ದಿನಕ್ಕೆ 5 ಕೋಳಿ, 36 ಮೊಟ್ಟೆ ಮತ್ತು 5 ಲೀಟರ್ ಹಾಲು ಕುಡಿಯುವ ಈ ದೈತ್ಯ ವ್ಯಕ್ತಿಯ ತೂಕ ಎಷ್ಟು ಗೊತ್ತಾ, ನೋಡಿ ಕಲಿಯುಗದ ಭೀಮ.
ಆರೋಗ್ಯವೇ ಭಾಗ್ಯ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ ಆಗಿದೆ. ಇನ್ನು ನಾವು ಆರೋಗ್ಯವಾಗಿ ಇರಬೇಕು ಅಂದರೆ ನಮ್ಮ ತೂಕ ಕೂಡ ಆರೋಗ್ಯಕರವಾಗಿ ಇರಬೇಕು. ಹೌದು ಒಬ್ಬ ಮನುಷ್ಯ ಇಂತಿಷ್ಟು ತೂಕವನ್ನ ಇರಬೇಕು ಎಂದು ವೈದ್ಯಶಾಸ್ತ್ರ ಹೇಳುತ್ತದೆ ಮತ್ತು ಹೆಚ್ಚಿನ ತೂಕ ಆತನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನ ಕೂಡ ಬೀರುತ್ತದೆ. ಇನ್ನು ಕೆಲವರು ಬೇಕುಬೇಕು ಅಂತಾನೆ ತೂಕವನ್ನ ಹೆಚ್ಚಿಸಿಕೊಂಡು ಪ್ರಚಾರವನ್ನ ಪಡೆದುಕೊಳ್ಳುತ್ತಾರೆ ಎಂದು ಹೇಳಬಹುದು ಮತ್ತು ಕೆಲವರಿಗೆ ತಾನಾಗಿಯೇ ತೂಕ ಹೆಚ್ಚಾಗಿರುವುದನ್ನ ಕೂಡ ನಾವು ನೋಡಿರಬಹುದು. ಇನ್ನು ಈ ಭೂಮಿಯ ಮೇಲೆ ಹೆಚ್ಚಿನ ತೂಕವನ್ನ ಹೊಂದಿರುವವರನ್ನ ನಾವು ಬಹಳ ಜನ ನೋಡಿದ್ದೇವೆ ಎಂದು ಹೇಳಬಹುದು. ಇನ್ನು ಈಗ ಸದ್ಯ ಬಹಳ ಸುದ್ದಿಯನ್ನ ಇರುವ ತೂಕ ಮಾನವ ಅಂದರೆ ಅಂದರೆ ಅದೂ ಪಾಕಿಸ್ತಾನ ದೇಶದ ಹಲ್ಕ್ ಎಂದು ಹೇಳಬಹುದು.
ಸಾಮಾಜಿಕ ಜಾಲತಾಣದಲ್ಲಿ ಬಹಳ ಸುದ್ದಿಯಲ್ಲಿ ಇರುವ ಈ ಹಲ್ಕ್ ನ ತೂಕವನ್ನ ಕೇಳಿ ಇಡೀ ವಿಶ್ವವೇ ಶಾಕ್ ಆಗಿದೆ ಎಂದು ಹೇಳಬಹುದು. ಅಸಾಧಾರವನ್ನ ದೇಹವನ್ನ ಈ ಮಾನವ ಹೊಂದಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈತನ ತೂಕ ಬಹಳ ವೈರಲ್ ಆಗಿದೆ ಎಂದು ಹೇಳಬಹುದು. ಹಾಗಾದರೆ ಹಲ್ಕ್ ನ ತೂಕವೆಷ್ಟು ಮತ್ತು ಈತ ಇಷ್ಟು ತೂಕವಿರಲು ಕಾರಣ ಏನು ಅನ್ನವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈತನ ತೂಕದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಸ್ನೇಹಿತರೆ ನಾವು ತೋರಿಸುತ್ತಿರುವ ಅರ್ಬಾಬ್ ಖಿಝೆರ್ ಹಾಯತ್ ಹೆಸರಿನ ಈ ವ್ಯಕ್ತಿ ಖಾನ್ ಬಾಬಾ ಎಂಬ ಹೆಸರಿನಿಂದ ಫೇಮಸ್.
ಸಾಮಾಜಿಕ ಜಾಲತಾಣದಲ್ಲಿ ಈತನ ಎಲ್ಲಾ ವಿಡಿಯೋ ಮತ್ತು ಫೋಟೋಗಳು ಸಕ್ತ್ ವೈರಲ್ ಆಗತ್ತದೆ. ಖೈಬರ್ ಪ್ರಾಂತ್ಯದ ಅರ್ಬಾಬ್ ಖಿಝೆರ್ ಹಾಯತ್ ಅಲಿಯಾಸ್ ಖಾನ್ ಬಾಬಾ 18 ನೇ ವಯಸ್ಸಿನಲ್ಲಿ ಇದ್ದಾಗ ಈತನ ಬಹಳ ಹೆಚ್ಚಾಗಿ ಹೋಗಿತ್ತು, ಇನ್ನು ಅಂದು ಹೆಚ್ಚಾಗುತ್ತಾ ಹೋದ ಈತನ ತೂಕ ಹೆಚ್ಚಾಗುತ್ತಲೇ ಈಗ 436 ಕೆಜಿಗೆ ಬಂದು ತಲುಪಿದೆ. ಈ ರೀತಿ ಅತಿಯಾದ ತೂಕ ಇದ್ದರೂ ಖಾನ್ ಬಾಬಾಗೆ ಯಾವುದೇ ಸಮಸ್ಯೆ ಆಗುತ್ತಿಲ್ಲವಂತೆ ಮತ್ತು ಈತ ಹೇಳುವ ಪ್ರಕಾರ ತೂಕ ಏರಿಕೆ ಕಾರಣ ತಾಕತ್ತು ಬಹಳ ಹೆಚ್ಚಾಗಿದೆಯಂತೆ. ಇನ್ನು ಈ ಹಲ್ಕ್ ತನ್ನ ತೂಕವನ್ನ ಹೆಚ್ಚಳ ಮಾಡಿಕೊಳ್ಳಲು ಪ್ರತಿದಿನ 10 ಸಾವಿರ ಕ್ಯಾಲೋರಿ ಆಹಾರ ಸೇವಿಸುತ್ತಾನೆ.
ಇನ್ನು ಈತ ತನ್ನ ತೂಕವನ್ನ ಹೆಚ್ಚಿಸಿಕೊಳ್ಳಲು ಪ್ರತಿನಿತ್ಯ 4 ಕೋಳಿ, 36 ಮೊಟ್ಟೆ ಮತ್ತು 5 ಲೀಟರ್ ಹಾಲನ್ನ ಕುಡಿಯುತ್ತಾನೆ. ಇನ್ನು ಇಷ್ಟು ಆಹಾರವನ್ನ ಸೇವಿಸುವ ಈ ಹಲ್ಕ್ ವ್ಯಾಯಾಮದಲ್ಲಿ ಬಹಳ ಕಟ್ಟುನಿಟ್ಟು. ಇಷ್ಟು ಆಹಾರ ಸೇವಿಸಿದರೂ ಖಾನ್ ಬಾಬಾ ಅದನ್ನ ಅರಗಿಸಿಕೊಳ್ಳಲು ಶಕ್ತನಾಗಿದ್ದಾನೆ. ಈಗಾಗಲೇ 500 ಕೆ.ಜಿ. ಸಮೀಪವಿರುವ ಖಾನ್ ಬಾಬಾ ತೂಕ, ಇನ್ನೇನು ಮತ್ತೊಂದು ದಾಖಲೆ ನಿರ್ಮಿಸುವ ಸನಿಹದಲ್ಲಿದೆ ಮತ್ತು ಹೊಸ ದಾಖಲೆಗಾಗಿ ಖಾನ್ ಬಾಬಾ ಸಜ್ಜಾಗಿದ್ದಾನೆ. ಇನ್ನು ಡಬ್ಲ್ಯೂಡಬ್ಲ್ಯೂಇ ಸೇರಬೇಕೆಂಬ ಆಸೆ ಹೊಂದಿರುವ ಖಾನ್ ಬಾಬಾ ಅದಕ್ಕಾಗಿ ಸುಮಾರು ವರ್ಷಗಳಿಂದ ತಯಾರಿ ನಡೆಸುತ್ತಿದ್ದಾನೆ. ಇನ್ನು ಈತನ ತೂಕ ಹೆಚ್ಚಾಗಿರುವ ಕಾರಣ ಈತನಿಗೆ ತಕ್ಕ ವಾಹನ ಸಿಗದೆ ಖಾನ್ ಬಾಬಾ ಹೊರ ಹೋಗಲು ಪರದಾಡುತ್ತಾನಂತೆ. ಹೋದರೂ ಸರಿಯಾಗಿ ಕೂರಲು ಆಗಲ್ಲ, ಓಡಾಡಲು ಕಷ್ಟ ಕಷ್ಟ. ಹೀಗಾಗಿ ತನಗೆ ಸರ್ಕಾರ ಸಹಾಯ ಮಾಡಬೇಕು, ತನ್ನ ಸಾಧನೆಗೆ ಬೆಂಬಲ ನೀಡಬೇಕು ಅಂತಿದ್ದಾನೆ ಖಾನ್ ಬಾಬಾ.