Puneeth Dreams: ಅಪ್ಪು ಆಸೆ ಈಡೇರಿಸಲು ಮಹತ್ವದ ತೀರ್ಮಾನ ತಗೆದುಕೊಂಡ ಅಶ್ವಿನಿ, ಮೆಚ್ಚಿದ ಅಭಿಮಾನಿಗಳು.
ಅಪ್ಪು ಅವರ ಕನಸನ್ನು ನನಸು ಮಾಡುವತ್ತ ಗಮನ ಹರಿಸುತ್ತಿರುವ ಅಶ್ವಿನಿ ಪುನೀತ್ ರಾಜಕುಮಾರ್.
Ashwini Puneeth Rajkumar About Puneeth Rajkumar Dreams: ಕರ್ನಾಟಕ ರತ್ನ ಪುನೀತ್ ರಾಜಕುಮಾರ್ (Puneeth Rajkumar) ಅವರ ಅಗಲಿಕೆಯಿಂದಾಗಿ ಅಪ್ಪು ಅಭಿಮಾನಿಗಳು ಇನ್ನು ಹೊರಬಂದಿಲ್ಲ. ಪುನೀತ್ ಅವರನ್ನು ಅಭಿಮಾನಿಗಳು ಸದಾ ನೆನೆಯುತ್ತಲೇ ಇರುತ್ತಾರೆ. ಜೊತೆಗಿರದ ಜೀವ ಎಂದೆಂದೂ ಜೀವಂತ ಎನ್ನುತ್ತಾ ಅಪ್ಪು ಅವರ ಸಮಾಜಮುಖಿ ಕಾರ್ಯವನ್ನು ನೆನಪಿಸಿಕೊಳ್ಳುತ್ತಾರೆ.
ಇನ್ನು ಪುನೀತ್ ಅವರ ಅಗಲಿಕೆಯ ನಂತರ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ (Ashwini Puneeth Rajkumar) ಅವರು ಅಪ್ಪುವಿನ ಸ್ಥಾನದಲ್ಲಿ ನಿಂತು ಅನೇಕ ಕೆಲಸಗಳನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.
ಅಶ್ವಿನಿ ಪುನೀತ್ ರಾಜಕುಮಾರ್
ಅಶ್ವಿನಿ ಪುನೀತ್ ರಾಜಕುಮಾರ್ ಅವರು ಆಗಾಗ ಸುದ್ದಿಯಾಗುತ್ತಾರೆ. ತಮ್ಮ ಪತಿ ನಡೆದ ಹಾದಿಯಲ್ಲೇ ಅವರು ಹೋಗುತ್ತಿದ್ದಾರೆ. ಅಪ್ಪು ಅವರು ಮಾಡಿದ ಅನೇಕ ಸಹಾಯವನ್ನು ಅಪ್ಪು ಅವರ ನಿಧನದ ನಂತರವೂ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಪುನೀತ್ ಅವರ ಅಭಿಮಾನಿಗಳು ಅಶ್ವಿನಿ ಪುನೀತ್ ರಾಜಕುಮಾರ್ ಬೆಂಬಲಿಸುತ್ತಾರೆ.
ಇನ್ನು ಪುನೀತ್ ಅವರು ಸಾಯುವ ಮುನ್ನ ಅನೇಕ ರೀತಿಯ ಒಳ್ಳೆಯ ಕೆಲಸವನ್ನು ಮಾಡಿದ್ದರು. ಇನ್ನು ಹೆಚ್ಚು ಒಳ್ಳೆಯ ಕೆಲಸ ಮಾಡಬೇಕೆನ್ನುವ ಆಸೆಯನ್ನು ಹೊಂದಿದ್ದರು. ಆದರೆ ಅಪ್ಪು ಅವರ ಅಕಾಲಿಕ ಮರಣದಿಂದಾಗಿ ಅವರ ಅನೇಕ ಆಸೆಗಳು ಹಾಗೆಯೆ ಉಳಿದಿವೆ. ಇದೀಗ ಅಪ್ಪು ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಪುನೀತ್ ಅವರ ಕನಸನ್ನು ನನಸು ಮಾಡುವತ್ತ ಗಮನ ಹರಿಸುತ್ತಿದ್ದಾರೆ.
ಅಪ್ಪು ಆಸೆ ಈಡೇರಿಸಲು ಮಹತ್ವದ ತೀರ್ಮಾನ ತಗೆದುಕೊಂಡ ಅಶ್ವಿನಿ
ರಾಜ್ ಕುಟುಂಬದ ಪ್ರತಿಯೊಬ್ಬರೂ ಕೂಡ ಜನರಿಗೆ ಒಳಿತನ್ನೇ ಬಯಸಿದ್ದರು. ಯುವ ಪ್ರತಿಭೆಯನ್ನು ಚಿತ್ರರಂಗಕ್ಕೆ ಪರಿಚಯಿಸಿ ಅವರಿಗೆ ಖ್ಯಾತಿ ತಂದುಕೊಟ್ಟಿದ್ದಾರೆ. ಇನ್ನು ರಾಜಕುಮಾರ್ ಅವರ ಪತ್ನಿ ಪಾರ್ವತಮ್ಮ ರಾಜ್ ಕುಮಾರ್ ಅವರು ಕೂಡ ತಮ್ಮ ಕಾಲದಲ್ಲಿ ಅನೇಕ ನಟ ನಟಿಯರನ್ನು ಪ್ರೋತ್ಸಹಿಸಿದ್ದರು.
ರಾಜಕುಮಾರ್, ಶಿವರಾಜ್, ಪುನೀತ್ ರಾಜಕುಮಾರ್, ರಾಘವೇಂದ್ರ ರಾಜ್ ಕುಮಾರ್ ಅವರ ಚಿತ್ರಕ್ಕೆ ಪಾರ್ವತಮ್ಮ ಅವರೇ ನಾಯಕಿಯನ್ನು ಆರಿಸಿ ಹೊಸ ಪ್ರತಿಭೆಗೆ ಅವಕಾಶವನ್ನು ನೀಡುತ್ತಿದ್ದರು. ಇದೀಗ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಕೂಡ ಮಹಿಳೆಯರನ್ನು ಬೆಂಬಲಿಸಲು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಈ ಮೂಲಕ ಪುನೀತ್ ಅವರ ಆಸೆಯನ್ನು ಈಡೇರಿಸಲು ಹೊರಟಿದ್ದಾರೆ.
ಮಹಿಳೆಯರಿಗೆ ಮೊದಲ ಆದ್ಯತೆ ಎಂದ ಅಪ್ಪು ಪತ್ನಿ
ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ಪಿಆರ್ ಕೆ ಬ್ಯಾನರ್ ಅಡಿಯಲ್ಲಿ ಮಹಿಳೆಯರಿಗೆ ಹೆಚ್ಚು ಒಟ್ಟು ನೀಡಲು ನಿರ್ಧರಿಸಿದ್ದಾರೆ. ಮಹಿಳಾ ನಿರ್ದೇಶಕಿಯರು, ಕಥೆಗಾರ್ತಿಯರು, ಸಂಭಾಷಣೆಕಾರರು, ನಟಿಯರು ಹೀಗೆ ಎಷ್ಟು ಸಾಧ್ಯವೋ ಅಷ್ಟು ಕಡೆ ಮಹಿಳೆಯರಿಗೆ ಮೊದಲ ಆಧ್ಯತೆ ನೀಡುತ್ತೇನೆ ಎಂದು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಘೋಷಿಸಿದ್ದಾರೆ. ಅಶ್ವಿನಿ ಪುನೀತ್ ರಾಜಕುಮಾರ್ ಅವರ ಈ ನಿರ್ಧಾರವನ್ನು ಕನ್ನಡಿಗರು ಮೆಚ್ಚಿಕೊಂಡಿದ್ದಾರೆ.