World Cup Winner: ಈ ಬಾರಿ ವಿಶ್ವಕಪ್ ವಿನ್ ಆಗುವ ತಂಡ ಯಾವುದು…? ಸ್ಪೋಟಕ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ.
ಈ ಬಾರಿ ವಿಶ್ವಕಪ್ ವಿನ್ ಆಗುವ ತಾವುದು ಎಂದು ಭವಿಷ್ಯ ನುಡಿದ ಜ್ಯೋತಿಷಿ.
Astrologer Anirudh Kumar Mishra Tweet About World Cup 2023 Winner: 2023 ರ ಐಸಿಸಿ (ICC) ಪುರುಷರ ಕ್ರಿಕೆಟ್ ವಿಶ್ವಕಪ್ (World Cup) ಕ್ರಿಕೆಟ್ ವಿಶ್ವಕಪ್ ನ 13 ನೇ ಆವೃತ್ತಿಯಾಗಿದೆ. ದೇಶದ ವಿವಿಧ ನಗರಗಳಲ್ಲಿ 46 ದಿನಗಳ ಕಾಲ ನಡೆಯುವ ವಿಶ್ವಕಪ್ ಟೂರ್ನಮೆಂಟ್ ಈಗಾಗಲೇ ಆರಂಭವಾಗಿದೆ. ಈ ಟೂರ್ನಿ ಅಲ್ಲಿ 17 ತಂಡಗಳು ಭಾಗವಹಿಸಲಿದೆ.
ಈ ಬಾರಿ ಕಪ್ ಯಾರ ಪಾಲಾಗಲಿದೆ ಎಂದು ಎಲ್ಲ ಲೆಕ್ಕಾಚಾರ ಹಾಕುತ್ತಿದ್ದಾರೆ. ಈಗಾಗಲೇ ಹಲವರು ಈ ಬಗ್ಗೆ ಊಹೆ, ಭವಿಷ್ಯ ನುಡಿಯುದು, ಬೆಟ್ಟಿಂಗ್ ಶುರುಮಾಡಿದ್ದಾರೆ. ಇದೀಗ World Cup ಯಾರ ಮಡಿಲಿಗೆ ಎನ್ನುವ ಬಗ್ಗೆ ಜ್ಯೋತಿಷಿ ಭವಿಷ್ಯ ನುಡಿದ್ದಿದ್ದಾರೆ.
ಪ್ರತಿಷ್ಠಿತ ಕಪ್ ಯಾರ ಮಡಿಲಿಗೆ….? ಭವಿಷ್ಯ ನುಡಿದ ಜ್ಯೋತಿಷಿ
ದೇಶ ವಿದೇಶಗಳ ರಾಜಕೀಯ ಮತ್ತು ರಾಜಕೀಯೇತರ ಪ್ರಮುಖ ವಿದ್ಯಮಾನಗಳು ನಡೆದಾಗ ಅದರ ಸುತ್ತ ಜ್ಯೋತಿಷಿಗಳು ಭವಿಷ್ಯ ನುಡಿಯುದು ಸರ್ವೇ ಸಾಮಾನ್ಯವಾಗಿದೆ. ಅದರಲ್ಲಿ ಕೆಲವು ನಿಜವಾಗಿರುತ್ತವೆ, ಇನ್ನು ಕೆಲವು ಸುಳ್ಳಾಗಿರುತ್ತವೆ.
ಭಾರತದಲ್ಲಿ ಕ್ರಿಕೆಟ್ ಪ್ರೇಮಿಗಳು ರೋಹಿತ್ ಶರ್ಮಾ ನೇತೃತ್ವದ Team India ಕಪ್ ಗೆಲ್ಲುವಂತಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಇಂದು (ಅಕ್ಟೋಬರ್ 8 ) ಭಾರತ ತನ್ನ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ಜೊತೆ ಆಡಲಿದೆ. 2011 ರಲ್ಲಿ ಭಾರತ World Cup ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದ ಜ್ಯೋತಿಷಿ ಇದೀಗ ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಮ್ಮೆ ಸಿಹಿ ಸುದ್ದಿ ನೀಡಿದ್ದಾರೆ.
I am happy to share Bharat is going to win the World Cup 2023. and I announced on my FB account on 26 February 2011 that India will win World Cup https://t.co/biyFLn2ASe
— Anirudh Kumar Mishra (Astrologer) (@Anirudh_Astro) October 6, 2023
ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಜ್ಯೋತಿಷಿ ಅನಿರುದ್ದ್ ಕುಮಾರ್ ಮಿಶ್ರಾ
ಮಿಶ್ರಾ ತನ್ನ ಸಂಖ್ಯಾಶಾಸ್ತ್ರದ ಆಧಾರದ ಮೇಲೆ ಮಿಶ್ರಾ ಭವಿಷ್ಯ ನುಡಿದಿದ್ದು, ಇದರ ಪ್ರಕಾರ ಚಾಂಪಿಯನ್ ಆಗಿ ಭಾರತ ಹೊರಹೊಮ್ಮಲಿದೆ ಎನ್ನುವ ಖುಷಿಯ ವಿಚಾರವನ್ನು ತನ್ನ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ” 2011 ರ World Cup ಅನ್ನು ಭಾರತ ಗೆಲ್ಲಲಿದೆ ಎಂದು ಟೂರ್ನಮೆಂಟ್ ಆರಂಭವಾಗುವ ಒಂದೂವರೆ ತಿಂಗಳ ಮುಂಚಿತವಾಗಿಯೇ ನಾನು ಹೇಳಿದ್ದೆ”. ಈಗ ಮತ್ತೆ ಭವಿಷ್ಯ ನುಡಿಯುವಂತೆ ಮನವಿಗಳು ಬಂದ ಹಿನ್ನೆಲೆಯಲ್ಲಿ ಈ ಮಾಹಿತಿ ಯನ್ನು ಹಂಚಿಕ್ಕೊಳ್ಳುತಿದ್ದೇನೆ.
ಖ್ಯಾತ ಜ್ಯೋತಿಷಿ ಅನಿರುದ್ದ್ ಕುಮಾರ್ ಮಿಶ್ರಾ “ಭಾರತವು 2023 ರ ವಿಶ್ವಕಪ್ ಅನ್ನು ಗೆಲ್ಲಲಿದೆ ಎಂದು ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ. ಮತ್ತು ನಾನು 26 ಫೆಬ್ರವರಿ 2011 ರಂದು ನನ್ನ FB ಖಾತೆಯಲ್ಲಿ ಭಾರತವು ವಿಶ್ವಕಪ್ ಗೆಲ್ಲುತ್ತದೆ ಎಂದು ಘೋಷಿಸಿದೆ”. ಎಂದು ತನ್ನ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 1,27,000 ಫಾಲೋವರ್ಸ್ ಅನ್ನು ಹೊಂದಿರುವ ಮಿಶ್ರಾ ಅವರ ಈ ಟ್ವೀಟಿಗೆ ಸಾಕಷ್ಟು ಪ್ರತಿಕ್ರಿಯೆಗಳನ್ನು ಓದುಗರು ನೀಡಿದ್ದಾರೆ.