Asil Chicken: 50 ಸಾವಿರ ರೂ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 1 ಲಕ್ಷ ಲಾಭ, ಈ ಕೋಳಿ ತಳಿಗೆ ಭರ್ಜರಿ ಬೇಡಿಕೆ.
ಕಡಕನಾಥ್ ಕೋಳಿ ಗಿಂತ ಹೆಚ್ಚಿನ ಬೇಡಿಕೆ ಇರುವ ಈ ಕೋಳಿಯ ತಳಿಯ ಬಿಸಿನೆಸ್ ಆರಂಭಿಸಿದರೆ ಉತ್ತಮ ಲಾಭ.
Asil Chicken Business Profit: ಭಾರತೀಯ ಮಾರುಕಟ್ಟೆಯಲ್ಲಿ ಕೋಳಿ ಸಾಕಾಣಿಕೆಯ ವ್ಯವಹಾರ ಬಹುದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಕೋಳಿ ಸಾಕಾಣಿಕೆಯು ಹೆಚ್ಚಿನ ಲಾಭವನ್ನು ನೀಡುತ್ತದೆ. ಇನ್ನು ಮಾರುಕಟ್ಟೆಯಲ್ಲಿ ಕಡಕನಾಥ್ ಕೋಳಿಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ.
ಹೆಚ್ಚಿನ ಈ ತಳಿಯ ಕೋಳಿಯನ್ನು ಸಾಕಾಣಿಕೆ ಮಾಡಲು ಇಷ್ಟಪಡುತ್ತಾರೆ. ಇನ್ನು ಕಡಕನಾಥ್ ಕೋಳಿಗಳಿಂತ ಹೆಚ್ಚು ಲಾಭ ನೀಡುವ ತಳಿಗಳು ಸಾಕಷ್ಟಿವೆ. ಇದೀಗ ಕೋಳಿ ಸಾಕಾಣಿಕೆಯಲ್ಲಿ ಹೆಚ್ಚಿನ ಲಾಭ ನೀಡುವ ತಳಿಗಳ ಬಗ್ಗೆ ಒಂದಿಷ್ಟು ವಿವರವನ್ನು ತಿಳಿಯೋಣ.
ಆಸೀಲ್ ತಳಿಯ ಕೋಳಿಗಳು (Asil Chicken)
ಮಾಂಸ ಉತ್ಪಾದನೆಗೆ ಆಸೀಲ್ ತಳಿಯ ಕೋಳಿಗಳನ್ನು ಹೆಚ್ಚು ಸಾಕಾಣಿಕೆ ಮಾಡಲಾಗುತ್ತದೆ. ಈ ತಳಿಯ ಕೋಳಿಗಳ ಮಾಂಸಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಇದೆ. ಆಸೀಲ್ ತಳಿಯ ಕೋಳಿಗಳು ಮೊಟ್ಟೆ ಇಡುವ ಸಾಮರ್ಥ್ಯ ಉತ್ತಮವಾಗಿಲ್ಲ. ವರ್ಷದಲ್ಲಿ ಕೇವಲ 60 ರಿಂದ 70 ಮೊಟ್ಟೆಗಳನ್ನು ನೀಡುತ್ತವೆ. ಈ ತಳಿಯ ಕೋಳಿಯ ಮೊಟ್ಟೆಗಳಿಗೆ ಬಾರಿ ಬೇಡಿಕೆ ಇದೆ.
ಕಡಿಮೆ ಖರ್ಚಿನಲ್ಲಿ ಪ್ರತಿ ತಿಂಗಳು 1 ಲಕ್ಷ ಲಾಭ
ಆಸೀಲ್ ತಳಿಯ ಕೋಳಿಗಳನ್ನು ಸಾಕುವುದರಿಂದ ಕಡಿಮೆ ಖರ್ಚಿನಲ್ಲಿ ಲಕ್ಷ ಹಣವನ್ನು ಸಂಪಾದಿಸಬಹುದು. ಆಸಿಲ್ ಕೋಳಿ ಮೊಟ್ಟೆಗಳ ಬೆಲೆಯೂ ತುಂಬಾ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಒಂದು ಮೊಟ್ಟೆಯ ಬೆಲೆ 100 ರೂ. ಇದರೊಂದಿಗೆ ಅದರ ಮಾಂಸದ ಬೆಲೆಯೂ ಅತಿ ಹೆಚ್ಚಾಗಿದೆ. ಈ ಕೋಳಿ ಮೊಟ್ಟೆಯ ಸೇವನೆಯು ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿಯಾಗಿದ್ದು ಈ ಕಾರಣಕ್ಕೆ ಜನರು ಹೆಚ್ಚಾಗಿ ಇದರ ಮಾಂಸವನ್ನು ಇಷ್ಟಪಡುತ್ತಾರೆ.
ಕಡಕನಾಥ್ ಕೋಳಿಗಿಂತ ಹೆಚ್ಚಿದೆ ಈ ತಳಿಯ ಬೇಡಿಕೆ
ಅಸೀಲ್ ಕೋಳಿಗಳು ಇತರ ಕೋಳಿಗಳಿಗಿಂತ ಸಾಕಷ್ಟು ಭಿನ್ನವಾಗಿವೆ, ಈ ಕಾರಣದಿಂದಾಗಿ ಅವುಗಳನ್ನು ಕೋಳಿ ಸಾಕಣೆ ಕೇಂದ್ರಗಳಿಗಿಂತ ಹೆಚ್ಚಾಗಿ ಹಿತ್ತಲಿನ ಫಾರ್ಮ್‌ಗಳಲ್ಲಿ ಸಾಕಲಾಗುತ್ತದೆ. ಈ ತಳಿಯ ಕೋಳಿ ಕಡಕನಾಥ್ ಕೋಳಿಗಿಂತ ಹೆಚ್ಚು ಬಲಿಷ್ಠವಾಗಿದೆ.
ಅಸೀಲ್ ಕೋಳಿಗಳು ಫೈಟರ್ ಪ್ರವೃತ್ತಿಯನ್ನು ಹೊಂದಿವೆ, ಇದು ಹೊಸ ತಳಿಯಲ್ಲ ಅಥವಾ ಅಭಿವೃದ್ಧಿಪಡಿಸಲಾಗಿಲ್ಲ, ಆದರೆ ಇದು ಮೊಘಲರ ಆಳ್ವಿಕೆಯಿಂದ ಬರುತ್ತಿದೆ. ಮಾರುಕಟ್ಟೆಯಲ್ಲಿ ಆಸಿಲ್ ತಳಿಯ ಕೋಳಿಯ ಮಾಂಸ ಹಾಗೂ ಮೊಟ್ಟೆಗೆ ಬಾರಿ ಬೇಡಿಕೆ ಇದೆ.