Ration Card Apply: ಇಂತವರು ಏಪ್ರಿಲ್ 1 ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಬಹುದು, ಸರ್ಕಾರದಿಂದ ಹೊಸ ಅರ್ಜಿ ಆರಂಭ

ಇಂತವರು ಮಾತ್ರ ಏಪ್ರಿಲ್ 1 ರಿಂದ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದಾಗಿದೆ.

Application For New Ration Card: ಪ್ರಸ್ತುತ ದೇಶದಲ್ಲಿ Ration card ಎಷ್ಟು ಮುಖ್ಯ ಎನ್ನುವ ಬಗ್ಗೆ ಹೇಳುವ ಅಗತ್ಯವಿಲ್ಲ. ಇಂದಿನ ದಿನಗಳಲ್ಲಿ ರೇಷನ್ ಕಾರ್ಡ್ ಗೆ ಬಾರಿ ಮಹತ್ವವಿದ ಮತ್ತು ಇದಕ್ಕೆ ಕಾರಣ ಕೇಂದ್ರ ಮತ್ತು ರಾಜ್ಯ ಸರ್ಕಾರ ಯಾವುದೇ ಯೋಜನೆಯನ್ನು ಬಿಡುಗಡೆ ಮಾಡಿದರೂ ಕೂಡ ಅದರ ಮೊದಲ ಫಲಾನುಭವಿಗಳು ರೇಷನ್ ಕಾರ್ಡ್ ಹೊಂದಿರಬೇಕಾಗುತ್ತದೆ. ಹೀಗಾಗಿ ಎಲ್ಲರು ಕೂಡ ರೇಷನ್ ಕಾರ್ಡ್ ಹೊಂದುವುದು ಅಗತ್ಯವಾಗಿದೆ.

ಇನ್ನು ರಾಜ್ಯ ಸರ್ಕಾರ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಹಾಗೂ ಹೊಸ ರೇಷನ್ ಕಾರ್ಡ್ ವಿತರಣೆಯ ಬಗ್ಗೆ ಆಗಾಗ ಅಪ್ಡೇಟ್ ನೀಡುತ್ತಾ ಇರುತ್ತದೆ. ಇನ್ನು ಮಾರ್ಚ್ 31 ರೊಳಗೆ ಎಲ್ಲ ಅರ್ಜಿಯನ್ನು ಪರಿಶೀಲಿಸಿ ಏಪ್ರಿಲ್ 1 ರಿಂದ ಹೊಸ ಪಡಿತರ ವಿತರಣೆ ಮಾಡಲಾಗುತ್ತದೆ ಎಂದು ರಾಜ್ಯ ಆಹಾರ ಇಲಾಖೆ ಮಾಹಿತಿ ನೀಡಿದೆ. ಸದ್ಯ ಇದೀಗ ಹೊಸ ಆದ್ಯತಾ ಪಡಿತರ ಚೀಟಿಗೆ ಅರ್ಜಿ ಆಹ್ವಾನ ಮಾಡಲಾಗಿದು, ಈ ದಿನಾಂಕದಿಂದ ಹೊಸ ಆದ್ಯತಾ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

Application For New Ration Card
Image Credit: Informal News

ಇಂತವರು ಏಪ್ರಿಲ್ 1 ರಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು
ಹೊಸ ಆದ್ಯತಾ ಪಡಿತರ ಚೀಟಿಗಾಗಿ ಬಂದಿರುವ 2,95,986 ಅರ್ಜಿಗಳನ್ನು ಮಾರ್ಚ್ 31 ರೊಳಗೆ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ. ಇದುವರೆಗೆ 57,651 ಮತ್ತು ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ 744 ಕಾರ್ಡ್‌ಗಳನ್ನು ವಿತರಿಸಲಾಗಿದೆ. ಬಾಕಿ ಉಳಿದಿರುವ ಹೊಸ ಆದ್ಯತಾ ಪಡಿತರ ಚೀಟಿಗಳನ್ನು ಪರಿಶೀಲಿಸಿ ವಿಲೇವಾರಿ ಮಾಡುವಂತೆ ಜಂಟಿ/ಉಪ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ಈ ಅರ್ಜಿಗಳು ಸಲ್ಲಿಕೆಯಾಗಿದ್ದವು. ಚುನಾವಣೆ ಮತ್ತಿತರ ಕಾರಣಗಳಿಂದ ಈ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿತ್ತು. ಅವುಗಳ ವಿಲೇವಾರಿ ಪ್ರಗತಿಯಲ್ಲಿದೆ. ಅವುಗಳನ್ನು ಮಾರ್ಚ್ 31 ರೊಳಗೆ ವಿಲೇವಾರಿ ಮಾಡಲಿದ್ದು, ಏಪ್ರಿಲ್ 1 ರಿಂದ ಹೊಸ ಅರ್ಜಿಗಳನ್ನು ಆಹ್ವಾನಿಸಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಮಾಹಿತಿ ನೀಡಿದ್ದಾರೆ.

New Ration Card
Image Credit: Ease My Watch

ಇಂತವರು ಮಾತ್ರ ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಸಬಹುದು
•ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.

Join Nadunudi News WhatsApp Group

•ಈಗಾಗಲೇ ಪಡಿತರ ಚೀಟಿಯನ್ನು ಹೊಂದಿರಬಾರದು.

•ಹೊಸದಾಗಿ ಮದುವೆಯಾದ ದಂಪತಿಗಳು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಬಹುದು

•ಕುಟುಂಬದ ಆದಾಯದ ಆಧಾರದ ಮೇಲೆ ಕುಟುಂಬಕ್ಕೆ ಯಾವ ಪಡಿತರ ಚೀಟಿಯನ್ನು ನೀಡಬೇಕು ಎನ್ನುವುದನ್ನು ನಿರ್ಧರಿಸಲಾಗುತ್ತದೆ.

•ನೀವು https://ahara.kar.nic.in ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

Ration Card Latest Update
Image Credit: Original Source

ಈ ದಾಖಲೆ ಇದ್ದರೆ ಮಾತ್ರ ಅರ್ಜಿ ಸಲ್ಲಿಕೆ ಸಾಧ್ಯ
*ಮತದಾರರ ಗುರುತಿನ ಚೀಟಿ

*ಆಧಾರ್ ಕಾರ್ಡ್

*ವಯಸ್ಸಿನ ಪ್ರಮಾಣಪತ್ರ

*ಚಾಲನಾ ಪರವಾನಿಗೆ

*ಸ್ವಯಂ ಘೋಷಿತ ಪ್ರಮಾಣಪತ್ರ

*ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ

*ಮೊಬೈಲ್ ನಂ.

Join Nadunudi News WhatsApp Group