ಕಿಡ್ನಿ ವೈಫಲ್ಯದಿಂದ ಚಿತ್ರರಂಗದ ಖ್ಯಾತ ನಟ ಇನ್ನಿಲ್ಲ, ಕಣ್ಣೀರಿಟ್ಟ ಇಡೀ ದೇಶದ ಚಿತ್ರರಂಗ.

ವರ್ಷ ಹೊಸ ವರ್ಷ ಅನ್ನುವುದು ಚಿತ್ರರಂಗದ ಪಾಲಿಗೆ ಬಹಳ ಕರಾಳವಾದ ವರ್ಷವಾಗಿ ಪರಿಣಮಿಸಿದೆ ಎಂದು ಹೇಳಬಹುದು. ಹೌದು ಹೊಸ ವರ್ಷದ ಆರಂಭದಲ್ಲೇ ಚಿತ್ರರಂಗದ ಕೆಲವು ನಟ ನಟಿಯರು ಇಹಲೋಕವನ್ನ ತ್ಯಜಿಸಿದ್ದು ಇಡೀ ಚಿತ್ರರಂಗ ಕಣ್ಣೀರಿನಲ್ಲಿ ಮುಳುಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಈಗ ಚಿತ್ರರಂಗಕ್ಕೆ ಇನ್ನೊಂದು ಆಘಾತ ಉಂಟಾಗಿದ್ದು ಚಿತ್ರರಂಗದ ಖ್ಯಾತ ನಟರೊಬ್ಬರು ಇಂದು ನಿಧನರಾಗಿದ್ದಾರೆ. ಹೌದು ಹಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ನಟರೊಬ್ಬರು ಇಂದು ನಿಧನರಾಗಿದ್ದು ಇಡೀ ಚಿತ್ರರಂಗಾದ ಕಂಬನಿಯನ್ನ ಮಿಡಿದಿದೆ ಎಂದು ಹೇಳಬಹುದು.

ಹಾಗಾದರೆ ಈ ಖ್ಯಾತ ನಟ ಯಾರು ಮತ್ತು ಅವರಿಗೆ ಏನಾಗಿತ್ತು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಬಾಲಿವುಡ್​ ನಟ ಅರುಣ್​ ವರ್ಮಾ ಅವರು ನಿಧನರಾಗಿದ್ದಾರೆ. ಸುಮಾರು 62 ವರ್ಷ ವಯಸ್ಸಿನ ಅರುಣ್ ವರ್ಮಾ ಅವರು ಹಲವು ಸಮಯದಿಂದ ಬಹಳ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಇಂದು ಆರೋಗ್ಯದಲ್ಲಿ ಬಹಳ ಏರುಪೇರು ಆದಕಾರಣ ಅವರು ಇಹಲೋಕವನ್ನ ತ್ಯಜಿಸಿದ್ದಾರೆ.

arun varma no more

ಅರುಣ್ ವರ್ಮಾ ಅವರ ನಿಧನದ ಸುದ್ದಿಯನ್ನ ಕೇಳಿ ಬಾಲಿವುಡ್ ಚಿತ್ರರಂಗದ ಸಂತಾಪವನ್ನ ಸೂಚಿಸಿದೆ. ಸಲ್ಮಾನ್ ಖಾನ್ ಅವರೊಂದಿಗೆ ‘ಕಿಕ್’, ‘ಮುಜೆ ಶಾದಿ ಕರೋಗೆ’ ಸಿನಿಮಾಗಳಲ್ಲಿ ನಟಿಸಿದ್ದ ಅವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಭೋಪಾಲ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಕಿಡ್ನಿ ವೈಫಲ್ಯದಿಂದ ಕೊನೆಯುಸಿರೆಳೆದಿದ್ದಾರೆ. ಅರುಣಾ ವರ್ಮಾ ಅವರಿಗೆ ಕಿಡ್ನಿ ವೈಫಲ್ಯವಾಗಿದ್ದು ಅವರು ಅದಕ್ಕೆ ಬೇಕಾದ ಚಿಕಿತ್ಸೆಯನ್ನ ಕೂಡ ಪಡೆದುಕೊಳ್ಳುತ್ತಿದ್ದರು, ಆದರೆ ಕಳೆದ ಕೆಲವು ದಿನಗಳಿಂದ ಅವರ ಆರೋಗ್ಯದಲ್ಲಿ ಬಹಳ ಏರುಪೇರು ಆಗಿದ್ದು ವೈದ್ಯರು ಎಷ್ಟೇ ಪ್ರಯತ್ನವನ್ನ ಮಾಡಿದರು ಕೂಡ ಅರುಣಾ ವರ್ಮಾ ಅವರನ್ನ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಸನ್ನಿ ಡಿಯೋಲ್ ಅಭಿನಯದ ‘ಡಾಕಿತ್’ ಚಿತ್ರದ ಮೂಲಕ ಅರುಣ್ ವರ್ಮಾ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ನಾಯಕ್, ಪ್ರೇಮ ಗ್ರಂಥ, ಖಳನಾಯಕ್ ಮತ್ತಿತರ ಚಿತ್ರಗಳಲ್ಲಿ ಅಭಿನಯಿಸಿದ್ದರು. ಸಲ್ಮಾನ್ ಖಾನ್, ಟೈಗರ್ ಶ್ರಾಫ್, ರಿಷಿ ಕಪೂರ್ ಮುಂತಾದ ಪ್ರಮುಖ ನಾಯಕರ ಜೊತೆ ನಟಿಸಿದ್ದರು. ತಮ್ಮ ನಟನೆಯ ಮೂಲಕ ಕೆಲವು ಅಭಿಮಾನಿ ಬಳಗವನ್ನ ಗಳಿಸಿಕೊಂಡಿದ್ದ ಅರುಣ್ ವರ್ಮಾ ಅವರ ಅಗಲಿಕೆಯ ಸುದ್ದಿಯನ್ನ ಕೇಳಿ ಹಲವು ಜನರು ಸಂತಾಪವನ್ನ ಸೂಚಿಸಿದ್ದಾರೆ. ಸ್ನೇಹಿತರೆ ಚಿತ್ರರಂಗದ ನಟ ನಟಿಯರು ಹೀಗೆ ಇಹಲೋಕವನ್ನ ತ್ಯಜಿಸುತ್ತಿರುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

arun varma no more

Join Nadunudi News WhatsApp Group