Anushka Shetty: ಯಾರು ಊಹೆ ಮಾಡದ ನಿರ್ಧಾರ ತಗೆದುಕೊಂಡು ಅನುಷ್ಕಾ, ಬೆಸದರದಲ್ಲಿ ಫ್ಯಾನ್ಸ್.
ನಟಿ ಅನುಷ್ಕಾ ಶೆಟ್ಟಿ ಅವರ ಈ ನಿರ್ಧಾರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
Anushka Shetty Left Film Industry: ಟಾಲಿವುಡ್ ನ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ (Anushka Shetty) ಇದೀಗ ಬಾರಿ ಸುದ್ದಿಯಾಗಿದ್ದಾರೆ. ನಟಿ ಅನುಷ್ಕಾ ಶೆಟ್ಟಿ ಈ ಹಿಂದೆ ಮದುವೆಯ ವಿಚಾರವಾಗಿ ಸಾಕಷ್ಟು ಬಾರಿ ಸುದ್ದಿಯಲ್ಲಿದ್ದರು. ಬಾಹುಬಲಿ ನಟಿ ಅನುಷ್ಕಾ ಇದೀಗ ಸಿನಿಮಾ ವಿಚಾರವಾಗಿ ಸುದ್ದಿಯಾಗಿದ್ದಾರೆ.
ಇನ್ನು ನಟಿ ಈ ಹಿಂದೆ ಚಿತ್ರರಂಗದಿಂದ ದೂರ ಉಳಿದಿದ್ದರು. ಹೊಸ ಹೊಸ ಸಿನಿಮಾಗಳಲ್ಲಿ ನಟಿ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ. ಇತ್ತೀಚೆಗಷ್ಟೇ ಅನುಷ್ಕಾ ಸಿನಿಮಾಗಳಿಂದ ದೂರ ಉಳಿಯಲು ಕಾರಣ ಏನು ಎನ್ನುವ ಬಗ್ಗೆ ಕೂಡ ಮಾಹಿತಿ ಲಭಿಸಿದೆ.
ಚಿತ್ರರಂಗದಿಂದ ದೂರವಾಗಿದ್ದ ನಟಿ
ಟಾಲಿವುಡ್ ಪತ್ರಕರ್ತ ಚೇಯ್ಯರು ಬಾಲು ಅವರು ನಟಿ ಅನುಷ್ಕಾ ಶೆಟ್ಟಿ ಚಿತ್ರರಂಗದಿಂದ ದೂರ ಇರಲು ಕಾರಣ ಏನು ಎನ್ನುವುದನ್ನು ತಿಳಿಸಿದ್ದರು. ಅನುಷ್ಕಾ ಅಭಿನಯದ ಸೈಜ್ ಜೀರೋ ಸಿನಿಮಾ ಅನುಷ್ಕಾ ಅವರ ಸಿನಿ ಕರಿಯರ್ ಗೆ ದೊಡ್ಡ ತಿರುವನ್ನು ನೀಡಿದೆ. ಸಿನಿಮಾದ ಪಾತ್ರಕ್ಕೆ ಜೀವ ತುಂಬುವ ಸಲುವಾಗಿ ಅನುಷ್ಕಾ ತೂಕ ಹೆಚ್ಚಿಸಿಕೊಂಡಿದ್ದರು.
ಆ ಶೂಟಿಂಗ್ ಮುಗಿದ ಮೇಲೆ ನಿಜವಾದ ತಾಪತ್ರಯ ಶುರುವಾಯಿತು. ಆ ತೂಕ ಇಳಿಸಿಕೊಳ್ಳಲು ತುಂಬಾ ಕಷ್ಟಪಟ್ಟರು. ಕೆಲವರ ದೇಹದ ತೂಕ ಇಳಿಸುವ ಚಿಕಿತ್ಸೆ ಪಡೆಯಲು ಸಲಹೆ ನೀಡಿದರು. ಅದನ್ನು ಅವರು ಒಪ್ಪಲಿಲ್ಲ.
ಹೀಗಾಗಿ ದೇಹದ ತೂಕದಿಂದ ಅವರು ಎಷ್ಟೋ ತಿಂಗಳು ಮನೆ ಬಿಟ್ಟು ಆಚೆ ಬಂದಿರಲಿಲ್ಲ. ತೂಕ ಹೆಚ್ಚಾಗಿದ್ದ ಕಾರಣ ನಟಿ ಸಿನಿಮಾ ಹಾಗು ಸಾರ್ವಜನಿಕ ಬದುಕಿನಿಂದ ಹೊರಗೆ ಉಳಿದಿದ್ದರು. ಇನ್ನು ನಟಿ ಅನುಷ್ಕಾ ಅವರ ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ ಚಿತ್ರದ ಟೀಸರ್ ಬಿಡುಗಡೆಗೊಂಡಿದೆ. ಅನುಷ್ಕಾ ಅಭಿಮಾನಿಗಳು ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಆದರೆ ಈ ವೇಳೆ ನಟಿ ನಟಿ ಅನುಷ್ಕಾ ಅವರು ಸಿನಿ ಜರ್ನಿಗೆ ಫುಲ್ ಸ್ಟಾಪ್ ಇಡಲಿದ್ದಾರೆ ಎನ್ನುವ ಬಗ್ಗೆ ಸುದ್ದಿಗಳು ವೈರಲ್ ಆಗುತ್ತಿವೆ.
ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೆ ಬೇಸರದ ಸುದ್ದಿ
ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ ಚಿತ್ರದ ಮೇಲೆ ಅನುಷ್ಕಾ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ಇದೀಗ ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೆ ಬೇಸರದ ಸುದ್ದಿಯೊಂದು ಕೇಳಿಬಂದಿದೆ. ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ ಚಿತ್ರ ಅನುಷ್ಕಾ ನಟನೆಯ ಕೊನೆಯ ಚಿತ್ರ ಆಗಲಿದೆ ಎನ್ನುವ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ. ಕೊನೆಯಲ್ಲಿ ಒಳ್ಳೆ ಸಿನಿಮಾದ ಮೂಲಕ ಅನುಷ್ಕಾ ಶೆಟ್ಟಿ ಚಿತ್ರರಂಗಕ್ಕೆ ವಿದಾಯ ಹೇಳಲಿದ್ದಾರೆ ಎನ್ನುವ ಗಾಸಿಪ್ ಹರಿದಾಡುತ್ತಿದೆ.
ಇನ್ನು ಆಗಸ್ಟ್ ಮೊದಲ ವಾರದಲ್ಲೇ ಬಿಡುಗಡೆ ಆಗಬೇಕಿದ್ದ ಅನುಷ್ಕಾ ಮೂವಿ ಮುಂದೂಡಲ್ಪಟ್ಟಿದೆ. ಅಷ್ಟಕ್ಕೂ ನಟಿ ಅನುಷ್ಕಾ ಚಿತ್ರರಂಗಕ್ಕೆ ವಿದಾಯ ಹೇಳಲು ಸೈಜ್ ಜೀರೋ ಚಿತ್ರವೇ ಕಾರಣ ಎನ್ನುವ ಬಗ್ಗೆ ಮಾಹಿತಿ ಕೇಳಿ ಬಂದಿದೆ. ಆದರೆ ನಟಿ ಅನುಷ್ಕಾ ಶೆಟ್ಟಿ ತವು ಚಿತ್ರರಂಗವನ್ನು ತೊರೆಯುತ್ತಿರುವ ಬಗ್ಗೆ ಯಾವುದೇ ಅಧಿಕೃತ ಘೋಷಣೆಯನ್ನು ಮಾಡಿಕೊಂಡಿಲ್ಲ. ತಮ್ಮ ಸಿನಿ ಕರಿಯರ್ ಗೆ ಬ್ರೇಕ್ ನೀಡುವುದರ ಬಗ್ಗೆ ಬಾಹುಬಲಿ ನಟಿ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವ ಬಗ್ಗೆ ಕಾದು ನೋಡಬೇಕಿದೆ.