Ashwini Puneeth Rajkumar: ಸ್ಪಂದನ ಮೃತದೇಹದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಅಶ್ವಿನಿ ಪುನೀತ್ ರಾಜಕುಮಾರ್, ಮನಕುಲುಕುವ ಕ್ಷಣ.

ರಾಜ್ ಕುಟುಂಬಕ್ಕೆ ಸಂತಾಪ ಸೂಚಿಸಿ ಅಂತಿಮ ದರ್ಶನದ ವೇಳೆ ಕಂಬನಿ ಮಿಡಿದ ಅಶ್ವಿನಿ ಪುನೀತ್ ರಾಜಕುಮಾರ್.

Ashwini Puneeth Rajkumar Emotion Infront Of Spandana Dead Body: ಕನ್ನಡದ ಖ್ಯಾತ ನಟ ವಿಜಯ್ ರಾಘವೇಂದ್ರ (Vijay Raghavendra) ಪತ್ನಿ ಸ್ಪಂದನ (Spandana Vijay Raghavendra) ಅವರು ಬ್ಯಾಂಕಾಕ್ ಗೆ ತಮ್ಮ ಕುಟುಂಬ ಹಾಗೂ ಸ್ನೇಹಿತರ ಜೊತೆ ಕೆಲಸದ ನಿಮಿತ್ತ ತೆರಳಿದ್ದರು. ಈ ವೇಳೆ ಆಗಸ್ಟ್ 6 ರ ಸಂಜೆ ಸ್ಪಂದನ ತೀವ್ರ ಎದೆನೋವಿನ ಕಾರಣ ಆಸ್ಪತ್ರೆಗೆ ದಾಖಲಗಿದ್ದರು. ಮರು ದಿನ ಮುಂಜಾನೆ ಸ್ಪಂದನ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಲೋ ಬಿಪಿಯಿಂದಾಗಿ ಸ್ಪಂದನ ನಿಧನ ಹೊಂದಿರುವುದಾಗಿ ಮಾಹಿತಿ ಲಭಿಸಿದೆ. ನಿಜಕ್ಕೂ ಸ್ಪಂದನ ಅವರದ್ದು ಸಾಯುವ ವಯಸ್ಸಲ್ಲ. ಬದುಕಿ ಬಾಳಬೇಕಾದವರು ಚಿಕ್ಕ ವಯಸ್ಸಿನಲ್ಲೇ ಹೃಯದಯಾಘಾತದಿಂದ ಮೃತಪಟ್ಟಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಸ್ಪಂದನ ವಿಜಯ್ ರಾಘವೇಂದ್ರ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಕಲಾವಿದರು, ಕುಟುಂಬದವರು, ಹಿತೈಷಿಗಳು, ರಾಜಕೀಯ ಮುಖಂಡರು ಕಂಬನಿ ಮಿಡಿಯುತ್ತಿದ್ದಾರೆ.

Ashwini Puneeth Rajkumar Emotion
Image Credit: Filmibeat

ಇಂದು ಮಧ್ಯಾಹ್ನದವರೆಗೆ ಸ್ಪಂದನ ಅಂತಿಮ ದರ್ಶನ
ಸ್ಪಂದನ ಅವರು ವಿದೇಶದಲ್ಲಿ ಮರಣ ಹೊಂದಿದ ಕಾರಣ ಥೈಲ್ಯಾಂಡ್ ನಲ್ಲಿ ಸ್ಪಂದನ ಅವರ ಮರಣೋತ್ತರ ಪರೀಕ್ಷೆ ನಡೆದಿದೆ. ಥೈಲ್ಯಾಂಡ್ ನ ನಿಯಮದ ಪ್ರಕಾರ ನಿನ್ನೆ ಮಧ್ಯಾಹ್ನ 1 ಗಂಟೆಗೆ ಸ್ಪಂದನ ಪೋಸ್ಟ್ ಮಾರ್ಟಮ್ ಮುಕ್ತಾಯಗೊಂಡಿದೆ. ಸ್ಪಂದನ ಅವರು ಹೃಯದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ. ಇನ್ನು ನಿನ್ನೆ ಸಂಜೆ ಥಾಯ್ ಪ್ಲೈಟ್ ನಲ್ಲಿ ಸ್ಪಂದನ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಗಿದೆ.

ಇಂದು ನಡೆಯಲಿದೆ ಸ್ಪಂದನ ಅಂತ್ಯಕ್ರಿಯೆ
ಇನ್ನು ಇಂದು ಮಧ್ಯಾಹ್ನದವರೆಗೆ ಸ್ಪಂದನ ಅವರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಅಂತಿಮ ದರ್ಶನದ ಬಳಿಕ ಶ್ರೀರಾಮ್ ಪುರದ ಹರಿಶ್ಚಂದ್ರ ಘಾಟ್ (Harishchandra Ghat) ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಸ್ಪಂದನ ಅವರ ಅಂತಿಮ ದರ್ಶನಕ್ಕೆ ಸಾಕಷ್ಟು ನಟ ನಟಿಯರು ಗಣ್ಯರು ಆಗಮಿಸಿದ್ದರು. ಈ ವೇಳೆ ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ( Ashwini Puneeth Rajkumar) ಅವರು ಕೂಡ ಸ್ಪಂದನ ಅಂತಿಮ ದರ್ಶನ ಪಡೆದಿದ್ದಾರೆ.

Ashwini Puneeth Rajkumar Emotion
Image Credit: Publictv

ಸ್ಪಂದನ ಮೃತದೇಹದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಅಶ್ವಿನಿ ಪುನೀತ್ ರಾಜಕುಮಾರ್
ಎರಡು ವರ್ಷದ ಹಿಂದೆ ನವೆಂಬರ್ ನಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ತಮ್ಮ ಪತಿಯನ್ನು ಕಳೆದುಕೊಂಡ ನೋವನ್ನು ಅನುಭವಿಸಿದ್ದರು. ಪುನೀತ್ ಅವರ ಅಗಲಿಕೆಯ ನೋವು ಮಾಸದೆ ಇರುವಾಗಲೇ ಇದೀಗ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ಮತ್ತೊಂದು ಸಾವಿನ ನೋವು ಎದುರಾಗಿದೆ.

Join Nadunudi News WhatsApp Group

ವಿಜಯ್ ಹಾಗು ಸ್ಪಂದನ ರಾಜ್ ಕುಟುಂಬಕ್ಕೆ ಬಹಳ ಆಪ್ತರಾಗಿದ್ದರು. ಸ್ಪಂದನ ಅವರ ಜೊತೆ ಅಶ್ವಿನಿ ಅವರು ಸಾಕಷ್ಟು ಬಾರಿ ಸಮಯ ಕಳೆದಿದ್ದರು. ಸ್ಪಂದನ ಅವರ ಅಕಾಲಿಕ ಮರಣಕ್ಕೆ ಅಶ್ವಿನಿ ಅವರು ಸಂತಾಪ ಸೂಚಿಸಿದ್ದಾರೆ. ಅಂತಿಮ ದರ್ಶನದ ವೇಳೆ ಅಶ್ವಿನಿ ಪುನೀತ್ ರಾಜಕುಮಾರ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

Join Nadunudi News WhatsApp Group