎಂದು ಬರೆದಿದ್ದಾರೆ.
ಈ ಪಂದ್ಯದಲ್ಲಿ ವಿರಾಟ್ ಕೊನೆಯವರಿಗೂ ಭರ್ಜರಿ ಬ್ಯಾಟಿಂಗ್ ಮಾಡಿದರು. ನಾಲ್ಕನೇ ದಿನದ ಆಟದಲ್ಲಿ ಅಕ್ಷರ್ ಪಟೇಲ್ ಮೂರನೇ ಸೆಷನ್ ನಲ್ಲಿ ವೇಗವಾಗಿ ಸ್ಕೊರ್ ಮಾಡುತ್ತಿದ್ದರು. ಇದೆ ವೇಳೆ ವಿರಾಟ್ ಕೊಹ್ಲಿ ದ್ವಿಶತಕದತ್ತ ಸಾಗುತ್ತಿದ್ದರು. ಅಕ್ಷರ್ 79 ರನ್ ಗಳಿಸಿ ಔಟಾದರೆ 186 ರನ್ ಗೆ ಔಟ್ ಆದರೂ.
ಇನ್ನು ವಿರಾಟ್ ಕೊಹ್ಲಿ ನವೆಂಬರ್ 2019 ರ ನಂತರ ಟೆಸ್ಟ್ ನಲ್ಲಿ ಶತಕ ಗಳಿಸಿದರು. ನಂತ್ರ ಈಡನ್ ಗಾರ್ಡ್ಸ್ ನಲ್ಲಿ ಬಾಂಗ್ಲಾದೇಶದ ವಿರುದ್ಧ 136 ರನ್ ಗಳಿಸಿದ್ದರು. ಇದು ಅವರ ಟೆಸ್ಟ್ ವ್ರತ್ತಿಜೀವನದ ಒಟ್ಟಾರೆ 28 ನೇ ಶತಕವಾಗಿದೆ. ಅವರು ODI ಗಳಲ್ಲಿ 46 ಮತ್ತು T20 ಅಂತಾರಾಷ್ಟ್ರೀಯ ಶತಕಗಳನ್ನು ಗಳಿಸಿದ್ದಾರೆ.