ಬಿಗ್ ಬಾಸ್ ಮನೆಯಲ್ಲಿ ದಿವ್ಯಾಗೆ ಲವ್ ಲೆಟರ್ ಬರೆದ ಅರವಿಂದ್, ಲೆಟರ್ ನಲ್ಲಿ ಏನಿದೆ ಗೊತ್ತಾ.

ಸದ್ಯ ಕನ್ನಡ ಕಿರುತೆರೆಯಲ್ಲಿ ಅತೀ ಹೆಚ್ಚು ಸುದ್ದಿಯಾಗುತ್ತಿರುವ ವಿಷಯ ಏನು ಅಂದರೆ ಅದೂ ಬಿಗ್ ಬಾಸ್ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ರಾತ್ರಿಯಾದರೆ ಸಾಕು ಹೆಚ್ಚಿನ ಜನರು ಬಿಗ್ ಬಾಸ್ ನೋಡುತ್ತಾರೆ ಎಂದು ಹೇಳಬಹುದು. ಇನ್ನು ಬಿಗ್ ಬಾಸ್ TRP ವಿಷಯದಲ್ಲಿ ಕೂಡ ಎಲ್ಲರಿಗಿಂತ ಮೇಲೆ ಇದೆ ಎಂದು ಹೇಳಬಹುದು, ಬಿಗ್ ಬಾಸ್ ಆರಂಭ ಆಗಿ ತಿಂಗಳು ಕಳೆದಿದ್ದು ಬಿಗ್ ಬಾಸ್ ಈಗ ರೋಚಕ ಹಂತವನ್ನ ತಲುಪಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಬಿಗ್ ಬಾಸ್ ನಲ್ಲಿ ಪ್ರೀತಿ ಪ್ರೇಮ ಆರಂಭ ಆಗಿದ್ದು ನೋಡುಗರ ತಮಾಷೆಗೆ ಕೂಡ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಸದ್ಯ ಬಿಗ್ ಬಾಸ್ ನೀಡುವ ಟಾಸ್ಕ್ ಗಳು ಕೂಡ ಬಹಳ ರೋಚಕವಾಗಿದ್ದು ಇದು ಜನರ ಮನರಂಜನೆಗೆ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ಬಿಗ್ ಬಾಸ್ ಸ್ಪರ್ಧಿಗಳಿಗೆ ಟಾಸ್ಕ್ ನೀಡಿದ್ದು ಈ ಟಾಸ್ಕ್ ನಲ್ಲಿ ಬಾಯ್ಸ್ ಹಾಸ್ಟೆಲ್ ನ ಹುಡುಗರು ಗರ್ಲ್ಸ್ ಹಾಸ್ಟೆಲ್ ನ ಹುಡುಗಿಯರಿಗೆ ಪತ್ರವನ್ನ ಬರೆದು ನೀಡಬೇಕು ಮತ್ತು ಅದನ್ನ ಹುಡುಗಿಯರು ಸಂಗ್ರಹ ಮಾಡಿ ಇಟ್ಟುಕೊಳ್ಳಬೇಕು ಅನ್ನುವ ಟಾಸ್ಕ್ ಅನ್ನು ಸ್ಪರ್ಧಿಗಳಿಗೆ ಬಿಗ್ ಬಾಸ್ ನೀಡಿತ್ತು. ಇನ್ನು ಟಾಸ್ಕ್ ನ ಅನುಸಾರವಾಗಿ ಬಿಗ್ ಬಾಸ್ ಮನೆ ಹುಡುಗರು ಕದ್ದುಮುಚ್ಚಿ ಪತ್ರವನ್ನ ಬರೆದು ಬಿಗ್ ಬಾಸ್ ಮನೆಯ ಹುಡುಗಿಯರಿಗೆ ನೀಡುತ್ತಿದ್ದಾರೆ, ಆದರೆ ವಿಶೇಷ ಏನು ಅಂದರೆ ಅರವಿಂದ್ ಅವರು ದಿವ್ಯಾ ಉರುಡುಗಗೆ ಮಾತ್ರ ತಮ್ಮ ಎಲ್ಲಾ ಲೆಟರ್‌ಗಳನ್ನು ಬರೆದಿದ್ದಾರೆ ಮತ್ತು ಅದನ್ನ ದಿವ್ಯ ಅವರಿಗೆ ನೀಡಿದ್ದಾರೆ.

Aravind love letter in Big boss

ಬಳಿಕ ಅದನ್ನು ಕ್ಯಾಮೆರಾ ಮುಂದೆ ದಿವ್ಯಾ ಅವರು ಪ್ರೀತಿಯ ಕೆ, ಮೊದಲನೇ ದಿನ ನನ್ನ ನಿನ್ನ ಚಿಕ್ಕ ಇಂಟ್ರೋಡಕ್ಷನ್‍ನಲ್ಲಿ ನೀನು ಏನೋ ಹೇಳಲು ಬಂದು ಹೇಳದೇ ಹೋದ ರೀತಿ, ಈಗ ನಾವು ಇರುವ ಕ್ಲೋಸ್‍ನೆಸ್ ಗೆ ತುಂಬಾನೇ ವ್ಯತ್ಯಾಸ ಇದೆ. ಈ ಮನೆಯಲ್ಲಿ ನನ್ನ ಮೊದಲನೆಯ ಸಪೋರ್ಟರ್, ಶುಭ ಹಾರೈಸುವ ಒಳ್ಳೆಯ ಗೆಳತಿ ನೀನು ಪ್ರೀತಿ ಇರಲಿ ಅರವಿಂದ್ ಕೆಪಿ ಎಂದು ಮೊದಲನೇ ಲೆಟರ್ ಓದುತ್ತಾರೆ. ಇನ್ನು ಇನ್ನೊಂದು ಲೆಟರ್ ನಲ್ಲಿ ಪ್ರೀತಿಯ ಕೆ, ಈ ಬಿಗ್‍ಬಾಸ್ ಮನೆಯ ಪಯಣ ನಿನ್ನ ಗೆಳೆತನದಿಂದ ಇನ್ನಷ್ಟು ಮಜಾ ಹಾಗೂ ಸಂತೋಷಕರವಾಗಿದೆ. ನಿನ್ನ ಪ್ರೆಸೆನ್ಸ್ ಇರುವುದರಿಂದ ಟಾಸ್ಕ್‌ಗಳಲ್ಲಿ, ದೈನಂದಿನ ಚಟುವಟಿಕೆಗಳಲ್ಲಿ ಲವಲವಿಕೆಯಿಂದ ಸಾಗುತ್ತಿದೆ. ನಿನ್ನ ಎಲ್ಲ ವಿಚಾರಗಳು ನನಗೆ ಇಷ್ಟ, ನೀನು ನಗುವಾಗ ತುಂಬಾನೇ ಇಷ್ಟ. ಪ್ರೀತಿ ಇರಲಿ ಅರವಿಂದ್ ಕೆ.ಪಿ. ಎಂದು ಬರೆದಿದ್ದಾರೆ ಮತ್ತು ಇದನ್ನು ಓದಿದ ದಿವ್ಯಾ ಸೋ ಕ್ಯೂಟ್ ಎಂದು ಪ್ರತಿಕ್ರಿಯಿಸುತ್ತಾರೆ.

ಇನ್ನು ಮೂರನೇ ಪತ್ರದಲ್ಲಿ ಪ್ರೀತಿಯ ಕೆ ನನ್ನ ಲೋವೆಸ್ಟ್ ಪಾಯಿಂಟ್‍ನಲ್ಲಿ ನನ್ನೊಂದಿಗೆ ನಿಂತು ನಡೆಸುವ ಸಪೋರ್ಟ್ ತುಂಬಾನೇ ಶ್ರೇಷ್ಠವಾದದ್ದು, ಬೇರೆ ಯಾವ ಸಂದರ್ಭದಲ್ಲಿಯೂ ಅಷ್ಟು ಬೇಜಾರು ಮಾಡಿಕೊಂಡಿಲ್ಲ. ನನ್ನ ಫ್ರೆಂಡ್ಸ್ ನನ್ನ ನಿರ್ಣಯವನ್ನು ತಪ್ಪು ಎಂದು ಭಾವಿಸಿದ್ದರು, ಆಗ ನನಗೆ ನೀನು, ನಿನಗೆ ನಾನು ಸಮಾಧಾನ ಹೇಳಿಕೊಂಡು ಕಳೆದಿರುವ ದಿನಗಳನ್ನು ಮರೆಯಲು ಸಾಧ್ಯವಿಲ್ಲ. ಪ್ರೀತಿ ಇರಲಿ ಅರವಿಂದ್ ಕೆ.ಪಿ ಎಂದು ಓದಿದ್ದಾರೆ.

Join Nadunudi News WhatsApp Group

Aravind love letter in Big boss

ಇನ್ನು ನಾಲ್ಕನೇ ಪತ್ರವನ್ನ ಓದಿದ ದಿವ್ಯ, ಪ್ರೀತಿಯ ಕೆ ನೀನು ನಗುತ್ತೀಯಾ ಹೃದಯದಿಂದ ನನಗೆ ಕೇಳುತ್ತದೆ. ಬಹಳ ದೂರದಿಂದ ನಿನ್ನ ಕಣ್ಣುಗಳು ಹೇಳುತ್ತಿದೆ ಮಾತೊಂದ, ಬೇಗ ಓದು ಗಾರ್ಡನ್ ಏರಿಯಾಗೆ ವಾರ್ಡನ್ ಬರುವ ಮುನ್ನ. ಪ್ರೀತಿ ಇರಲಿ ಅರವಿಂದ್ ಕೆ ಪಿ ಎಂದು ಹಾಸ್ಯವಾಗಿರುವ ಲೆಟರ್ ಓದಿ ಜೋರಾಗಿ ನಗುತ್ತಾರೆ. ಒಟ್ಟಾರೆ ನಿಜ ಹೇಳಬೇಕು ಅಂದರೆ ಲೆಟರ್‌ನಲ್ಲಿ ಅವರಿಬ್ಬರ ಇರುವ ಪ್ರೀತಿ ಭಾವನೆಗಳು ಎದ್ದು ಕಾಣಿಸುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು. ಸ್ನೇಹಿತರೆ ಈ ಪ್ರೀತಿಯ ಪತ್ರದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Join Nadunudi News WhatsApp Group