Ashika Ranganath In Silk Saree: ರೇಷ್ಮೆ ಸೀರೆ ಧರಿಸಿ ನೆಟ್ಟಿಗರ ಗಮನ ಸೆಳೆದ ನಟಿ ಆಶಿಕಾ ರಂಗನಾಥ್, ಫೋಟೋ ವೈರಲ್.
Actress Ashika Rangnath Latest Photos: ಚಂದನವನದ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ (Ashika Ranganath) ಇದೀಗ ತಮ್ಮ ಫೋಟೋಶೂಟ್ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಲೇ ಇದ್ದಾರೆ.
ಇತ್ತೀಚೆಗೆ ನಟಿ ಮಾಡರ್ನ್ ಡ್ರೆಸ್ ನಲ್ಲಿ ಬೋಲ್ಡ್ ಲುಕ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ (Social Media) ಹಂಚಿಕೊಂಡಿದ್ದರು. ಇದೀಗ ನಟಿ ರೇಷ್ಮೆ ಸೀರೆಯಲ್ಲಿ ಮಿಂಚಿದ್ದಾರೆ. ಇವರ ಸಾಂಪ್ರದಾಯಿಕ ನೋಟ ನೆಟ್ಟಿಗರ ಕಣ್ ಸೆಳೆಯುತ್ತಿದೆ.
ರೇಷ್ಮೆ ಸೀರೆಯಲ್ಲಿ ನಟಿ ಆಶಿಕಾ ರಂಗನಾಥ್
ರೇಷ್ಮೆ ಸೀರೆಯಲ್ಲಿನ ಕ್ಯೂಟ್ ಫೋಟೋಗಳನ್ನು ನಟಿ ತಮ್ಮ ಇನ್ಸ್ಟಾಗ್ರಾಮ್ (Ashika Rangnath Instagram) ನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ನಟಿ ತಮ್ಮ ನ್ಯೂ ಲುಕ್ ಅನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಪಿಂಕ್ ಕಾಲರಾ ಬಾರ್ಡರ್ ಇರುವ ರೇಷ್ಮೆ ಸೀರೆಯನ್ನು ನಟಿ ಧರಿಸಿದ್ದು, ಮುದ್ದಾಗಿ ಫೋಟೋಗೆ ಪೋಸ್ ನೀಡಿದ್ದಾರೆ.
View this post on Instagram
ಮದುವೆಗೆ ಹೋಗಲು ನಟಿ ರೆಡಿ ಆಗಿದ್ದು, ಈ ವೇಳೆ ಫೋಟೋಗೆ ಪೋಸ್ ನೀಡಿದ್ದಾರೆ. ಸೀರೆಯಲ್ಲಿ ಹುಡುಗೀರ ನೋಡಲೇ ಬಾರದು ಎಂದು ನೆಟ್ಟಿಗರು ವಿವಿಧ ರೀತಿಯಲ್ಲಿ ನಟಿಯನ್ನು ಹೊಗಳುತ್ತಿದ್ದಾರೆ. ಪಿಂಕ್ ಕಲರ್ ಕಾಂಬಿನೇಷನ್ ನಲ್ಲಿ ನಟಿ ಸಿಂಪಲ್ ಮೇಕಪ್ ನಲ್ಲಿ ಕಂಗೊಳಿಸುತ್ತಿದ್ದಾರೆ. ಸೀರೆ ಜೊತೆ ನಟಿ ಮೂಗುತಿ ಧರಿಸಿ ನಟಿಯ ಫೋಟೋಗಳು ಇದೀಗ ಬಾರಿ ವೈರಲ್ ಆಗುತ್ತಿದೆ.
ಈ ಹಿಂದೆ ನಟಿ ಮಾಲ್ಡೀವ್ಸ್ ಗೆ ಭೇಟಿ ನೀಡಿದ್ದು, ಮಾಲ್ಡೀವ್ಸ್ ನಲ್ಲಿ ಹಾಲಿಡೇ ಟ್ರಿಪ್ ಎಂಜಾಯ್ ಮಾಡಿದ್ದರು. ಮಾಲ್ಡೀವ್ಸ್ ನಲ್ಲಿ ತೆಗೆದ ಕೆಲವು ಫೋಟೋಗಳನ್ನು ಕೂಡ ನಟಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು. ಇದೀಗ ನಟಿ ತಮ್ಮ ಹೊಸ ಲುಕ್ ಅನ್ನು ರಿವೀಲ್ ಮಾಡಿದ್ದಾರೆ. ನಟಿಯ ಟ್ರಡಿಷನಲ್ ಲುಕ್ ಫೋಟೋಸ್ ಇದೀಗ ನೆಟ್ಟಿಗರ ಗಮನ ಸೆಳೆಯುತ್ತಿದೆ.
ನಟಿ ಆಶಿಕಾ ರಂಗನಾಥ್ ಅವರು ಇದೀಗ ಕನ್ನಡ ಚಿತ್ರರಂಗದ ಜೊತೆಗೆ ತೆಲಗು ಚಿತ್ರರಂಗದಲ್ಲೂ ನಟಿಸುತ್ತಿದ್ದಾರೆ. ಆಶಿಕಾ ರಂಗನಾಥ್ ಅವರ ಖ್ಯಾತಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇನ್ನು ನಟಿ ತಮ್ಮ ಹೊಸ ಹೊಸ ಫೋಟೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾ ಇರುತ್ತಾರೆ. ಇದೀಗ ಇವರ ಸಾಂಪ್ರದಾಯಿಕ ನೋಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.