iPhone Discount: ದಸರಾ ಬೆನ್ನಲ್ಲೇ ದೀಪಾವಳಿ ಹಬ್ಬದ ಆಫರ್ ಘೋಷಣೆ, ಕೇವಲ 25 ಸಾವಿರಕ್ಕೆ ಖರೀದಿಸಿ ಐಫೋನ್.

ಐಫೋನ್ ಮೇಲೆ ದಿವಾಳಿ ಆಫರ್ ಘೋಷಣೆ ಆಗಿದ್ದು ಜನರು ಕಡಿಮೆ ಬೆಲೆಗೆ ಖರೀದಿ ಮಾಡಬಹುದು.

Apple iPhone 14 Price In Flipkart Dussehra Sale: ದೇಶದ ಜನಪ್ರಿಯ ಇ- ಕಾಮರ್ಸ್ ಫ್ಲಾಟ್ ಫಾರ್ಮ್ ಆಗಿರುವ Flipkart ಸದ್ಯ ಜನರಿಗಾಗಿ ಆಕರ್ಷಕ ರಿಯಾಯಿತಿಯನ್ನು ಪರಿಚಯಿಸುತ್ತಿದೆ. ಸದ್ಯ ದೇಶದಲ್ಲಿ iPhone ಮಾದರಿಗಳು ಹೆಚ್ಚಿನ ಟ್ರೆಂಡ್ ನಲ್ಲಿದೆ ಎನ್ನಬಹುದು. ಹೀಗಾಗಿ ಹೆಚ್ಚಿನ ಜನರು iPhone ಖರೀದಿಸಲು ಇಷ್ಟಪಡುತ್ತಾರೆ.

ಇನ್ನಿತರ ಸ್ಮಾರ್ಟ್ ಫೋನ್ ಗಳಿಗಿಂತ ಎಲ್ಲದರಲ್ಲೂ ವಿಶೇಷ ಫೀಚರ್ ಹೊಂದಿರುವ iPhone ಬಳಸಲು ಯಾರಿಗೇ ಇಷ್ಟ ಇರುವುದಿಲ್ಲ. ಎಲ್ಲರು ಕೂಡ ಒಮ್ಮೆಯಾದರೂ iPhone ಖರೀದಿಸಬೇಕು ಎಂದು ಬಯಸುತ್ತಾರೆ. ಇದೀಗ ನೀವು iPhone 14 ಅನ್ನು Flipkart ನಲ್ಲಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.

Apple iPhone 14 Price
Imager Credit: Apanabihar

ಫ್ಲಿಪ್ ಕಾರ್ಟ್ ದಸರಾ ಮಾರಾಟದಲ್ಲಿ Apple iPhone 14 ಬೆಲೆ
Apple iPhone 14 ನ ಮೂಲ ಬೆಲೆ 79,900 ರೂಪಾಯಿ ಆಗಿದೆ. iPhone 14 ಅನ್ನು ಫ್ಲಿಪ್ ಕಾರ್ಟ್ ನಲ್ಲಿ 18 % ರಿಯಾಯಿತಿಯಲ್ಲಿ 64,999 ರೂಪಾಯಿಗೆ ಖರೀದಿಸಬಹುದಾಗಿದೆ. Apple iPhone 14 ಮೇಲೆ ಬ್ಯಾಂಕ್ ಕೊಡುಗೆಗಳು ಸಹ ಲಭ್ಯವಿದೆ. ಕೋಟಾಕ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ದಾರರು 5,000 ಕ್ಕಿಂತ ಹೆಚ್ಚಿನ ಆರ್ಡರ್‌ಗಳಿಗೆ 1,250 ರೂ.ಗಳವರೆಗೆ ಹೆಚ್ಚುವರಿ 10 ಪ್ರತಿಶತ ರಿಯಾಯಿತಿ ಪಡೆಯಬಹುದು.

ಹಾಗೆ Apple iPhone 14 ಮೇಲೆ ಎಕ್ಸ್ ಚೇಂಜ್ ಆಫರ್ ಕೂಡ ಇದೆ. ವಿನಿಮಯ ಕೊಡುಗೆಯಲ್ಲಿ 39,150 ರೂ. ವರೆಗೆ ಉಳಿಸಬಹುದಾಗಿದೆ. ಇದು ಹೆಚ್ಚು ಬೇಡಿಕೆಯಿರುವ iPhone 14 Plus ನ ಪರಿಣಾಮಕಾರಿ ವೆಚ್ಚವನ್ನು 24,599 ಕ್ಕೆ ತಂದಿಡುತ್ತದೆ.

Apple iPhone 14 Price In Flipkart Dussehra Sale
Image Credit: Moneycontrol

Apple iPhone 14 Feature
Apple iPhone 14 6.1 ಇಂಚಿನ FHD+ ಡಿಸ್‌ಪ್ಲೇ ಅನ್ನು ಹೊಂದಿದೆ. ಹಾಗೆಯೇ ಈ iPhone ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದ್ದು, ಪ್ರಾಥಮಿಕ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಇನ್ನು ಮುಂಭಾಗದಲ್ಲಿ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾ ಸೌಲಭ್ಯವನ್ನು ಕೂಡ ಒಳಗೊಂಡಿದೆ. iPhone 14 ಮಿಡ್‌ನೈಟ್, ಪರ್ಪಲ್, ಸ್ಟಾರ್‌ಲೈಟ್, ಉತ್ಪನ್ನ ಕೆಂಪು ಮತ್ತು ನೀಲಿ ಬಣ್ಣದ ಆಯ್ಕೆಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ.

Join Nadunudi News WhatsApp Group

Join Nadunudi News WhatsApp Group