ಚಿತ್ರರಂಗದ ಖ್ಯಾತ ನಟ ಹೃದಯಾಘಾತಕ್ಕೆ ಬಲಿ, ಕಣ್ಣೀರಿನಲ್ಲಿ ಮುಳುಗಿದ ಇಡೀ ದೇಶದ ಚಿತ್ರರಂಗ.

ದೇಶದ ಚಿತ್ರರಂಗದ ಸಮಯ ಚನ್ನಾಗಿಲ್ಲ ಅನ್ನುವುದು ಮತ್ತೆ ಮತ್ತೆ ಸಾಭೀತಾಗುತ್ತಿದೆ ಎಂದು ಹೇಳಬಹುದು. ಹೌದು ಒಬ್ಬರಾದ ಮೇಲೆ ಒಬ್ಬರು ಖ್ಯಾತ ನಟ ನಟಿಯರು ಇಹಲೋಕವನ್ನ ತ್ಯಜಿಸುತ್ತಿದ್ದು ಇದು ಚಿತ್ರರಂಗದ ಪಾಲಿಗೆ ತುಂಬಲಾರದ ನಷ್ಟವನ್ನ ಉಂಟುಮಾಡಿದೆ. ಮೊನ್ನೆ ಮೊನ್ನೆ ತಾನೇ ಕನ್ನಡ ಚಿತ್ರರಂಗದ ಖ್ಯಾತ ಕಿರುತೆರೆ ನಟಿ ಸೌಜನ್ಯ ಅವರು ತಮ್ಮ ಪ್ರಾಣವನ್ನ ತಾವೇ ಕಳೆದುಕೊಂಡರು ಮತ್ತು ಇದು ಇಡೀ ಕರ್ನಾಟಕವನ್ನೇ ಕಣ್ಣೀರಿನಲ್ಲಿ ಮುಳುಗುವಂತೆ ಮಾಡಿತ್ತು. ಕಳೆದ ಎರಡು ವರ್ಷದಲ್ಲಿ ಚಿತ್ರರಂಗದ ಹಲವು ಗಣ್ಯ ನಟ ನಟಿಯರು ಇಹಲೋಕವನ್ನ ತ್ಯಜಿಸಿದ್ದು ಚಿತ್ರರಂಗ ಬರಿದಾಗುತ್ತಿದೆ. ಇನ್ನು ಈಗ ವಿಷಯಕ್ಕೆ ಬರುವುದಾದರೆ, ತನ್ನ ಪಾತ್ರದ ಮೂಲಕ ಇಡೀ ದೇಶವೇ ತನ್ನಕಡೇ ತಿರುಗಿ ನೋಡುವಂತೆ ಮಾಡಿದ್ದ ದೇಶದ ಖ್ಯಾತ ನಟ ಇಂದು ಹೃದಯಾಘಾತದಿಂದ ಇಹಲೋಕವನ್ನ ತ್ಯಜಿಸಿದ್ದು ಇಡೀ ದೇಶವೇ ಇವರ ಅಗಲಿಕೆಗೆ ಕಂಬನಿಯನ್ನ ಮಿಡಿದಿದೆ.

ಹಾಗಾದರೆ ಈ ಖ್ಯಾತ ನಟ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಟನ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ದೂರದರ್ಶನದ ಜನಪ್ರಿಯ ‘ರಾಮಾಯಣ’ ಧಾರಾವಾಹಿಯಲ್ಲಿ ‘ರಾವಣ’ ಪಾತ್ರದ ಮೂಲಕ ದೇಶಾದ್ಯಂತ ಮನೆಮಾತಾಗಿದ್ದ ಹಿರಿಯ ನಟ ಅರವಿಂದ ತ್ರಿವೇದಿ ಹೃದಯಾಘಾತದಿಂದ ಮಂಗಳವಾರ ರಾತ್ರಿ ನಿಧನರಾದರು. ನಟ ಅರವಿಂದ ತ್ರಿವೇದಿ ಅವರಿಗೆ 82 ವರ್ಷ ವಯಸ್ಸಾಗಿದ್ದು ದೇಶದಲ್ಲಿ ತಮ್ಮ ಪಾತ್ರದ ಮೂಲಕ ಅಪಾರವಾದ ಅಭಿಮಾನಿಗಳನ್ನ ಹೊಂದಿದ್ದರು.

Aravind trivedi

ಇನ್ನು ಎಬಿಪಿ ವರದಿ ಪ್ರಕಾರ ಹಿರಿಯ ನಟ ಅಸ್ವಸ್ಥರಾಗಿ ನಡೆದಾಡಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದರು. ಇನ್ನು ಅರವಿಂದ್ ಅವರ ಅಳಿಯ ಕೌಸ್ತುಭ್ ತ್ರಿವೇದಿ ಅವರು ಮಾವ ಕೆಲವು ವರ್ಷಗಳಿಂದ ಬಹಳ ಅಸ್ವಸ್ಥರಾಗಿದ್ದರು ಮತ್ತು ಕಳೆದ ಮೂರು ವರ್ಷಗಳಲ್ಲಿ ದೇಹಸ್ಥಿತಿ ಮತ್ತಷ್ಟು ಹದಗೆಟ್ಟಿತು ಮತ್ತು ಅಫಾರಂನ ಹಲವು ಬಾರಿ ಆಸ್ಪತ್ರೆಗೆ ಕೂಡ ದಾಖಲಿಸಿದ್ದೆವು ಎಂದು ಹೇಳಿದ್ದಾರೆ. ಮುಂಬೈನ ಕಂಡಿವಲಿಯಲ್ಲಿರುವ ನಿವಾಸದಲ್ಲಿ ರಾತ್ರಿ 9:30ರ ಸುಮಾರಿಗೆ ಹೃದಯಾಘಾತದಿಂದ ಅವರು ನಿಧನರಾಗಿದ್ದು, ಬುಧವಾರ ಅಂತ್ಯಸಂಸ್ಕಾರ ನಡೆಯಲಿದೆ. ರಮಾನಂದ ಸಾಗರ್ ನಿದೇರ್ಶನದ ರಾಮಾಯಣ 1987ರಲ್ಲಿ ದೂರದರ್ಶನದಲ್ಲಿ ಜನಪ್ರಿಯ ಧಾರಾವಾಹಿಯಾಗಿತ್ತು. ಕಳೆದ ವರ್ಷ ಲಾಕ್‌ಡೌನ್ ಅವಧಿಯಲ್ಲಿ ಮತ್ತೆ ಡಿಡಿ ನ್ಯಾಷನಲ್ ಇದನ್ನು ಮರುಪ್ರಸಾರ ಮಾಡಿತ್ತು.

ಇನ್ನು ನಟ ಅರವಿಂದ್ ಅವರ ಸಹನಟ ಸುನಿಲ್ ಲಾಹಿರಿ ಅವರು ಅರವಿಂದ್ ಅವರು ಮೃತಪಟ್ಟ ವಿಷಯವನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಬಹುತ್ ದುಖದ್ ಸಮಾಚಾರ್ ಹೈ ಕಿ ಹಮಾರೆ ಸಬ್ಕೆ ಪ್ಯಾರೆ ಅರವಿಂದ್ ಭಾಯ್ (ರಾಮಾಯಣದ ರಾವಣ) ಅಬ್ ಹಮಾರೆ ಬೀಚ್ ನಹೀ ರಹೇ ಭಗವಾನ್ ಉನ್ಕಿ ಆತ್ಮ ಕೊ ಶಾಂತಿ ದೇ ಎಂದು ಸಂತಾಪ ಸೂಚಿಸಿದ್ದಾರೆ ಮತ್ತು ತಂದೆ ಸಮಾನ, ಮಾರ್ಗದರ್ಶಕ, ಹಿತೈಷಿ ಹಾಗೂ ಸಭ್ಯರಾದ ಅರವಿಂದ್ ನಿಧನದಿಂದ ನಾನು ಸ್ತಂಭೀಭೂತನಾಗಿದ್ದೇನೆ ಎಂದು ದುಃಖಿಸಿದ್ದಾರೆ. ಇವರ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿ ಎಂದು ನಾವು ನೀವು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ.

Join Nadunudi News WhatsApp Group

Aravind trivedi

Join Nadunudi News WhatsApp Group