Apple Smart Watch: ಗರ್ಭಿಣಿ ಮಹಿಳೆಯ ಪ್ರಾಣ ಉಳಿಸಿದ Apple ವಾಚ್, ಕೃತಜ್ಞತೆ ತಿಳಿಸಿದ ಮಹಿಳೆ.

Apple watch that saved the life of a pregnant woman: ಇದೀಗ ಮಾರುಕಟ್ಟೆಯಲ್ಲಿ ಸ್ಮಾರ್ಟ್ ವಾಚ್ (Smart Watch) ಗಳ ಹಾವಳಿ ಹೆಚ್ಚಾಗುತ್ತಿದೆ. ಹಲವಾರು ಉಪಯುಕ್ತ ಫೀಚರ್ ಗಳು ಸ್ಮಾರ್ಟ್ ವಾಚ್ ಗಳಲ್ಲಿ ಇದೀಗ ಲಭ್ಯವಿದೆ.

ಹೆಲ್ತ್ ಮೊನಿಟರ್, ಹಾರ್ಟ್ ಬೀಟ್ ಮೊನಿಟರ್ ಸೇರಿದಂತೆ ಸಾಕಷ್ಟು ಫೀಚರ್ ಗಳನ್ನೂ ಈಗಿನ ಸ್ಮಾರ್ಟ್ ವಾಚ್ ಗಳು ಹೊಂದಿವೆ. ಇದೀಗ ಆಪಲ್ ಸ್ಮಾರ್ಟ್ ವಾಚ್ ಅನ್ನು ಧರಿಸಿದ ಗರ್ಭಿಣಿ ಮಹಿಳೆ ತನ್ನ ಜೀವ ಉಳಿಸಿದ್ದಕಾಗಿ Apple ವಾಚ್ (Apple Watch) ಗೆ ಧನ್ಯವಾದ ತಿಳಿಸಿದ್ದಾರೆ.

Apple watch that saved the life of a pregnant woman
Image Credit: sierose

Apple ವಾಚ್ ಗೆ ಕೃತಜ್ಞತೆ ವ್ಯಕ್ತಪಡಿಸಿದ ಮಹಿಳೆ
ಅಸಹ ಹೃದಯ ಬಡಿತದ ಎಚ್ಚರಿಕೆಯೊಂದಿಗೆ ತನ್ನನ್ನು ಮತ್ತು ಹುಟ್ಟಲಿರುವ ಮಗುವಿನ ಜೀವವನ್ನು ಉಳಿಸಿದ್ದಕ್ಕಾಗಿ ಅಮೇರಿಕ ಮೂಲದ ಗರ್ಭಿಣಿ ಮಹಿಳೆಯೊಬ್ಬಳು Apple ವಾಚ್ ಗೆ ಧನ್ಯವಾದ ತಿಳಿಸಿದ್ದಾರೆ.

ಹೆರಿಗೆ ನಿಗದಿತ ದಿನಾಂಕಕ್ಕೆ ಕೆಲವು ವಾರಗಳ ಮೊದಲಿನಿಂದ ಜೆಸ್ಸಿ ಕೆಲ್ಲಿ ಅವರು ತಮ್ಮ ಹೃದಯ ಬಡಿತವನ್ನು ನಿಮಿಷಕ್ಕೆ 120 ಬೀಟ್ಸ್ ಹೆಚ್ಚಿಸುವಂತಹ ಯಾವುದೇ ಕೆಲಸ ಮಾಡಿರಲಿಲ್ಲ. ಅವರ Apple ವಾಚ್ ಹೃದಯ ಬಡಿತ ಹೆಚ್ಚಿದೆ ಎಂಬ ಎಚ್ಚರಿಕೆ ನೀಡಿತ್ತು ಎಂದು ವರದಿಯಾಗಿದೆ.

Apple Watch that provides information about the heart rate of a pregnant woman
Image Credit: abc7

ವಾಚ್ ಮೊದಲ ಬಾರಿ ಎಚ್ಚರಿಕೆ ನೀಡಿದಾಗ ಸಚಿತ್ರ ಎನಿಸಿತ್ತು, 10 ನಿಮಿಷಗಳ ನಂತರ ಎರಡನೇ ಸಲ ಮುನ್ನೆಚ್ಚರಿಕೆ ನೀಡಿದೆ. ಅರ್ಧ ಗಂಟೆ ಅಥವಾ ನಂತರದಲ್ಲಿ ಮೂರನೇ ಸಲ ಎಚ್ಚರಿಕೆ ನೀಡಿದೆ. ಹಾಗಾಗಿ ಜೆಸ್ಸಿ ಕೆಲ್ಲಿ (Jessi Kelli) ಅವರು ತಕ್ಷಣ ಆಸ್ಪತ್ರೆಗೆ ಧಾವಿಸಿದ್ದಾರೆ.

Join Nadunudi News WhatsApp Group

ಜೆಸ್ಸಿ ಕೆಲ್ಲಿ ಆಸ್ಪತ್ರೆಗೆ ಬಂದಾಗ ಅವರ ರಕ್ತದೊತ್ತಡ ಕಡಿಮೆಯಿತ್ತು. ಗರ್ಭಧಾರಣೆಯ ತೊಡಕಿನಿಂದ ರಕ್ತ ಕಳೆದುಕೊಳ್ಳುತ್ತಿರುವುದನ್ನು ಗಮನಿಸಿದ ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಮೂರು ಗಂಟೆಗಳ ನಂತರ ಅವರಿಗೆ ಶೆಲ್ಫಿ ಮೇರಿ ಎಂಬ ಹೆಣ್ಣು ಮಗು ಜನಿಸಿದೆ.

By wearing an Apple Watch you can know your heart rate
Image Credit: reddit

ಅಸಹ ಹೃದಯ ಬಡಿತದ ಎಚ್ಚರಿಕೆಯೊಂದಿಗೆ ತನ್ನನ್ನು ಮತ್ತು ಹುಟ್ಟಲಿರುವ ಮಗುವಿನ ಜೀವವನ್ನು ಉಳಿಸಿದ್ದಕ್ಕಾಗಿ ಅಮೇರಿಕ ಮೂಲದ ಗರ್ಭಿಣಿ ಮಹಿಳೆ ಜೆಸ್ಸಿ ಕೆಲ್ಲಿ ಅವರು Apple ವಾಚ್ ಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಎಲ್ಲರಿಗು ಕೂಡ Apple ವಾಚ್ ನೀಡುವ ಸೂಚನೆಯನ್ನು ಗಮನಿಸುವಂತೆ ಸಲಹೆ ನೀಡಿದ್ದಾರೆ.

Join Nadunudi News WhatsApp Group