APY Invest: ಕೇವಲ 7 ರೂ ಹೂಡಿಕೆ ಮಾಡಿದರೆ ಕೇಂದ್ರದಿಂದ ಪ್ರತಿ ತಿಂಗಳು ಸಿಗಲಿದೆ 5000 ರೂ, ಇಂದೇ ಯೋಜನೆಗೆ ಸೇರಿಕೊಳ್ಳಿ.
7 ರೂಪಾಯಿಯಿಂದ ಆರಂಭವಾಗುವ ಈ ಯೋಜನೆಗೆ ಅರ್ಜಿ ಸಲ್ಲಿಸಿ ಪ್ರತಿ ತಿಂಗಳು 5000 ರೂ ಲಾಭ ಪಡೆದುಕೊಳ್ಳಿ.
Atal Pension Yojana Small Investment: ದೇಶದಲ್ಲಿ ಅನೇಕ ಹೂಡಿಕೆಯ (Investment) ಯೋಜನೆಗಳು ಜಾರಿಯಲ್ಲಿ ಇದ್ದು ಜನರು ತಮಗೆ ಇಷ್ಟವಾದ ಮತ್ತು ಹೆಚ್ಚು ಲಾಭವಿರುವ ಯೋಜನೆಯಲ್ಲಿ ಹೂಡಿಕೆ ಮಾಡಲು ಇಷ್ಟಪಡುತ್ತಿದ್ದಾರೆ ಎಂದು ಹೇಳಬಹುದು. ಕಡಿಮೆ ಹೂಡಿಕೆ ಮಾಡಿ ಹೆಚ್ಚು ಲಾಭ ತರುವ ಯೋಜನೆಗೆ ಜನರು ಹೆಚ್ಚು ಒಲವು ತೋರುತ್ತಿದ್ದಾರೆ.
ಇದರ ನಡುವೆ ಕೇಂದ್ರ ಸರ್ಕಾರ ಹೂಡಿಕೆ ಮಾಡುವ ಜನರಿಗಾಗಿ ಹಲವು ಯೋಜನೆಯನ್ನ ಜಾರಿಗೆ ತಂದಿದ್ದು ಈ ಯೋಜನೆಯ ಲಾಭವನ್ನ ಜನರು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಕೇಂದ್ರದ ಹಲವು ಪಿಂಚಣಿ ಯೋಜನೆಗಳು ಜಾರಿಯಲ್ಲಿ ಇದ್ದು ಜನರು ತಮ್ಮ ವೃದ್ದಾಪ್ಯದ ವಯಸ್ಸಿನಲ್ಲಿ ಈ ಯೋಜನೆಗಳ ಲಾಭವನ್ನ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು.
ದೇಶದಲ್ಲಿ ಜಾರಿಯಲ್ಲಿ ಹಲವು ಪಿಂಚಣಿ ಯೋಜನೆ
ಹೌದು ದೇಶದಲ್ಲಿ ಸಾಕಷ್ಟು ಸರ್ಕಾರೀ ಪಿಂಚಣಿ ಯೋಜನೆಗಳು ಜಾರಿಯಲ್ಲಿದ್ದು ಜನರು ಪೋಸ್ಟ್ ಆಫೀಸ್ ಮತ್ತು ಬ್ಯಾಂಕುಗಳಲ್ಲಿ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯ ಕೇಂದ್ರ ಸರ್ಕಾರದ ಈ ಪಿಂಚಣಿ ಯೋಜನೆಯ ಅಡಿಯಲ್ಲಿ ಅತೀ ಸಣ್ಣ ಮೊತ್ತದ ಹಣವನ್ನ ಹೂಡಿಕೆ ಮಾಡುವುದರ ಮೂಲಕ ಪ್ರತಿ ತಿಂಗಳು ಸುಮಾರು 5000 ರೂ ಲಾಭದ ಪಿಂಚಣಿ ಹಣವನ್ನ ಪಡೆದುಕೊಳ್ಳಬಹುದು.
ಈ ಪಿಂಚಣಿ ಯೋಜನೆಯಲ್ಲಿ 7 ರೂ ಹೂಡಿಕೆ ಮಾಡಿದರೆ ಸಿಗಲಿದೆ 5000 ರೂ
ಹೌದು ಕೇಂದ್ರ ಸರ್ಕಾರದ ಅಟಲ್ ಪಿಂಚಣಿ ಯೋಜನೆಯ (Atal Pension Scheme) ಅಡಿಯಲ್ಲಿ 7 ರೂ ಹೂಡಿಕೆ ಮಾಡುವುದರ ಮೂಲಕ ಪ್ರತಿ ತಿಂಗಳು 5000 ರೂಪಾಯಿಯ ತನಕ ಪಿಂಚಣಿ ಲಾಭವನ್ನ ಪಡೆದುಕೊಳ್ಳಬಹುದು. ಇನ್ನು ಈ ಯೋಜನೆಯಲ್ಲಿ ಕೆಲವು ಷರತ್ತುಗಳು ಕೂಡ ಇದ್ದು ಪಿಂಚಣಿ ಹಣ ಜನರ ಹೂಡಿಕೆಯ ಮೇಲೆ ನೇರವಾಗಿ ನಿರ್ಧಾರ ಆಗಿರುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ.
7 ರೂ ಹೂಡಿಕೆ ಮಾಡಿ 5000 ರೂ ಪಡೆಯುವುದು ಹೇಗೆ
ಅಟಲ್ ಪಿಂಚಣಿ ಯೋಜನೆಯ ಅಡಿಯಲ್ಲಿ ಪ್ರತಿನಿತ್ಯ 7 ರೂಪಾಯಿಯನ್ನು ಹೂಡಿಕೆ ಮಾಡಿ ಯೋಜನೆಯ ಮುಕ್ತಾಯದ ನಂತರ ಪ್ರತಿ ತಿಂಗಳು 5000 ರೂ ಪಿಂಚಣಿ ಪಡೆಯಬಹುದು. ಈ ಯೋಜನೆ ಒಂದು ಗ್ಯಾರೆಂಟಿ ಯೋಜನೆ ಆಗಿದ್ದು ಈ ಯೋಜನೆಯ ಅಡಿಯಲ್ಲಿ 1000 ರೂಪಾಯಿಯಿಂದ 5000 ರೂಪಾಯಿಯ ತನಕ ಪಿಂಚಣಿ ಲಾಭವನ್ನ ಪಡೆದುಕೊಳ್ಳಬಹುದು.
ನಿಮ್ಮ ವಯಸ್ಸು 18 ವರ್ಷ ಆಗಿದ್ದು ನೀವು ಪ್ರತಿನಿತ್ಯ 7 ರೂ, ಅಂದರೆ ತಿಂಗಳು 210 ರೂ ಹೂಡಿಕೆ ಮಾಡಬೇಕಾಗುತ್ತದೆ. ಪ್ರತಿ ತಿಂಗಳು ಇಷ್ಟು ಹಣವನ್ನ ಹೂಡಿಕೆ ಮಾಡಿದರೆ 60 ವರ್ಷಗಳ ನಂತರ ನಿಮಗೆ ಪ್ರತಿ ತಿಂಗಳು 5000 ರೂ ಪಿಂಚಣಿ ಬರುತ್ತದೆ. ಅದೇ ರೀತಿಯಲ್ಲಿ ನೀವು ತಿಂಗಳು 1000 ರೂ ಪಿಂಚಣಿ ಪಡೆಯಲು ಬಯಸಿದರೆ ನೀವು ಪ್ರತಿ ತಿಂಗಳು 42 ರೂ ಹಣವನ್ನ ಈ ಯೋಜನೆಯಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.
ಪತಿ ಪತ್ನಿ ಇಬ್ಬರು ಸಿಗಲಿದೆ 5000 ರೂ
ಹೌದು ಈ ಅಟಲ್ ಪಿಂಚಣಿ ಯೋಜನೆಯ ಅಡಿಯಲ್ಲಿ ಪತಿ ಪತ್ನಿ ಇಬ್ಬರೂ ಕೂಡ ಹೂಡಿಕೆ ಮಾಡಬಹುದಾಗಿದ್ದು ಇಬ್ಬರೂ ಪ್ರತಿ ತಿಂಗಳು ಒಟ್ಟಾಗಿ 10000 ರೂ ಪಿಂಚಣಿ ಹಣವನ್ನ ಪಡೆದುಕೊಳ್ಳಬಹುದು. ಇನ್ನು ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನ ತಿಳಿದುಕೊಳ್ಳಲು ಹತ್ತಿರದ ಅಂಚೆ ಇಲಾಖೆಗೆ ಭೇಟಿ ನೀಡಬಹುದಾಗಿದೆ.