Appu Dreams: ಕೊನೆಗೂ ಈಡೇರಲಿಲ್ಲ ಅಪ್ಪು ಕೊನೆಯ ಆಸೆ, ಗಂಡನ ಕೊನೆಯ ಆಸೆಗಳ ಹೇಳಿಕೊಂಡು ಭಾವುಕರಾದ ಅಶ್ವಿನಿ.
ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಇದ್ದ ಆಸೆಯ ಬಗ್ಗೆ ಮಾತನಾಡಿದ ಅಶ್ವಿನಿ ಪುನೀತ್ ರಾಜ್ ಕುಮಾರ್.
Puneeth Rajkumar Dreams: ಕನ್ನಡದ ಖ್ಯಾತ ನಟರಾದ ಪುನೀತ್ ರಾಜ್ ಕುಮಾರ್ ಅವರು ಅಗಲಿ ಎಷ್ಟೇ ವರ್ಷವಾದರೂ ಸಹ ಅಭಿಮಾನಿಗಳ ಮನದಲ್ಲಿ ಸದಾ ಚಿರಋಣಿ ಆಗಿದ್ದಾರೆ. ಕನ್ನಡ ಚಿತ್ರರಂಗದ ಹೆಮ್ಮೆಯ ನಟ ಕರುನಾಡ ಯುವರತ್ನ ವಿಧಿವಶರಾಗಿ ಈಗಾಗಲೇ ವರ್ಷವೇ ಕಳೆದಿದೆ.
ಆದರೂ ಸಹ ನಟ ದಿವಂಗತ ಪುನೀತ್ ರಾಜಕುಮಾರ್ (Puneeth Rajkumar) ಅವರು ಅಭಿಮಾನಿಗಳ ಮನದಲ್ಲಿ ಎಂದೆಂದಿಗೂ ಚಿರಋಣಿ. ನಟ ಪುನೀತ್ ರಾಜಕುಮಾರ್ ಆಗಲಿ ಅದೆಷ್ಟೇ ವರ್ಷವಾದರೂ ಸಹ ಕನ್ನಡ ಚಿತ್ರರಂಗದಲ್ಲಿ ಅವರ ನೆನಪು, ಅವರ ನಗು ಪ್ರತಿಧ್ವನಿಸುತ್ತಲೇ ಇರುತ್ತದೆ.
ಇದೀಗ ನಟ ದಿವಂಗತ ಪುನೀತ್ ರಾಜ್ ಕುಮಾರ್ ಅವರಿಗೆ ಇದ್ದ ಆಸೆಯ ಬಗ್ಗೆ ಅಶ್ವಿನಿ ಪುನೀತ್ ರಾಜ್ ಕುಮಾರ್(Ashwini Puneeth Rajkumar)ಮಾತನಾಡಿದ್ದಾರೆ. ನಟ ಪುನೀತ್ ರಾಜ್ ಕುಮಾರ್ ಅವರ ಪಿ ಆರ್ ಕೆ ಪ್ರೊಡಕ್ಷನ್ ಅಪ್ಪು ಕಂಡಿದ್ದ ಕನಸು. ಆ ಕನಸನ್ನು ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರ ಒಂದು ಆಸೆಯ ಬಗ್ಗೆ ಹೇಳಿಕೊಂಡ ಅಶ್ವಿನಿ
ಪಿ ಆರ್ ಕೆ ಪ್ರೊಡಕ್ಷನ್ ಹೊಸ ಸಿನಿಮಾ ಆಚಾರ್ ಅಂಡ್ ಕೋ ಇದೀಗ ಬಿಡುಗಡೆಗೆ ತಯಾರಾಗಿದ್ದು, ಸಿನಿಮಾದ ಪ್ರಚಾರ ಕಾರ್ಯದಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಸಹ ಭಾಗಿಯಾಗಿದ್ದಾರೆ. ಕನ್ನಡದ ಜನಪ್ರಿಯ ಫುಡ್ ವಿಲಗರ್ ಕೃಪಾಲ್ ಅಮನ್ನಾ ಅವರೊಟ್ಟಿಗಿನ ಸಂದರ್ಶನದಲ್ಲಿ ಅಶ್ವಿನಿ ಅವರು ಅಪ್ಪು ಅವರ ಬಗ್ಗೆ ಕೆಲವು ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಅದರಲ್ಲಿಯೂ ಅಪ್ಪುಗೆ ಆಹಾರದ ಬಗ್ಗೆ ಇದ್ದ ಪ್ರೀತಿಯನ್ನು ಅಶ್ವಿನಿ ನೆನಪು ಮಾಡಿಕೊಂಡಿದ್ದಾರೆ.
ಒಂದು ಬಾರಿ ಯಾವುದೊ ಸಿನಿಮಾ ಶೂಟಿಂಗ್ ಗೆಂದು ಅಮೆರಿಕಕ್ಕೆ ಪುನೀತ್ ರಾಜ್ ಕುಮಾರ್ ತೆರಳಿದ್ದರಂತೆ. ಅವರೊಟ್ಟಿಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಸಹ ಇದ್ದರಂತೆ. ಅಲ್ಲಿ ಒಂದು ಕಾಫಿಚೈನ್ ನ ಕಾಫಿ ಪುನೀತ್ ಗೆ ಬಹಳ ಇಷ್ಟವಾಗಿತ್ತಂತೆ. ಫಿಲ್ಟರ್ ಕಾಫಿಯಂತೆಯೇ ಅದರ ರುಚಿಯು ಇತ್ತೆಂಬುದು ಪುನೀತ್ ಗೆ ಕಾಫಿ ಹಿಡಿಸಲು ಇನ್ನೊಂದು ಕಾರಣವಂತೆ.
ಅಲ್ಲದೆ ಪುನೀತ್ ಅವರಿಗೆ ಬನ್, ಬನ್ ಮಸ್ಕಾ, ಬನ್ ಜಾಮ್, ಖಾರಾ ಬನ್ ಇವುಗಳೆಲ್ಲ ಬಹಳ ಇಷ್ಟವಂತೆ. ಆಗ ಪುನೀತ್ ಹೇಳುತ್ತಿದ್ದರಂತೆ, ನಾನೊಂದು ಕೆಫೆ ತೆರೆಯಬೇಕು ಎಂದು ಮತ್ತು ಆಗಾಗ ಅದನ್ನು ಹೇಳುತ್ತಲೇ ಇರುತ್ತಿದ್ದರಂತೆ. ನಾನು ಒಮ್ಮೆ ಕೆಫೆ ತೆರೆದೇ ತೆರೆಯುತ್ತೇನೆ ಎನ್ನುತ್ತಿದ್ದರಂತೆ, ಆದರೆ ಅದು ಸಾಧ್ಯವಾಗಲಿಲ್ಲ ಎಂದು ಅಶ್ವಿನಿ ಹೇಳಿದ್ದಾರೆ.