Darshan Prophecy: ಮತ್ತೆ ಜೈಲು ಸೇರಲಿದ್ದಾರೆ ದಾಸ, ಖ್ಯಾತ ಜ್ಯೋತಿಷಿಯಿಂದ ಸ್ಪೋಟಕ ಭವಿಷ್ಯ.

ಮತ್ತೆ ಜೈಲು ಸೇರಲಿದ್ದಾರೆ ದರ್ಶನ್, ಸ್ಪೋಟಕ ಭವಿಷ್ಯ

Astrologer Dinesh Bhatt About Darshan: ಸ್ಯಾಂಡಲ್ ವುಡ್ ನ ಸ್ಟಾರ್ ನಟ Darshan ಜೈಲು ಪಾಲಾಗಿರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಖ್ಯಾತ ನಟನಾಗಿ ಕೊಲೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ದರ್ಶನ್ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿದೆ. ಇನ್ನು ಯಾವುದೇ ವ್ಯಕ್ತಿಗೆ ಒಳಿತು ಅಥವಾ ಕೆದಕಿದರು ಕೂಡ ಆ ವ್ಯಕ್ತಿಯ ಗೃಹಗತಿ, ಜಾತಕದ ಬಗ್ಗೆ ಮಾತುಗಳು ಬರುವುದು ಸಹಜ. ಯಾವುದೇ ವ್ಯಕ್ತಿಯ ಕಷ್ಟದ ಪರಿಸ್ತಿದೆ ಗೃಹಗತಿಗಳೇ ಕಾರಣ ಎನ್ನುವದು ಜ್ಯೋತಿಷಿಗಳ ನಂಬಿಕೆ.

ಇನ್ನು ನಟ ದರ್ಶನ್ ಜೈಲು ಸೇರಿದ ಬಳಿಕ ಅವರ ಬಗ್ಗೆ ವಿವಿಧ ಜ್ಯೋತಿಷಗಳು ಭವಿಷ್ಯವಾಣಿ ನುಡಿದ್ದರು. ಹಾಸನದ ಕೊಡಿ ಮಠದ ಶ್ರೀಗಳು, ಆರ್ಯವರ್ಧನ್ ಗುರೂಜಿ ಕೂಡ ದರ್ಶನ್ ಮುಂದಿನ ಭವಿಷ್ಯದ ಬಗ್ಗೆ ಭವಿಷ್ಯವಾಣಿ ನುಡಿದ್ದರು. ಈ ಎಲ್ಲರ ಭವಿಷ್ಯವಾಣಿ ಬೆನ್ನಲ್ಲೇ ಈ ಖ್ಯಾತ ಜ್ಯೋತಿಷಿ ದರ್ಶನ್ ಮತ್ತೆ ಜೈಲು ಸೇರಲಿದ್ದಾರೆ ಎನ್ನುವ ಬಗ್ಗೆ ಭವಿಷ್ಯವಾಣಿ ನುಡಿದಿದ್ದಾರೆ.

Astrologer Dinesh Bhatt About Darshan
Image Credit: Justdial

ಖ್ಯಾತ ಜ್ಯೋತಿಷಿಯಿಂದ ಸ್ಪೋಟಕ ಭವಿಷ್ಯ
ಜ್ಯೋತಿಷಿ ದಿನೇಶ್ ಭಟ್ ದರ್ಶನ್ ಅವರ ಮುಂದಿನ ಜೀವನದ ಬಗ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ದರ್ಶನ್ ರಾಜಕೀಯದಲ್ಲಿ ಮಿಂಚುವುದು ನಿಶ್ಚಿತ. ಸಂದರ್ಶನದಲ್ಲಿ ಮಾತನಾಡಿದ ದಿನೇಶ್ ಭಟ್, ದರ್ಶನ್ ಆರು ತಿಂಗಳ ಕಾಲ ಜೈಲಿನಲ್ಲಿ ಇರುವ ಸಾಧ್ಯತೆ ಇದೆ. ದರ್ಶನ್ ಪರಪ್ಪನ ಅಗ್ರಹಾರ ಪಾಲಾದ ನಂತರವೂ ಇದೆಲ್ಲ ಸಹವಾಸ ದೋಷ ಮತ್ತು ಸ್ರ್ತಿ ದೋಷ ಎದುರಿಸುವ ಅಪಾಯ ಎನ್ನಲಾಗಿತ್ತು. ಈ ಮಾತುಗಳನ್ನು ಪುನರುಚ್ಚರಿಸಿದ ದಿನೇಶ್ ಭಟ್ ದರ್ಶನ್ ಗೆ ಸ್ತ್ರೀ ದೋಷವಿದೆ ಎಂದಿದ್ದಾರೆ.

ಈ ನಿರಾತಂಕ ಕಷ್ಟಗಳಿಂದ ದರ್ಶನ್ ಹೊರಬರಲು ಸ್ವಲ್ಪ ಸಮಯ ಬೇಕು ಎಂದು ದಿನೇಶ್ ಭಟ್ ಹೇಳಿದ್ದಾರೆ. ಇನ್ನು 2026ರ ನಂತರ ದರ್ಶನ್ ಕನ್ನಡ ಚಿತ್ರರಂಗದ ಸ್ಟಾರ್ ಹೀರೋ ಆಗಿ ಮತ್ತೆ ಮಿಂಚುವುದು ನೂರಕ್ಕೆ ನೂರರಷ್ಟು ಸತ್ಯ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮುಂದೊಂದು ದಿನ ದರ್ಶನ್ ರಾಜಕೀಯಕ್ಕೆ ಬರುವ ಸಾಧ್ಯತೆ ಇದೆ. ಆದರೆ ದರ್ಶನ್ ಅದರ ಬಗ್ಗೆ ಮನಸು ಮಾಡುತ್ತಿಲ್ಲ. ಹಾಗೆ ಮಾಡಿದರೆ ದರ್ಶನ್ ಗೆ ರಾಜಕೀಯದಲ್ಲಿ ವಜ್ರಸಿಂಹಾಸನ ಸಿಗುತ್ತದೆ ಎಂದು ದಿನೇಶ್ ಭಟ್ ಹೇಳಿದ್ದಾರೆ.

Astrologer Dinesh Bhatt On Darshan
Image Credit: Original Source

ಮತ್ತೆ ಜೈಲು ಸೇರಲಿದ್ದಾರೆ ದಾಸ
ದರ್ಶನ್ ಜೈಲು ಪಾಲಾಗುತ್ತಿರುವುದು ಇದೇ ಮೊದಲಲ್ಲ. ಇಂದು ಮತ್ತು ಅಂದು.. ಎರಡು ಬಾರಿ ಜೈಲು ಸೇರಿದ ಅನುಭವ ದರ್ಶನ್ ಅವರಿಗಿದೆ. ಅಂದಹಾಗೆ ಇದು ಕೊನೆಯಲ್ಲ ಎಂದಿದ್ದಾರೆ. ದಿನೇಶ್ ಭಟ್ ಅವರ ಭವಿಷ್ಯವಾಣಿಯ ಪ್ರಕಾರ ದರ್ಶನ್ ಗೆ ಮುಂದಿನ ದಿನಗಳಲ್ಲಿ ರಾಜಯೋಗ ಇದ್ದರೂ ಒಂದಷ್ಟು ಸಂಕಷ್ಟಗಳು ಎದುರಾಗಲಿವೆ. ಅಷ್ಟೇ ಅಲ್ಲ, ಬೇರೆಯವರಿಗೆ ಉಪಕಾರ ಮಾಡಲು ಹೋಗಿ ಭವಿಷ್ಯದಲ್ಲಿ ದರ್ಶನ್ ಮತ್ತೆ ಜೈಲಿಗೆ ಹೋಗುವ ಎಲ್ಲಾ ಸಾಧ್ಯತೆಗಳಿವೆ ಎಂದಿದ್ದಾರೆ ಜ್ಯೋತಿಷಿ ದಿನೇಶ್ ಭಟ್.

Join Nadunudi News WhatsApp Group

Darshan Case Latest News
Image Credit: Indian Express

Join Nadunudi News WhatsApp Group