APAAR ID Card: ಏನಿದು APAAR ID ಕಾರ್ಡ್…? ವಿದ್ಯಾರ್ಥಿಗಳ ಯಾವ ಯಾವ ಮಾಹಿತಿ ಈ ಕಾರ್ಡಿನಲ್ಲಿ ಇರುತ್ತದೆ…?
ಇನ್ನುಮುಂದೆ ದೇಶದ ವಿದ್ಯಾರ್ಥಿಗಳಿಗೆ Aadhaar Card ನ ಬದಲಾಗಿ ವಿಶಿಷ್ಟ ಗುರುತಿನ ಚೀಟಿ ನೀಡಲಾಗುತ್ತದೆ
APAAR ID- One Nation, One Student ID: ಸದ್ಯ ದೇಶದಲ್ಲಿ ವಿದ್ಯಾರ್ಥಿಗಳಿಗೆ Aadhaar Card ನ ಬದಲಾಗಿ ವಿಶೇಷ ದಾಖಲೆ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಇನ್ನುಮುಂದೆ ವಿದ್ಯಾರ್ಥಿಗಳಿಗೆ ಆಧಾರ್ ರೀತಿಯೇ ಹೊಸ ಗುರುತಿನ ಚೀಟಿ ನೀಡಲು ಸರ್ಕಾರ ಮುಂದಾಗಿದೆ.
ಸದ್ಯ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಗುರುತಿಗಾಗಿ ವಿಶೇಷ ID ದಾಖಲೆಯನ್ನು ನೀಡಲು ಹೊಸ ಯೋಜನೆಯನ್ನೇ ರೂಪಿಸಿದೆ. ವಿದ್ಯಾರ್ಥಿಗಳಿಗಾಗಿ ರಾಜ್ಯ ಸರ್ಕಾರ ಪರಿಚಯಿಸಿರುವ ಈ ಯೋಜನೆಯ ಬಗ್ಗೆ ಮಾಹಿತಿ ಇಲ್ಲಿದೆ.
One Nation, One Student ID
ಪೋಷಕರು ಒಪ್ಪಿಗೆ ಮೇರೆಗೆ ಶಾಲಾ ವಿದ್ಯಾರ್ಥಿಗಳು ಶೀಘ್ರದಲ್ಲೇ ತಮ್ಮದೇ ಆದ ವಿಶಿಷ್ಟ ಗುರುತಿನ ಸಂಖ್ಯೆಯನ್ನು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) 2020 ರ ಭಾಗವಾಗಿ ಕೇಂದ್ರ ಶಿಕ್ಷಣ ಸಚಿವಾಲಯವು ಪೂರ್ವ ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗೆ ಪ್ರತಿ ವಿದ್ಯಾರ್ಥಿಗೆ Automatic Permanent Academic Account Registry (APAAR) ಎಂಬ ‘One Nation, One Student ID’ ರಚಿಸಲು ಯೋಜಿಸಿದೆ ಎನ್ನಲಾಗಿದೆ. ದೇಶದ ವಿದ್ಯಾರ್ಥಿಗಳಿಗೆ ವಿಶಿಷ್ಟ ಗುರುತಿನ ಚೀಟಿ ನೀಡುವುದು ಸರ್ಕಾರದ ಉದ್ದೇಶವಾಗಿದೆ.
Automatic Permanent Academic Account Registry
APAAR ID, ಎಜುಕೇಶನ್ ಇಕೋಸಿಸ್ಟಮ್ ರಿಜಿಸ್ಟ್ರಿ ಅಥವಾ ಎಜುಲಾಕರ್ ಅನ್ನು ಜೀವಮಾನದ ID ಸಂಖ್ಯೆ ಎಂದು ಪರಿಗಣಿಸಲಾಗುತ್ತದೆ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಯಾಣ ಮತ್ತು ಸಾಧನೆಗಳನ್ನು ಟ್ರ್ಯಾಕ್ ಮಾಡುತ್ತದೆ. APAAR ID 12 ಅಂಕಿಗಳನ್ನು ಹೊಂದಿದ್ದು, ಪ್ರತಿ ವಿದ್ಯಾರ್ಥಿಯ ಸಂಪೂರ್ಣ ವಿವರವನ್ನು ಡಿಜಿಟಲ್ ರೂಪದಲ್ಲಿ ಇರಿಸಲಾಗುತ್ತದೆ. 12 ಅಂಕಿಯ ಕಾರ್ಡ್ ಸಂಖ್ಯೆಯಲ್ಲಿ QR Code ಕೂಡ ಇರಲಿದೆ.
ವಿದ್ಯಾರ್ಥಿಯ APAAR ID ಹೇಗಿರಲಿದೆ..?
ವಿದ್ಯಾರ್ಥಿಯ ಹೆಸರು, ವರ್ಗ, ಶಾಲೆ, ಬ್ಯಾಚ್ ಹಾಗೂ ರಾಜ್ಯದ ಮಾಹಿತಿಯನ್ನು APAAR ID ಯಲ್ಲಿ ನಮೂದಿಸಲಾಗುತ್ತದೆ. ಆಧಾರ್ ಕಾರ್ಡ್ ನೋಂದಣಿ ಹಾಗೂ ವಿದ್ಯಾರ್ಥಿಯ ಪೋಷಕರ ಮೊಬೈಲ್ ಸಂಖ್ಯೆ APAAR ID ನೋಂದಣಿಗೆ ಅಗತ್ಯ. ಶಿಕ್ಷಣ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿದ್ಯಾರ್ಥಿಗಳಿಗೆ APAAR ID ಗಳನ್ನು ರಚಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ನಿರ್ದೇಶಿಸಿದೆ. APAAR ID ಆಧಾರ್ ರೀತಿಯೇ ಇರಲಿದ್ದು, ಇದು ವಿದ್ಯಾರ್ಥಿಗಳಿಗೆ ಆಧಾರ್ ನ ಪರ್ಯಾಯವಾಗುವುದಿಲ್ಲ. ಆಧಾರ್ ಗೆ ಹೆಚ್ಚುವರಿಯಾಗಿ ವಿದ್ಯಾರ್ಥಿಗಳಿಗೆ ಇದನ್ನು ನೀಡಲಾಗುತ್ತದೆ.