Foldable iPhone: ಇನ್ಮುಂದೆ ಐಫೋನ್ ಅನ್ನು ಕೂಡ ಫೋಲ್ಡ್ ಮಾಡಿ ಪಾಕೆಟ್ ನಲ್ಲಿ ಇಡಬಹುದು, ಆಪಲ್ ನಿಂದ ಹೊಸ ಮೊಬೈಲ್ ಲಾಂಚ್

ಸ್ಮಾರ್ಟ್ ಫೋನ್ ಗಳಿಗೆ ನೇರ ಪೈಪೋಟಿ ನೀಡಲಿದೆ ಫೋಲ್ಡಬಲ್ ಐಫೋನ್.

Apple Foldable Device: ಸದ್ಯ ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸದ ಸ್ಮಾರ್ಟ್ ಫೋನ್ ಗಳು ಲಭ್ಯವಿದೆ. ದೇಶದ ಜನಪ್ರಿಯ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳು ವಿವಿಧ ಮಾದರಿಯ ಸ್ಮಾರ್ಟ್ ಫೋನ್ ಗಳನ್ನೂ ಲಾಂಚ್ ಮಾಡುತ್ತಿವೆ.

ಸದ್ಯ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಫೋನ್ ಗಳ ಬೇಡಿಕೆ ಹೆಚ್ಚಿದೆ ಎನ್ನಬಹುದು. ಇತ್ತೀಚೆಗಂತೂ ಮಾರುಕಟ್ಟೆಯಲ್ಲಿ Foldable Smartphone ಗಳ ಅಬ್ಬರ ಜೋರಾಗಿಯೇ ನಡೆಯುತ್ತಿದೆ. ಇದೀಗ ದೇಶದ ದುಬಾರಿ ಬ್ರಾಂಡ್ ಆಗಿರುವ Apple ಕಂಪನಿಯು ಹೊಸ ವಿನ್ಯಾಸದ ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಲು ನಿರ್ಧರಿಸಿದೆ.

Apple Foldable Device Launch
Image Credit: Economic Times

Apple ಕಂಪನಿ ಸದ್ಯದಲ್ಲೆ ಪರಿಚಯಿಸಲಿದೆ ಫೋಲ್ಡಬಲ್ ಐಫೋನ್
ಮಾರುಕಟ್ಟೆಯಲ್ಲಿ ಐಫೋನ್ ಮಾದರಿಗಳಿಗೆ ಇರುವ ಕ್ರೇಜ್ ಬೇರೆ ಫೋನ್ ಗಳಿಗೆ ಇಲ್ಲ ಎನ್ನಬಹುದು. ಐಫೋನ್ ಸ್ವಲ್ಪ ದುಬಾರಿಯಾದರೂ ಜನರು ಹೆಚ್ಚಾಗಿ ಐಫೋನ್ ಅನ್ನು ಖರೀದಿಸಲು ಬಯಸುತ್ತಾರೆ. ಸದ್ಯ ದೇಶದಲ್ಲಿ Apple ಕಂಪನಿಯು Foldable Smartphone ಗಳ ವಿಭಾಗದಲ್ಲಿ ನೂತನವಾಗಿ ಹೊಸ ಫೋಲ್ಡಬಲ್ ಮಾದರಿಯನ್ನು ಪರಿಚಯಿಸಲು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಸದ್ಯದಲ್ಲೇ Apple ಕಂಪನಿಯು ಫೋಲ್ಡಬಲ್ ಐಫೋನ್ ಅನ್ನು ಅನಾವರಣ ಮಾಡಲಿದೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ.

ಸ್ಯಾಮ್ ಸಂಗ್ ಫೋಲ್ಡಬಲ್ ಸ್ಮಾರ್ಟ್ಫೋನ್ ಗೆ ಠಕ್ಕರ್ ನೀಡಲು Apple ರೆಡಿ
ದೇಶದಲ್ಲಿ Apple ಕಂಪನಿಯು 2026 ಅಥವಾ 2027 ರಲ್ಲಿ Foldable Device ಅನಾವರಣ ಮಾಡಲಿದೆ. Apple Foldable Device ಗಳು ಸರಿಸುಮಾರು 7 ರಿಂದ 8 ಇಂಚಿನ ಡಿಸ್ಪ್ಲೇ ಹೊಂದಿರಲಿದೆ. ಮಾರುಕಟ್ಟೆಯಲ್ಲಿ Foldable ಐಫೋನ್ ಡಿವೈಸ್ ಗಳು ಎಂಟ್ರಿ ಕೊಟ್ಟರೆ ಈಗಾಗಲೇ ಮಾರುಕಟ್ಟೆಯಲ್ಲಿ ಸ್ಥಾನ ಪಡೆದಿರುವ ಸ್ಯಾಮ್ ಸಂಗ್ ಕಂಪನಿಯ ಫೋಲ್ಡಬಲ್ ಸ್ಮಾರ್ಟ್ ಫೋನ್ ಗಳಿಗೆ ನೇರ ಪೈಪೋಟಿ ನೀಡಲಿದೆ.

Apple Foldable Device
Image Credit: Tomsguide

Apple Foldable Device ಗಳು ಮಾರುಕಟ್ಟೆಯಲ್ಲಿ Samsung Galaxy Z Fold 5 ಸ್ಮಾರ್ಟ್ ಫೋನ್ ಗಳೊಂದಿಗೆ ಪೈಪೋಟಿಗಿಳಿಯುವುದರಲ್ಲಿ ಯಾವುದೇ ಸಂದೇಹವಿಲ್ಲ. ಭವಿಷ್ಯದಲ್ಲಿ ಹೊಸ ಹೊಸ ತಂತ್ರಜ್ಞಾನಗಳು ರೂಪುಗೊಳ್ಳಲಿದ್ದು, ಸದ್ಯ Apple ಕಂಪನಿಯು ಈಗಲೇ ಒಂದು ಹೆಜ್ಜೆ ಮುಂದೆ ಇಟ್ಟಿದೆ ಎನ್ನಬಹುದು. ಇನ್ನು Apple ತನ್ನ ಫೋಲ್ಡಬಲ್ ಸ್ಮಾರ್ಟ್ ಫೋನ್ ನ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲವಾದರೂ, ಶೀಘ್ರದಲ್ಲೇ ಈ ಹೊಸ ಆವಿಷ್ಕಾರದ ಬಗ್ಗೆ ಮಾಹಿತಿ ಹೊರಬೀಳಲಿದೆ.

Join Nadunudi News WhatsApp Group

Join Nadunudi News WhatsApp Group