Apple Pay: ಐಫೋನ್ ಬಳಸುವವರಿಗೆ ಗುಡ್ ನ್ಯೂಸ್, ಇನ್ನುಮುಂದೆ ನಿಮಗೆ ಗೂಗಲ್ ಪೆ, ಫೋನ್ ಪೆ ಬೇಕಾಗಿಲ್ಲ.

ಫೋನ್ ಪೆ, ಗೂಗಲ್ ಪೆಗೆ ಠಕ್ಕರ್ ಕೊಡಲು ಭಾರತದಲ್ಲಿ ಬಿಡುಗಡೆಯಾಗುತ್ತಿದೆ ಆಪಲ್ ಪೆ.

Apple Pay App: ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರು ಡಿಜಿಟಲ್ ಮೂಲಕ ಎಲ್ಲ ವ್ಯವಹಾರಗಳನ್ನು ನಡೆಸುತ್ತಾರೆ. ಕೈಯಲ್ಲಿ ನಗದು ಹಣವಿಲ್ಲದಿದ್ದರೂ ಕೂಡ ಮೊಬೈಲ್ ನಲ್ಲಿ ಗೂಗಲ್ ಪೆ, ಫೋನ್ ಪೆ, ಪೆಟಿಎಂ ನ ಮೂಲಕ ಹಣವನ್ನು ಪಾವತಿಮಾಡುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಯುಪಿಐ ವಹಿವಾಟುಗಳು (UPI Payment) ಹೆಚ್ಚಾಗುತ್ತಿದೆ. ಯಾವುದೇ ರೀತಿಯ ಹಣಕಾಸಿನ ವ್ಯವಹಾರಗಳಿಗೆ ಯುಪಿಐ ವಹಿವಾಟುಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಂತೂ ಯುಪಿಐನಲ್ಲಿ ಅನೇಕ ಅಪ್ಡೇಟ್ ಗಳು ಬಂದಿವೆ. ಯುಪಿಐ ತನ್ನ ಸೇವೆಯನ್ನು ವಿಸ್ತರಿಸುತ್ತಾ ಹೋಗುತ್ತಿವೆ.

People can now use Apple Pay to transfer money
Image Credit: macworld

ಭಾರತದಲ್ಲಿ ಬಿಡುಗಡೆಯಾಗಲಿದೆ ಆಪಲ್ ಪೆ
ಇನ್ನು ಭಾರತದಲ್ಲಿ ಹೆಚ್ಚಿನ UPI ವಹಿವಾಟುಗಳಿಗೆ Google Pay ಮತ್ತು Phone Pay ಖಾತೆಯನ್ನು ಹೊಂದಿದೆ. ಇವುಗಳ ಮೂಲಕ ಜನರು ಹೆಚ್ಚಾಗಿ ನಗದು ರಹಿತ ವಹಿವಾಟು ನಡೆಸುತ್ತಿದ್ದಾರೆ. ಇದೀಗ ಆಪಲ್ ಗೂಗಲ್ ಪೆ, ಫೋನ್ ಪೆ ಗೆ ಠಕ್ಕರ್ ಕೊಡಲು ಆಪಲ್ ಪೆ ಅನ್ನು ಬಿಡುಗಡೆ ಮಾಡಲು ಭಾರತದಲ್ಲಿ ತಯಾರಿ ನಡೆಸಲಾಗುತ್ತಿದೆ.

ಆಪಲ್ ಪೆ ನ ವಿಶೇಷತೆ
ಆಪಲ್ ಪೆ ಬಿಡುಗಡೆಯಾದರೆ ಪ್ರಸ್ತುತ ಪಾವತಿ ಅಪ್ಲಿಕೇಶನ್ ಗಳಲ್ಲಿ ಹೆಚ್ಚಿನ ಪಾಲನ್ನು ಹೊಂದಿರುವ ಫೋನ್ ಪೆ, ಗೂಗಲ್ ಪೆ, ವಾಟ್ಸಾಪ್ ಪೆ,ಪೇಟಿಎಂ ಗಳೊಂದಿಗೆ ಸ್ಪರ್ದಿಸಬೇಕಾಗುತ್ತದೆ. ಆಪಲ್ ಸಿ ಇ ಓ ಟೈಮ್ ಕುಕ್ ಈಗಾಗಲೇ ಆಪಲ್ ಪೆ ಗಾಗಿ ಭಾರತೀಯ ಅಧಿಕಾರಿಗಳೊಂದಿಗೆ ಹಲವಾರು ಬಾರಿ ಭೇಟಿಯಾಗಿದ್ದಾರೆ. ಆಪಲ್ ಪೆ ಮೂಲಕ ಮೂರನೇ ವ್ಯಕ್ತಿಯ ಸಹಾಯವಿಲ್ಲದೆ QR ಕೋಡ್‌ ಗಳನ್ನ ಬಳಸಿಕೊಂಡು ಬಳಕೆದಾರರು UPI ವಹಿವಾಟುಗಳನ್ನ ಮಾಡಬಹುದು.

Apple company has now introduced Apple Pe for iPhone users.
Image Credit: apple

ಫೇಸ್ ಐಡಿ ವೈಶಿಷ್ಟ್ಯವನ್ನ ಬಳಸಿಕೊಂಡು ಬಳಕೆದಾರರು UPI ವಹಿವಾಟುಗಳನ್ನು ಮಾಡಬಹುದು ಅನ್ನುವುದನ್ನ ಖಚಿತಪಡಿಸಿಕೊಳ್ಳಲು Apple ಬಯಸುತ್ತದೆ. ಈ ವರ್ಷದ ಮಾರ್ಚ್ ತಿಂಗಳಲ್ಲಿ ಅಮೆರಿಕದಲ್ಲಿ apple pay ಲೇಟರ್ ಸೇವೆ ಆರಂಭವಾಗಿದೆ, ಈಗ ಖರೀದಿಸಿ ನಂತರ ಪಾವತಿಸಿ ಸೇವೆ ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲಿ ಕೂಡ ಈ ಸೇವೆ ಆರಂಭ ಆಗಲಿದ್ದು ಜನರು ಆಪಲ್ ಪೆ ಮೂಲಕ UPI ವಹಿವಾಟನ್ನ ಬಹಳ ಸುಲಭವಾಗಿ ಮಾಡಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group