Ads By Google

Astrology: 3 ಗ್ರಹಗಳ ಸಂಯೋಗದ ಕಾರಣ ಈ ರಾಶಿಯವರಿಗೆ ಆರಂಭವಾಗಿದೆ ರಾಜಯೋಗ, ಅದೃಷ್ಟದ ದಿನ ಆರಂಭ

astrology latest update

Image Credit: Original Source

Ads By Google

 Astrology Update: ಹಿಂದೂ ಸಂಪ್ರದಾಯದಲ್ಲಿ ರಾಶಿ ಭವಿಷ್ಯಕ್ಕೆ ಹೆಚ್ಚಿನ ಆಧ್ಯೆತೆಯನ್ನು ನೀಡಲಾಗುತ್ತದೆ. ರಾಶಿಯಲ್ಲಿ ಗ್ರಹಗಳ ಬದಲಾಣೆಯು ಬಹಳ ಪರಿಣಾಮಕಾರಿ ಆಗಿರಲಿದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಮುಂದಿನ ತಿಂಗಳು ಅಂದರೆ ಫೆಬ್ರವರಿಯಲ್ಲಿ ಅನೇಕ ಪ್ರಮುಖ ಗ್ರಹಗಳು ತಮ್ಮ ಚಿಹ್ನೆಗಳನ್ನು ಬದಲಾಯಿಸುವುದರಿಂದ ಈ ತಿಂಗಳು ಬಹಳ ವಿಶೇಷವಾಗಿರುತ್ತದೆ . ಬುಧ, ಮಂಗಳ ಮತ್ತು ಶುಕ್ರ ಗ್ರಹಗಳು ಫೆಬ್ರವರಿಯಲ್ಲಿ ರಾಶಿಚಕ್ರವನ್ನು ಬದಲಾಯಿಸಲಿವೆ.

ಮಕರ ರಾಶಿಯನ್ನು ಈ ಮೂರೂ ರಾಶಿಗಳು ಪ್ರವೇಶಿಸಲಿದ್ದು, ಸೂರ್ಯನು ಈಗಾಗಲೇ ಈ ರಾಶಿಯಲ್ಲಿದ್ದಾನೆ ಶುಭ ಸ್ಥಾನದಲ್ಲಿ ಬುಧ ಇದ್ದರೆ ವ್ಯಕ್ತಿಯು ವೃತ್ತಿ ಮತ್ತು ವ್ಯವಹಾರದಲ್ಲಿ ಲಾಭವನ್ನು ಪಡೆಯುತ್ತಾನೆ. ಹಾಗೆಯೇ ಶುಕ್ರನು ಶುಭ ಸ್ಥಾನದಲ್ಲಿದ್ದರೆ ಹಣದ ಕೊರತೆ ಇರುವುದಿಲ್ಲ. ಮಂಗಳವು ಧೈರ್ಯ ಮತ್ತು ಪರಾಕ್ರಮವನ್ನು ಸಂಕೇತಿಸುತ್ತದೆ. ಮಕರ ರಾಶಿಯಲ್ಲಿ ಈ ಗ್ರಹಗಳ ಸಂಯೋಜನೆಗೆ ಯಾವ ರಾಶಿಚಕ್ರದ ಚಿಹ್ನೆಗಳು ಅದೃಷ್ಟಶಾಲಿಯಾಗುತ್ತವೆ ಎಂದು ತಿಳಿಯೋಣ.

Image Credit: India Today

ಮೇಷ ರಾಶಿ ಯವರ ಎಲ್ಲಾ ಕನಸು ನನಸಾಗಲಿದೆ

ಬುಧ, ಮಂಗಳ ಮತ್ತು ಶುಕ್ರ ಸಂಯೋಜನೆಯು ಮೇಷ ರಾಶಿಯವರಿಗೆ ಲಾಭದಾಯಕವಾಗಿದೆ. ಈ ರಾಶಿಯವರು ಆರೋಗ್ಯಕರ ಆಹಾರವನ್ನು ಸೇವಿಸುವುದು ಮುಖ್ಯ. ನಿಮ್ಮ ಉದ್ಯೋಗದ ಕನಸು ನನಸಾಗಲಿದೆ, ಅಷ್ಟೇ ಅಲ್ಲದೆ ನೀವು ಆರ್ಥಿಕವಾಗಿ ಪ್ರಬಲರಾಗಲು ಉಳಿತಾಯಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕಾಗಿದೆ.

Image Credit: India Today

ಧನು ರಾಶಿಯವರಿಗೆ ಆದಾಯವನ್ನು ಹೆಚ್ಚಿಸಲು ಹಲವು ಹೊಸ ಮಾರ್ಗಗಳಿವೆ

ಮೂರು ಗ್ರಹಗಳ ಸಂಯೋಜನೆಯು ಧನು ರಾಶಿಯವರಿಗೆ ಶುಭವಾಗಲಿದೆ.ಈ ರಾಶಿಯವರು ತಾವು ಕೆಲಸ ಮಾಡುತ್ತಿದ್ದ ಕಡೆ ತಮ್ಮ ಬಾಸ್‌ನಿಂದ ಹೆಚ್ಚಿನ ಬೆಂಬಲವನ್ನುಪಡೆದು ಅನೇಕ ಹೊಸ ಕಾರ್ಯಗಳನ್ನು ಸಹ ಪ್ರಾರಂಭಿಸುತ್ತಾರೆ. ಆದ್ರೆ ನೀವು ತೆಗೆದುಕೊಳ್ಳುವ ನಿರ್ಧಾರ ಬಹಳ ಮುಖ್ಯ ಆಗಿರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಿರಲಿ, ಹೊರಗಿನ ಆಹಾರವನ್ನು ಸೇವಿಸದಿರಿ, ನಿಮ್ಮ ಕೆಲವು ನಿರ್ಧಾರಗಳು ನಿಮ್ಮನ್ನು ಆರ್ಥಿಕವಾಗಿ ಪ್ರಬಲರನ್ನಾಗಿಸುತ್ತದೆ.

Image Credit: India Today

ಮಕರ ರಾಶಿಯವರು ಮಿಶ್ರ ಫಲಿತಾಂಶಗಳನ್ನು ಎದುರಿಸಬೇಕಾಗಿದೆ

ಸೂರ್ಯನು ಜನವರಿ 15 ರಿಂದ ಮಕರ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಈಗ ಬುಧ, ಮಂಗಳ ಮತ್ತು ಶುಕ್ರ ಕೂಡಾ ಈ ರಾಶಿಯನ್ನು ಪ್ರವೇಶಿಸಲಿದ್ದಾರೆ. ಆದ್ದರಿಂದ ಈ ರಾಶಿಯ ಜನರು ಮಿಶ್ರ ಫಲಿತಾಂಶಗಳನ್ನು ಎದುರಿಸುತ್ತಾರೆ. ವ್ಯಾಪಾರಸ್ಥರಿಗೆ ಇದು ಏಳಿಗೆಯ ಸಮಯ ಆಗಿದ್ದು ವ್ಯಾಪಾರಕ್ಕೆ ಸಂಬಂಧಿಸಿದಂತೆ ಹಲವು ಅವಕಾಶಗಳು ನಿಮ್ಮನ್ನು ಹುಡುಕಿ ಬರಲಿದೆ. ಹೂಡಿಕೆಯ ಮೊದಲು ಆಲೋಚಿಸಿ ಹಾಗು ಕೆಲವು ಆರ್ಥಿಕ ಏರುಪೇರುಗಳು ನಿಮ್ಮನ್ನು ಕಾಡಲಿದೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡುವುದು ಮುಖ್ಯ.

Ads By Google
Nagarathna Santhosh: Nagarathna Santhosh has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in