Anushka Shetty: ಮದುವೆಯಾಗಲು ಕಂಡೀಷನ್ ಹಾಕಿದ ಅನುಷ್ಕಾ ಶೆಟ್ಟಿ, ಇದಕ್ಕೆ ಒಪ್ಪಿದರೆ ಮದುವೆಗೆ ರೆಡಿ.

ಮದುವೆಯ ಬಗ್ಗೆ ಕಂಡೀಷನ್ ಗಳನ್ನ ಹೇಳಿದ ನಟಿ ಅನುಷ್ಕಾ ಶೆಟ್ಟಿ.

Anushka Shetty Condition About Her Marriage: ಬಾಹುಬಲಿ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ (Anushka Shetty) ಆಗಾಗ ಮದುವೆಯ ವಿಚಾರವಾಗಿ ಸುದ್ದಿಯಾಗುತ್ತಾರೆ. ಈ ಹಿಂದೆ ಸಾಕಷ್ಟು ಬಾರಿ ಪ್ರಭಾಸ್ (Prabhas) ಹಾಗೂ ಅನುಷ್ಕಾ ಶೆಟ್ಟಿ ಡೇಟಿಂಗ್ ವಿಚಾರವಾಗಿ ಸುದ್ದಿಯಲ್ಲಿದ್ದರು. ಇನ್ನು ಟಾಲಿವುಡ್ ಇಂಡಸ್ಟ್ರಿಯಲ್ಲಿ ಪ್ರಭಾಸ್ ಹಾಗೂ ಅನುಷ್ಕಾ ಹಿಟ್ ಜೋಡಿ ಆಗಿದ್ದಾರೆ.

ಬಾಹುಬಲಿ 2 ಚಿತ್ರದ ಮೂಲಕ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಜೋಡಿ ಎಲ್ಲರ ಗಮನ ಸೆಳೆದಿದೆ. ಈ ಇಬ್ಬರು ಮದುವೆಯಾಗುತ್ತಾರೆ ಎನ್ನುವ ಬಗ್ಗೆ ನಾನಾ ರೀತಿಯಲ್ಲಿ ಗಾಸಿಪ್ ಹರಡಿತ್ತು. ಆದರೆ ಕೆಲವು ದಿನಗಳಲ್ಲಿ ಈ ಸುದ್ದಿಗೆ ಸ್ಪಷ್ಟನೆ ಕೂಡ ಸಿಕ್ಕಿತ್ತು. ಇದೀಗ ನಟಿ ಅನುಷ್ಕಾ ಶೆಟ್ಟಿ ತಮ್ಮಾ ಮದುವೆಯ ಬಗ್ಗೆ ಮಾತನಾಡಿದ್ದಾರೆ.

Anushka Shetty Condition About Her Marriage
Image Credit: Thehindu

ಟಾಲಿವುಡ್ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ
ಇನ್ನು ಇತ್ತೀಚಿಗೆ ನಟಿ ಅನುಷ್ಕಾ ಶೆಟ್ಟಿ ಚಿತ್ರರಂಗದಿಂದ ದೂರ ಆಗಲಿದ್ದಾರೆ ಎನ್ನುವ ಬಗ್ಗೆ ಕೂಡ ಸುದ್ದಿ ಹರಿದಾಡುತ್ತಿದೆ. ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ (Miss Shetty Mister Poli Shetty) ಚಿತ್ರದ ಮೇಲೆ ಅನುಷ್ಕಾ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸೆಪ್ಟೆಂಬರ್ 7 ರಂದು ಅಂದರೆ ಇಂದು ಈ ಚಿತ್ರ ತೆರೆಕಂಡಿದೆ.

ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ ಚಿತ್ರ ಅನುಷ್ಕಾ ನಟನೆಯ ಕೊನೆಯ ಚಿತ್ರ ಆಗಲಿದೆ ಎನ್ನುವ ಬಗ್ಗೆ ಸುದ್ದಿಗಳು ಕೂಡ ಹರಿದಾಡುತ್ತಿವೆ. ಇನ್ನು ನಟಿ ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ ಚಿತ್ರದ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಈ ವೇಳೆ ಸಂದಾರ್ಶನದಲ್ಲಿ ನಟಿ ಮಾತನಾಡುವಾಗ ತಮ್ಮ ಮದುವೆಯ ಬಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

Anushka Shetty Condition
Image Credit: Postsen

ಮದುವೆಯಾಗಲು ಕಂಡೀಷನ್ ಹಾಕಿದ ಅನುಷ್ಕಾ ಶೆಟ್ಟಿ
ನಟಿ ಅನುಷ್ಕಾ ಶೆಟ್ಟಿ ತಮ್ಮ ಮದುವೆಯ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಮದುವೆಯ ಬಗ್ಗೆ ಮಾತನಾಡುತ್ತ ನಟಿ ನಾನು ಖಂಡಿತ ಮದುವೆಯಾಗುತ್ತೇನೆ ಆದರೆ ಒಂದು ಕಂಡೀಷನ್ ಎಂದಿದ್ದಾರೆ. ಅನುಷ್ಕಾ ಅಭಿಮಾನಿಗಳು ಮದುವೆಯ ಬಗ್ಗೆ ನಟಿ ಹಾಕಿರುವ ಕಂಡೀಷನ್ ಕೇಳಲು ಕುತೂಹಲರಾಗಿದ್ದಾರೆ. ಸಾಕಷ್ಟು ಬಾರಿ ನಟಿ ಅನುಷ್ಕಾ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಆದರೆ ಈ ಬಾರಿ ನಟಿಯ ಹೇಳಿಕೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

Join Nadunudi News WhatsApp Group

‘ಮದುವೆ, ಮಕ್ಕಳು, ಕೌಟುಂಬಿಕ ಸಂಬಂಧ ಇವೆಲ್ಲವೂ ತುಂಬಾ ಸುಂದರವಾಗಿರುತ್ತದೆ. ಹಿರಿಯರು ನಿಶ್ಚಯಿಸಿರುವ ಮದುವೇಆಗಲಿ, ಲವ್ ಮ್ಯಾರೇಜ್ ಆಗಲಿ ಅದರಲ್ಲಿ ಭಾವುಕತೆ ಇರಬೇಕು. ಮದುವೆ ಸ್ವಾಭಾವಿಕವಾಗಿ ನಡೆಯಬೇಕು ಮತ್ತು ಎಲ್ಲದ್ದಕ್ಕೂ ಸರಿಯಾದ ಸಮಯ ಬರುತ್ತದೆ ಎಂದು ನಾನು ನಂಬುತ್ತೇನೆ.

ಪ್ರೀತಿ ಮತ್ತು ಭಾವನೆಗಳಿಲ್ಲದೆ ಮದುವೆಯಾಗುವುದರಲ್ಲಿ ಅರ್ಥವಿಲ್ಲ. ತಡವಾದರೂ ಪರವಾಗಲಿಲ್ಲ, ಮದುವೆಗೆ ಭಾವನಾತ್ಮಕ ಬೆಸುಗೆ ಆಗಬೇಕು. ಎಲ್ಲಿಗೆ ಹೋದರು ಮದುವೆಯ ಬಗ್ಗೆಯೇ ಮಾತು, ಮದುವೆ ಆದಾಗ ಖಂಡಿತ ಎಲ್ಲರಿಗು ಹೇಳುತ್ತೇನೆ’ ಎಂದು ನಟಿ ಮದುವೆಯ ಬಗ್ಗೆ ತಮ್ಮ ಮನದಾಳದ ಮಾತಲ್ಲಿ ಉತ್ತರಿಸಿದ್ದಾರೆ.

Join Nadunudi News WhatsApp Group