iPhone Price: ಐಫೋನ್ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್, ಈ ಫೋನ್ ಗಳ ಬೆಲೆಯಲ್ಲಿ ಭರ್ಜರಿ ಇಳಿಕೆ
ಐಫೋನ್ ಬ್ರಾಂಡ್ ನಲ್ಲಿ ಭರ್ಜರಿ ಇಳಿಕೆ
Apple Reduces iPhone Prices In India: ದೇಶದೆಲ್ಲೆಡೆ ಐಫೋನ್ (iPhone) ಅತ್ಯಂತ ದುಬಾರಿ ಹಾಗೂ ಜನಪ್ರಿಯ ಮೊಬೈಲ್ ಆಗಿದೆ. ಇನ್ನು ಇನ್ನಿತರ ಮೊಬೈಲ್ ಫೋನ್ ಗಳಿಗೆ ಹೋಲಿಸಿದರೆ ಸಾಕಷ್ಟು ಅಪ್ಡೇಟೆಡ್ ಫೀಚರ್ ಗಳನ್ನೂ ನಾವು ಐಫೋನ್ ನಲ್ಲಿ ಕಾಣಬಹುದು.
ಆಪಲ್ ಕಂಪನಿಯು ಐಫೋನ್ ತಯಾರಿಸುವಲ್ಲಿ ಸಾಕಷ್ಟು ಸುರಕ್ಷಿತ ಫೀಚರ್ ಗಳನ್ನೂ ಕೂಡ ಅಳವಡಿಸಿರುತ್ತದೆ. ಇದೀಗ ಐಫೋನ್ ಪ್ರಿಯರಿಗೆ ಕಂಪನಿ ಗುಡ್ ನ್ಯೂಸ್ ನೀಡಿದೆ. ಹೌದು ಕಂಪನಿ ಐಫೋನ್ ಬ್ರಾಂಡ್ ನ ಬೆಲೆಯನ್ನು ಕಡಿಮೆ ಮಾಡಿದೆ. ಈ ಬಗ್ಗೆ ನಾವೀಗ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.
ಐಫೋನ್ ಬ್ರಾಂಡ್ ನಲ್ಲಿ ಭರ್ಜರಿ ಇಳಿಕೆ
ಭಾರತದ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಜುಲೈ 23 ರಂದು 2024 ರ ಬಜೆಟ್ ಮಂಡಿಸಿದ್ದಾರೆ. ಈ ಬಾರಿ ಬಜೆಟ್ ನಲ್ಲಿ ಮೊಬೈಲ್ ಫೋನ್ ಗಳ ಮೂಲ ಕಸ್ಟಮ್ಸ್ ಸುಂಕವನ್ನು ಶೇ. 20 ರಿಂದ 15 ರಷ್ಟು ಇಳಿಕೆ ಮಾಡಿರುವುದಾಗಿ ಘೋಷಣೆ ಹೊರಡಿಸಿದ್ದಾರೆ. ಆ ಬಳಿಕ ಐಫೋನ್ ತಯಾರಕ ಕಂಪನಿ ತನ್ನ ಪ್ರೊ ಮಾದರಿಗಳ ಬೆಲೆಯನ್ನು ಕಡಿಮೆ ಮಾಡಿದೆ. ಹೌದು ಆಪಲ್ ತನ್ನ ಎಲ್ಲ ಮಾದರಿಗಳ ಐಫೋನ್ ಗಳ ಬೆಲೆಗಳನ್ನು ಶೇ. 3 – 4 ರಷ್ಟು ಕಡಿತ ಮಾಡಿದೆ.
ಇದರಿಂದ ಗ್ರಾಹಕರು ಪ್ರೊ ಅಥವಾ ಪ್ರೊ ಮ್ಯಾಕ್ಸ್ ಮಾದರಿ ಖರೀದಿಯ ಮೇಲೆ 5100 ರಿಂದ 6000 ರೂ. ವರೆಗೆ ಉಳಿಸಬಹುದಾಗಿದೆ. ಐಫೋನ್ 13, 14 ಮತ್ತು 15 ಸೇರಿದಂತೆ ಇನ್ನು ಕೆಲವು ಮಾದರಿಯ ಐಫೋನ್‌ಗಳು ಮೇಲೆ 300 ರೂ. ಹಾಗೆ ಐಫೋನ್ SE ಮೇಲೆ 2300 ರೂಪಾಯಿಯನ್ನು ಕಡಿತ ಮಾಡಲಾಗಿದೆ. ಹಾಗೆ ಮೊಬೈಲ್ ಫೋನ್ ಗಳ ಹೊರತಾಗಿ ಮೊಬೈಲ್ ಫೋನ್ ಚಾರ್ಜರ್ ಗಳಿಗೆ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ ಜೋಡಣೆ ಕಸ್ಟಮ್ಸ್ ಸುಂಕವನ್ನು ಸಹ ಕಡಿತಗೊಳಿಸಲಾಗಿದೆ.
ಪ್ರಸ್ತುತ, ಭಾರತದಲ್ಲಿ ಮಾರಾಟವಾಗುವ ಆಮದು ಮಾಡಿದ ಸ್ಮಾರ್ಟ್ ಫೋನ್ ಗಳು ಶೇ. 18 ರಷ್ಟು GST ಮತ್ತು ಶೇ. 22 ರಷ್ಟು ಕಸ್ಟಮ್ಸ್ ಸುಂಕವನ್ನು ಪಾವತಿಸಬೇಕಾಗುತ್ತದೆ. ಇದರಲ್ಲಿ ಹೆಚ್ಚುವರಿ ಶುಲ್ಕ, ಮೂಲ ಕಸ್ಟಮ್ಸ್ ಸುಂಕ ಕಳೆದು ಶೇ. 10 ರಷ್ಟು ಉಳಿಯುತ್ತದೆ. ಬಜೆಟ್ ಕಡಿತದ ನಂತರ ಒಟ್ಟು ಕಸ್ಟಮ್ಸ್ ಸುಂಕವು ಶೇ. 16.5 ರಷ್ಟಾಗಿದೆ. ಇದರಲ್ಲಿ ಶೇ. 15% ಮೂಲ ಮತ್ತು ಶೇ. 1.5 ಹೆಚ್ಚುವರಿ ಶುಲ್ಕ ಸೇರಿದೆ. ಭಾರತದಲ್ಲಿ ತಯಾರಿಸಿದ ಫೋನ್‌ಗಳಿಗೆ ಕೇವಲ ಶೇ. 18 ರಷ್ಟು GST ವಿಧಿಸಲಾಗುತ್ತದೆ. ಪ್ರಸ್ತುತ ಭಾರತದಲ್ಲಿ ಮಾರಾಟವಾಗುವ ಶೇ.99 ರಷ್ಟು iPhone ಗಳನ್ನು ಸ್ಥಳೀಯವಾಗಿ ತಯಾರಿಸಲಾಗುತ್ತದೆ. ಆದರೆ ಆಯ್ದ ಉನ್ನತ ಮಟ್ಟದ ಮಾದರಿಗಳನ್ನು ಮಾತ್ರ ಆಮದು ಮಾಡಿಕೊಳ್ಳಲಾಗುತ್ತದೆ.