Anushree About Marriage: ಮದುವೆಯ ಬಗ್ಗೆ ಮಾತನಾಡುತ್ತ ಕಣ್ಣೀರಿಟ್ಟ ನಿರೂಪಕಿ ಅನುಶ್ರೀ.
Anchor Anushree Instagram Live: ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ (Anchor Anushree) ಇದೀಗ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಅನುಶ್ರೀ ಅವರು ಯಾವುದೇ ಕಾರ್ಯಕ್ರಮದ ನಿರೂಪಣೆಗೆ ಹೋದರು ಕೂಡ ಸಾಮಾನ್ಯವಾಗಿ ಅವರಿಗೆ ಎದುರಾಗುವ ಪ್ರಶ್ನೆ ಎಂದರೆ ಅದು ನಿಮ್ಮ ಮದುವೆ ಯಾವಾಗ ಎನ್ನುವುದು.
ಈ ಬಾರಿ ಕೂಡ ಇವರಿಗೆ ಲೈವ್ (Instagram Live) ನಲ್ಲಿ ಈ ಪ್ರಶ್ನೆ ಎದುರಾಗಿದೆ. ಈ ಬಗ್ಗೆ ನಟಿ ತಮ್ಮ ಮನದಾಳದ ಮಾತುಗಳನ್ನಾಡಿದ್ದಾರೆ.
ಇನ್ಸ್ಟಾಗ್ರಾಮ್ ಲೈವ್ ನಲ್ಲಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ ಅನುಶ್ರೀ
ನಿರೂಪಕಿ ಅನುಶ್ರೀ ಅವರು ತಮ್ಮ ನಿರೂಪಣೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದಿದ್ದಾರೆ. ಮಾತಿನಲ್ಲೇ ಸಾಕಷ್ಟು ಜನರನ್ನು ಮೋಡಿ ಮಾಡುವ ಅನುಶ್ರೀ ಅವರಿಗೆ ಇನ್ಸ್ಟಾಗ್ರಾಮ್ ಲೈವ್ ನಲ್ಲಿ ಸಾಕಷ್ಟು ಪ್ರಶ್ನೆಗಳು ಎದುರಾಗಿದ್ದವು.
ಹಲವು ಪ್ರಶ್ನೆಗಳಲ್ಲಿ ಅವರ ಮದುವೆಯ ಕುರಿತಾದ ಪ್ರಶ್ನೆಯು ಒಂದಾಗಿತ್ತು. ಇದೀಗ ನಿರೂಪಕಿ ಅನುಶ್ರೀ ಅವರು ಮೊದಲ ಬಾರಿಗೆ ಮದುವೆಯ ಬಗ್ಗೆ ತಮ್ಮ ಮನದಾಳದ ಮಾತುಗನ್ನು ಆಡಿದ್ದಾರೆ.
ಮದುವೆಯ ಬಗ್ಗೆ ಮಾತನಾಡಿದ ನಿರೂಪಕಿ ಅನುಶ್ರೀ
ಮದುವೆ ಮಾಡಿಕೊಳ್ಳಲು ತುಂಬಾ ಸಮಯವಿದೆ. ಮೊದಲು ಕೆಲಸ ಮಾಡಿಕೊಳ್ಳೋಣ. ಮದುವೆ ಅನ್ನೋದು ಒಂದು ಸುಂದರ ಅನುಭವ ಹಾಗೆ ಯಾರನ್ನೋ ಮದುವೆ ಮಾಡಿಕೊಳ್ಳಲು ಆಗುವುದಿಲ್ಲ. ಪ್ಲೀಸ್ ನನ್ನ ಮದುವೆಯ ಬಗ್ಗೆ ಮಾತ್ರ ಕೇಳ್ಬೇಡಿ.
ಮದುವೆಯನ್ನು ಒಬ್ಬ ವ್ಯಕ್ತಿ ಯಾವಾಗ ಯಾಕೆ ಆಗ್ತಾರೆ ಗೊತ್ತಾ, ಮದುವೆ ಅನ್ನೋದು ಸುಂದರ ಅನುಭವ ಮದುವೆ ಜೀವನ ಪೂರ್ತಿ ಕಾಪಾಡಿಕೊಳ್ಳಬೇಕಾದ ಸಂಬಂಧ. ಈ ಸಂಬಂಧದ ಒಳಗೆ ಇಬ್ಬರು ಹೋಗಬೇಕು.
ಇದಕ್ಕೆಲ್ಲ ಸ್ವಲ್ಪ ಟೈಮ್ ಬೇಕು. ನಿಮಗೆ ಏಜ್ ಆಯ್ತು ಮದುವೆ ಆಗಿ ಅಂತಾರೆ ಹೀಗೆ ಹೇಳಿದ್ರು ಅಂತ ಮದುವೆ ಆಗಲು ಆಗಲ್ಲ. ಈ ವಿಚಾರವನ್ನು ನಮ್ಮ ದೇವರು ನಮ್ಮ ಕೊರಗಜ್ಜ ಮೇಲೆ ಬಿಡ್ತೀನಿ ದೇವರೇ ಎಲ್ಲ ನೋಡಿಕೊಳ್ತಾನೆ ಎಂದು ಅನುಶ್ರೀ ಹೇಳಿದ್ದಾರೆ.
ನನಗೆ ಯಾರಾದ್ರೂ ಬಿಟ್ಟು ಹೋಗ್ತಾರೆ ಅನ್ನೋ ಭಯವಿದೆ
ನನಗೆ ನನ್ನನು ಯಾರಾದರೂ ಬಿಟ್ಟು ಹೋಗ್ತಾರೆ ಅನ್ನೋ ಭಯವಿದೆ. ನನಗೆ ಆ ದುಃಖವನ್ನು ತಡೆಯುವ ಶಕ್ತಿ ಇಲ್ಲ ಎನ್ನುತ್ತಲೇ ಅನುಶ್ರೀ ಭಾವುಕರಾಗಿದ್ದಾರೆ. ಪ್ಲೀಸ್ ಇಂತಹ ವಿಚಾರವನ್ನು ಕೇಳಬೇಡಿ ಎಂದು ಹೇಳಿದ್ದಾರೆ.