Atal Pension Scheme 5000 Rs Pension Details: ಕೇಂದ್ರ ಸರ್ಕಾರ ಮಧ್ಯಮ ವರ್ಗದ ಜನರಿಗಾಗಿ ಹಾಗು ಬಡವರಿಗಾಗಿ ಹಲವಾರು ಉಳಿತಾಯ ಯೋಜನೆಗಳನ್ನ ಜಾರಿಗೆ ತಂದಿದೆ. ಉತ್ತಮ ಭವಿಷ್ಯಕ್ಕಾಗಿ ಇಂದೇ ಹೂಡಿಕೆ ಮಾಡುವುದು ಬಹಳ ಅವಶ್ಯಕ. ಇದೀಗ ಕೇಂದ್ರ ಸರ್ಕಾರ ಅಸಂಘಟಿತ ವಲಯದ ಕಾರ್ಮಿಕರಿಗಾಗಿಯೇ ಅಟಲ್ ಪೆನ್ಷನ್ ಯೋಜನೆ ಯನ್ನು ಜಾರಿಗೆ ತಂದಿದೆ. ಈ ಯೋಜನೆ ಅಸಂಘಟಿತ ಉದ್ಯಮದ ಉದ್ಯೋಗಿಗಳಿಗೆ ಸಾಕಷ್ಟು ನೆರವಾಗಿದೆ ಅಂದರೆ ತಪ್ಪಾಗಲ್ಲ. ಇದೀಗ ನಾವು ಅಟಲ್ ಪೆನ್ಷನ್ ಯೋಜನೆಯ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನ ತಿಳಿದುಕೊಳ್ಳೋಣ.
ಅಟಲ್ ಪೆನ್ಷನ್ ಯೋಜನೆ
ಈ ಯೋಜನೆಯನ್ನು 2015 ರಲ್ಲಿ ಭಾರತದ ನರೇಂದ್ರ ಮೋದಿ ಅವರು ಜಾರಿಗೆ ತಂದಿದ್ದಾರೆ. ಭಾರತದ ನಾಗರೀಕರಿಗಾಗಿ, ವಿಶೇಷವಾಗಿ ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಇರುವ ಒಂದು ಪಿಂಚಣಿ ಯೋಜನೆಯಾಗಿದೆ. ಯೋಜನೆಯ ಕೊಡುಗೆಗೆ ಅನುಗುಣವಾಗಿ 1000 ದಿಂದ 5000 ರೂ. ವರೆಗೆ ನೀವು ಪಿಂಚಣಿಯನ್ನ ಪಡೆದುಕೊಳ್ಳಬಹುದಾಗಿದೆ. ಹೂಡಿಕೆದಾರನ ಮರಣದ ನಂತರ ಆತನ ಪತ್ನಿ ಯೋಜನೆಯ ಹಣವನ್ನ ಪಡೆದುಕೊಳ್ಳುತ್ತಾರೆ.
ಅಟಲ್ ಪಿಂಚಣಿ ಯೋಜನೆಯ ಅರ್ಹತೆ..?
* ಭಾರತೀಯ ನಾಗರಿಕನಾಗಿರಬೇಕು
* ವಯಸ್ಸಿನ ಮಿತಿ 18 ರಿಂದ 40 ವರ್ಷದೊಳಗೆ ಇರಬೇಕು.
* ತೆರಿಗೆ ಪಾವತಿಸುವವರು ಅರ್ಜಿ ಸಲ್ಲಿಸುವಂತಿಲ್ಲ.
* ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ನಲ್ಲಿ ಸೇವಿಂಗ್ ಅಕೌಂಟ್ ಇರಬೇಕು.
ಅಟಲ್ ಪಿಂಚಣಿ ಯೋಜನೆಯ ಹೂಡಿಕೆಯ ವಿವರ
* 18 ವರ್ಷ ವಯಸ್ಸಿನವರು 5000 ರೂ. ಪಿಂಚಣಿಗಾಗಿ ತಿಂಗಳಿಗೆ 210 ರೂ. ಹೂಡಿಕೆ ಮಾಡಬೇಕು.
* 20 ವರ್ಷ ವಯಸ್ಸಿನವರು 5000 ರೂ. ಪಿಂಚಣಿಗಾಗಿ ತಿಂಗಳಿಗೆ 248 ರೂ. ಹೂಡಿಕೆ ಮಾಡಬೇಕು.
* 25 ವರ್ಷ ವಯಸ್ಸಿನವರು 5000 ರೂ. ಪಿಂಚಣಿಗಾಗಿ ತಿಂಗಳಿಗೆ 335 ರೂ. ಹೂಡಿಕೆ ಮಾಡಬೇಕು.
* 30 ವರ್ಷ ವಯಸ್ಸಿನವರು 5000 ರೂ. ಪಿಂಚಣಿಗಾಗಿ ತಿಂಗಳಿಗೆ 464 ರೂ. ಹೂಡಿಕೆ ಮಾಡಬೇಕು.
* 35 ವರ್ಷ ವಯಸ್ಸಿನವರು 5000 ರೂ. ಪಿಂಚಣಿಗಾಗಿ ತಿಂಗಳಿಗೆ 671 ರೂ. ಹೂಡಿಕೆ ಮಾಡಬೇಕು.
* 40 ವರ್ಷ ವಯಸ್ಸಿನವರು 5000 ರೂ. ಪಿಂಚಣಿಗಾಗಿ ತಿಂಗಳಿಗೆ 1454 ರೂ. ಹೂಡಿಕೆ ಮಾಡಬೇಕು.
ಈ ರೀತಿಯಾಗಿ ಹೂಡಿಕೆ ಮಾಡಿದರೆ 60 ವರ್ಷದ ನಂತರ ನೀವು ತಿಂಗಳಿಗೆ 5000 ರೂ. ಪಿಂಚಣಿಯನ್ನು ಪಡೆದುಕೊಳಬಹುದು. ನಿಮ್ಮ ಮರಣದ ನಂತರ ನಿಮ್ಮ ನಾಮಿನಿಗೆ ಗೆ ಈ ಪಿಂಚಣಿ ಹಣ ಸೇರುತ್ತದೆ.
ಅಟಲ್ ಪಿಂಚಣಿ ಯೋಜನೆಗೆ ರೀತಿಯಾಗಿ ಅರ್ಜಿ ಸಲ್ಲಿಸಿ
ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು ಅಥವಾ UMANG app ಅಥವಾ PFRDA ಸೈಟ್ ನಲ್ಲಿ ರಿಜಿಸ್ಟರ್ ಮಾಡಿಕೊಂಡು ಆಧಾರ್ ಲಿಂಕ್ ಮಾಡಿ ನಾಮಿನೇಟ್ ಆಯ್ಕೆ ಮಾಡಿ. ಹೆಚ್ಚಿನ ಮಾಹಿತಿಗೆ 1800 -889-1030 ಗೆ ಕರೆ ಮಾಡಿ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

