App Delete: ಇನ್ಮುಂದೆ Apple Store ಮತ್ತು Play Store ನಲ್ಲಿ ಸಿಗಲ್ಲ ಈ 2 App, ಎರಡು App ಡಿಲೀಟ್ ಮಾಡಿದ ಕೇಂದ್ರ ಸರ್ಕಾರ
ಆಪಲ್ ಸ್ಟೋರ್ ಮತ್ತು ಪ್ಲೇ ಸ್ಟೋರ್ ನ ಎರಡು ಅಪ್ಲಿಕೇಶನ್ ಡಿಲೀಟ್ ಮಾಡಿದ ಸರ್ಕಾರ
Apple Store And Play Store Application Delete: ಮೊಬೈಲ್ ಬಳಕೆದಾರರು ಖಂಡಿತವಾಗಿ ಈ ಸುದ್ದಿಯನ್ನು ತಿಳಿದುಕೊಳ್ಳಬೇಕು , ಇನ್ನು ಮುಂದೆ ನೀವು ಬಳಸುವ ಮೊಬೈಲ್ ನಲ್ಲಿ ಈ ಎರಡು ಆಪ್ ಗಳು ಕಾಣಸಿಗುವುದಿಲ್ಲ. ಈ ಕುರಿತು ಕೇಂದ್ರ ಸರ್ಕಾರ ಹೊಸ ಸೂಚನೆಯನ್ನು ನೀಡಿದೆ. ಗೂಗಲ್ ಮತ್ತು ಆಪಲ್ ಭಾರತದಲ್ಲಿನ ತಮ್ಮ ಅಪ್ಲಿಕೇಶನ್ ಸ್ಟೋರ್ ಗಳಿಂದ ಅಂತರರಾಷ್ಟ್ರೀಯ ಇ-ಸಿಮ್ ಸೇವೆಗಳನ್ನ ನೀಡುವ ಎರಡು ಅಪ್ಲಿಕೇಶನ್ ಗಳನ್ನೂ ತೆಗೆದುಹಾಕಿವೆ.
ದೂರಸಂಪರ್ಕ ಸಚಿವಾಲಯದ ಅಧೀನದಲ್ಲಿರುವ ದೂರಸಂಪರ್ಕ ಇಲಾಖೆಯ (DoT) ಆದೇಶದ ಮೇರೆಗೆ ಅಪ್ಲಿಕೇಶನ್ ಗಳನ್ನೂ ತೆಗೆದು ಹಾಕಲಾಗಿದೆ. ಸೈಬರ್ ವಂಚನೆಯನ್ನ ತಡೆಯುವ ಉದ್ದೇಶದಿಂದ ಅಪ್ಲಿಕೇಶನ್ ಗಳನ್ನೂ ತೆಗೆದುಹಾಕಲು ಡಿಒಟಿ ಸೂಚನೆ ನೀಡಿದೆ ಎಂದು ವರದಿಯಾಗಿದೆ.
ನಿಷೇಧಿಸಲಾದ ಎರಡು ಆಪ್ ಗಳ ಬಗ್ಗೆ ಮಾಹಿತಿ
ಕೆಲವು ನಿರ್ದಿಷ್ಟ ಕಾರಣದಿಂದ ಕೇಂದ್ರ ಸರ್ಕಾರ ದೇಶದಲ್ಲಿ ಈ ಎರಡು ಆಪ್ ಗಳನ್ನೂ ರದ್ದು ಮಾಡಿದ್ದೂ, ನಿಷೇಧಿತ ಅಪ್ಲಿಕೇಶನ್ ಗಳೆಂದರೆ ಐರಾಲೋ ಮತ್ತು ಹೊಲಾಫ್ಲಿ ಆಗಿದೆ. ಭಾರತೀಯ ಮಾರುಕಟ್ಟೆಗೆ ಗೂಗಲ್ ಪ್ಲೇ ಸ್ಟೋರ್ನಿಂದ ಈ ಅಪ್ಲಿಕೇಶನ್ ಗಳನ್ನೂ ತೆಗೆದುಹಾಕಲಾಗಿದೆ. ಎರಡೂ ಅಪ್ಲಿಕೇಶನ್ ಗಳು ಜಾಗತಿಕವಾಗಿ ವಿವಿಧ ಪ್ರದೇಶಗಳಲ್ಲಿ ಇ-ಸಿಮ್ ಸಕ್ರಿಯಗೊಳಿಸುವ ಟೆಲಿಕಾಂ ಸೇವೆಗಳನ್ನ ನೀಡುತ್ತವೆ.
ಗುರುವಾರ (ಜನವರಿ 4) ಡಿಒಟಿಯಿಂದ ಆದೇಶಗಳನ್ನ ಸ್ವೀಕರಿಸಿದ ನಂತರ ಕಂಪನಿಗಳು ಕ್ರಮ ಕೈಗೊಂಡಿವೆ. ಭಾರತದಲ್ಲಿ ಈ ಎರಡು ಅಪ್ಲಿಕೇಶನ್ ಗಳ ವೆಬ್ಸೈಟ್ ಗಳನ್ನೂ ನಿರ್ಬಂಧಿಸುವಂತೆ ಸರ್ಕಾರವು ಇಂಟರ್ನೆಟ್ ಸೇವಾ ಪೂರೈಕೆದಾರರು ಮತ್ತು ಟೆಲಿಕಾಂ ಕಂಪನಿಗಳಿಗೆ ಸೂಚಿಸಿದೆ. ಆದರೆ ಆಪಲ್ ಮತ್ತು ಗೂಗಲ್ ಈ ಎರಡೂ ಅಪ್ಲಿಕೇಶನ್ ಗಳನ್ನ ತೆಗೆದುಹಾಕುವ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ.
ಈ ಅಪ್ಲಿಕೇಶನ್ಗಳನ್ನ ನಿಷೇಧಿಸಲು ಕಾರಣ
ಇಂದಿನ ದಿನಗಳಲ್ಲಿ ಭಾರತದಲ್ಲಿ ಸೈಬರ್ ಅಪರಾಧಗಳನ್ನ ಮಾಡಲು ಮತ್ತು ನಾಗರಿಕರನ್ನ ವಂಚಿಸಲು ವಂಚಕರು ಅಂತರರಾಷ್ಟ್ರೀಯ ಫೋನ್ ಸಂಖ್ಯೆಗಳೊಂದಿಗೆ ಅನಧಿಕೃತ ಇ-ಸಿಮ್ ಗಳನ್ನ ಬಳಸಿಕೊಳ್ಳುತ್ತಿರುವುದು ಕಂಡುಬಂದಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಭೌತಿಕ ಸಿಮ್ ಕಾರ್ಡ್ ಅಗತ್ಯವಿಲ್ಲದೆ ಧ್ವನಿ ಕರೆ ಮತ್ತು ಇಂಟರ್ನೆಟ್ ಡೇಟಾ ಪ್ಯಾಕ್ಗಳಿಗಾಗಿ ಡಿಜಿಟಲ್ ಸಿಮ್ ಕಾರ್ಡ್ಗಳನ್ನು ನೀಡುವ ಇಸಿಮ್ ಪೂರೈಕೆದಾರರಿಗೆ ದೂರಸಂಪರ್ಕ ಇಲಾಖೆಯಿಂದ ನಿರಾಕ್ಷೇಪಣಾ ಪ್ರಮಾಣಪತ್ರ (NoC) ಅಗತ್ಯವಿದೆ.
ಆದಾಗ್ಯೂ, ನೋಮಾಡ್ ಇಸಿಮ್, ಅಲೋಸಿಮ್ನಂತಹ ಇತರ ಇ-ಸಿಮ್ ಪೂರೈಕೆದಾರರು ಭಾರತದ ಬಳಕೆದಾರರಿಗೆ ಈ ಅಪ್ಲಿಕೇಶನ್ ಸ್ಟೋರ್ ಗಳಲ್ಲಿ ಡೌನ್ಲೋಡ್ ಮಾಡಲು ಮತ್ತು ಬಳಸಲು ಇನ್ನೂ ಲಭ್ಯವಿದೆ. ಹಾಗಾಗಿ ಈ ಎರಡು ಅಪ್ಲಿಕೇಶನ್ ಅನ್ನು ರದ್ದು ಮಾಡುವುದರಿಂದ ಹಲವು ತೊಂದರೆಗಳಿಂದ ಜನಸಾಮಾನ್ಯರನ್ನು ಕಾಪಾಡಬಹುದಾಗಿದೆ.