Anushree And Shubha Poonja: ನಾಯಿಗೆ ಹಾಕುವ ಚಿಕನ್ ತಿಂದ ಅನುಶ್ರೀ, ಹಲವು ದಿನದ ಬಳಿಕ ಬೆಳಕಿಗೆ ಬಂತು.

Anchor Anushree And Actress Shubha Poonja: ಕರ್ನಾಟಕದ ಖ್ಯಾತ ನಿರೂಪಕಿ ಅನುಶ್ರೀ (Anchor Anushree) ತಮ್ಮ ನಿರೂಪಣೆ ಮಾತುಕತೆ ಮೂಲಕ ಅನೇಕ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಆಂಕರ್ ಅನುಶ್ರೀ ಯೂಟ್ಯೂಬ್ ಚಾನಲ್ ಅನ್ನು ಪ್ರಾರಂಭಿಸಿ ಸಕತ್ ಸದ್ದು ಮಾಡುತ್ತಿದ್ದಾರೆ.

ಇನ್ನು ಈ ಕಾರ್ಯಕ್ರಮಕ್ಕೆ ಫೆಬ್ರವರಿ 14 ಪ್ರೇಮಿಗಳ ದಿನದದಂದು ಸ್ಪೆಷಲ್ ಗೆಸ್ಟ್ ಆಗಿ ನಟಿ ಶುಭ ಪೂಂಜಾ (Shubha Poonja)ಮತ್ತು ಅವರ ಪತಿ ಸಾಮಂತ್ ಆಗಮಿಸಿದ್ದರು. ಈ ಸಂದರ್ಶನದ ವೇಳೆ ಫನ್ನಿ ಘಟನೆಗಳನ್ನು ಮೆಲುಕು ಹಾಕಿದ್ದಾರೆ.

Anushree And Shubha Poonja
Image Source: India Today

ಶುಭ ಪೂಂಜಾ ಮನೆಗೆ ಹೋದ ನಿರೂಪಕಿ ಅನುಶ್ರೀ
ನಿರೂಪಕಿ ಅನುಶ್ರೀ ಹಾಗು ನಟಿ ಶುಭ ಪೂಂಜಾ ಬಹುಕಾಲದ ಗೆಳತಿಯರು. ಇಬ್ಬರು ಸಹ ಮೂಲತಃ ಮಂಗಳೂರಿನವರಾಗಿದ್ದರಿಂದ ಒಬ್ಬರ ಮನೆಗೆ ಒಬ್ಬರು ಹೋಗಿ ಬರುತ್ತಿದ್ದರು.

ಒಂದು ದಿನ ಶುಭ ಪೂಂಜಾ ಅವರ ಮನೆಗೆ ಅನುಶ್ರೀ ಹೋಗಿದ್ದಾಗ ಅನುಶ್ರೀ ತಿನ್ನಲು ಏನಿದೆ ಅಂತ ಶುಭ ಪೂಂಜಾ ಅವರ ಹತ್ತಿರ ಕೇಳಿದ್ದಾರೆ. ಆಷ್ಟರಲ್ಲಿ ಶುಭ ಚಿಕನ್ ಮಾಡಿದ್ದೇನೆ. ಡೈನಿಂಗ್ ಟೇಬಲ್ ಮೇಲೆ ಇದೆ ತಿನ್ನು ಎಂದು ಹೇಳುತ್ತಾ ಬೇರೆ ಕೆಲಸ ಮಾಡಲೆಂದು ತೆರಳಿದ್ದಾರೆ.

Anushree And Shubha Poonja
Image Source: Instagram

ನಾಯಿಗೆ ಮಾಡಿಟ್ಟಿರುವ ಚಿಕನ್ ಸೇವಿಸಿದ ಅನುಶ್ರೀ
ಶುಭ ಪೂಂಜಾ ಹೇಳುತ್ತಿದ್ದಂತೆ ಡೈನಿಂಗ್ ಮೇಲಿದ್ದ ಚಿಕನ್ ಸಾಂಬಾರ್ ಅನ್ನು ಅನುಶ್ರೀ ಅನ್ನದ ಜೊತೆ ಸೇವಿಸಿದ್ದಾರೆ. ಉಪ್ಪು ಖಾರ ಸ್ವಲ್ಪಾನು ಇಲ್ಲ ಎನ್ನುತ್ತಾ ಅಸಮಾಧಾನ ಮಾಡಿಕೊಂಡು ತಿಂದಿದ್ದಾರೆ.

Join Nadunudi News WhatsApp Group

ಸ್ವಲ್ಪ ಸಮಯದ ಬಳಿಕ ನಟಿ ಶುಭ ಬಾಯಿ ಏನಿದು ನಿಮ್ಮ ಮನೆಯ ಚಿಕೆನ್ ಸಾರಿನಲ್ಲಿ ಉಪ್ಪು ಖಾರ ಸ್ವಲ್ಪಾನು ಇಲ್ಲ ಎಂದು ಅನುಶ್ರೀ ಹೇಳಿದ್ದಾರೆ.ಶುಭಾ ತಕ್ಷಣ ಡೈನಿಂಗ್ ಮೇಲಿರುವ ಪಾತ್ರೆಯ ಮುಚ್ಚಳ ತೆಗೆದು ನೋಡಿ, ಇದು ನಾಯಿಗೆ ಹಾಕಲು ಮಾಡಿಟ್ಟ ಚಿಕನ್ ಎಂದು ಹೇಳಿದ್ದಾರೆ.

Anushree And Shubha Poonja
Image Source: Instagram

ಇದೊಂದು ನೋವಿನ ಘಟನೆ ಎಂದು ಅನುಶ್ರೀ ಸಂದರ್ಶನದಲ್ಲಿ ತಮಾಷೆಯಾಗಿ ಹೇಳಿದ್ದಾರೆ. ಅಲ್ಲದೆ ನಾಯಿಗೆ ಹಾಕುವ ಚಿಕನ್ ಯಾರಾದರೂ ಡೈನಿಂಗ್ ಟೇಬಲ್ ಮೇಲೆ ಇಡುತ್ತಾರೆ ಎಂದು ನಗುತ್ತಲೇ ಶುಭ ಪೂಂಜಾ ಅವರನ್ನು ಪ್ರಶ್ನಿಸಿದ್ದಾರೆ.

Anushree And Shubha Poonja
Image Source: Instagram

Join Nadunudi News WhatsApp Group