APY Update: ಕೇವಲ 7 ರೂ ಹೂಡಿಕೆ ಮಾಡಿದ್ರೆ ಸಿಗಲಿದೆ ಪ್ರತಿ ತಿಂಗಳು 5000 ರೂ ಪಿಂಚಣಿ, ಕೇಂದ್ರದ ಯೋಜನೆ.
ಕೇವಲ 7 ರೂ. ಉಳಿಸಿದರೆ ಸಿಗಲಿದೆ 5000 ಮಾಸಿಕ ಪಿಂಚಣಿ, ಕೇಂದ್ರದ ಯೋಜನೆಯಲ್ಲಿ ಇಂದೇ ಹೂಡಿಕೆ ಆರಂಭಿಸಿ.
Atal Pension Yojana Investment: ಜನಸಾಮಾನ್ಯರಿಗಾಗಿ ಹೂಡಿಕೆ ಮಾಡಲು ವಿವಿಧ ಯೋಜನೆಗಳು ಚಾಲ್ತಿಯಲ್ಲಿವೆ. ಜನರು ಹೆಚ್ಚಾಗಿ ಕಡಿಮೆ ಹೂಡಿಕೆಯ ಯೋಜನೆಗಳನ್ನು ಅರಸುತ್ತಾರೆ. ಇನ್ನು ಜನರು ತಮ್ಮ ವೃದ್ದಾಪ್ಯದ ಜೀವನಕ್ಕಾಗಿ ಹೆಚ್ಚಾಗಿ ಪಿಂಚಣಿ ಯೋಜನೆಯಲ್ಲಿ (Pension Scheme) ಹೂಡಿಕೆ ಮಾಡಲು ಬಯಸುತ್ತಾರೆ. ನೀವು ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸಿದರೆ ನಿಮಗೆ ಸಾಕಷ್ಟು ಆಯ್ಕೆಗಳು ಸಿಗುತ್ತದೆ ಎನ್ನಬಹುದು.
ಕೇಂದ್ರ ಸರ್ಕಾರದ ಹೊಸ ಪಿಂಚಣಿ ಯೋಜನೆ
ಸದ್ಯ 10 ರೂ. ಗಿಂತಲೂ ಕಡಿಮೆ ಹಣದಲ್ಲಿ ಲಭ್ಯವಿರುವ ಪಿಂಚಣಿ ಯೋಜನೆ ಚಾಲ್ತಿಯಲ್ಲಿರುವುದು ಸಾಕಷ್ಟು ಜನರಿಗೆ ತಿಳಿದಿಲ್ಲ. ಹೌದು , ಕೇಂದ್ರ ಸರ್ಕಾರ ನಿಮಗಾಗಿ ಕೇವಲ 7 ರೂ. ಉಳಿತಾಯದ ಮೂಲಕ ಮಾಸಿಕ ದೊಡ್ಡ ಮೊತ್ತದ ಪಿಂಚಣಿ ಪಡೆಯುವಂತಹ ಹೊಸ ಯೋಜನೆನ್ನು ಪರಿಚಯಿಸಿದೆ. ಸದ್ಯ ಕೇಂದ್ರ ಸರ್ಕಾರದ ಈ ಯೋಜನೆಯಡಿ ಸಾಕಷ್ಟು ಜನರು ಹೂಡಿಕೆ ಮಾಡಿ ಪಿಂಚಣಿಯ ನಿರೀಕ್ಷೆಯಲ್ಲಿದ್ದಾರೆ. ಇದೀಗ ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.
60 ವರ್ಷ ಮೇಲ್ಪಟ್ಟವರಿಗೆ ಕೇಂದ್ರದಿಂದ APY
Atal Pension ಯೋಜನೆಯ ಅಡಿಯಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಮಾಸಿಕ ಪಿಂಚಣಿ ಲಭ್ಯವಾಗಲಿದೆ. ನೀವು ಈ ಯೋಜನೆಗಳಲ್ಲಿ ಎಷ್ಟು ಬೇಗ ಹೂಡಿಕೆ ಮಾಡುತ್ತಿರೋ ಅಷ್ಟು ಹೆಚ್ಚು ಹಣವನ್ನು ಪಡೆಯುವ ಅವಕಾಶ ಇರುತ್ತದೆ. ಅಟಲ್ ಪಿಂಚಣಿ ಯೋಜನೆಯನ್ನು 2015 ರಲ್ಲಿ ಪ್ರಾರಂಭಿಸಲಾಯಿತು. ಈ ಯೋಜನೆಯಲ್ಲಿ ಹೂಡಿಕೆದಾರರು 60 ವರ್ಷ ವಯಸ್ಸಿನವರಾದಾಗ ಪ್ರತಿ ತಿಂಗಳು 1,000 ರೂ. ನಿಂದ 5,000 ರೂ.ವರೆಗೆ ಪಿಂಚಣಿ ಪಡೆಯಬಹುದು.
ಕೇವಲ 7 ರೂ. ಉಳಿಸಿದರೆ 5000 ಮಾಸಿಕ ಪಿಂಚಣಿ ಪಡೆಯಬಹುದು
*ಅಟಲ್ ಪಿಂಚಣಿ ಯೋಜನೆಯಲ್ಲಿ ದಿನಕ್ಕೆ 7 ರೂ. ಗಳಂತೆ ಪ್ರತಿ ತಿಂಗಳು 210 ರೂಪಾಯಿಗಳನ್ನು ಹೂಡಿಕೆ ಅಗತ್ಯವಿದೆ.
*ಮಾಸಿಕ 210 ರೂ. ಗಳ ಹೂಡಿಕೆ ನಿಮಗೆ ನಿವೃತ್ತಿಯ ನಂತರ ಪ್ರತಿ ತಿಂಗಳು 5 ಸಾವಿರ ರೂಪಾಯಿ ಪಿಂಚಣಿ ಸಿಗುವಂತೆ ಮಾಡುತ್ತದೆ.
*ಈ ಯೋಜನೆಗಳಲ್ಲಿ 210 ರೂ.ಗಿಂತ ಕಡಿಮೆ ಹೂಡಿಕೆ ಮಾಡಬಹುದು. ನಿಮ್ಮ ಹೂಡಿಕೆಗೆ ಅನುಗುಣವಾಗಿ ನೀವು ಪ್ರತಿ ತಿಂಗಳು ಪಡೆಯುವ ಪಿಂಚಣಿಯ ಹಣ ನಿರ್ಧಾರವಾಗುತ್ತದೆ.
*18 ವರ್ಷದಿಂದ 40 ವರ್ಷದೊಳಗಿನ ಯಾವುದೇ ವ್ಯಕ್ತಿ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
*ಕನಿಷ್ಠ 20 ವರ್ಷಗಳವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬೇಕು.
*ಯೋಜನೆಯ ಲಾಭ ಪಡೆಯಲು ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ ಮತ್ತು ಉಳಿತಾಯ ಖಾತೆ ಇತ್ಯಾದಿಗಳು ಅವಶ್ಯಕ.