Atam GP Race Bike: ಮಕ್ಕಳಿಗಾಗಿ ಬಂತು ಅತಿ ಕಡಿಮೆ ಬೆಲೆಯ ಬೈಕ್, ಬುಕ್ ಮಾಡುತ್ತಿರುವ ಪೋಷಕರು

ಸಣ್ಣ ಮಕ್ಕಳಿಗಾಗಿಯೇ ಬಿಡುಗಡೆಯಾದ ಹೊಸ ರೇಸ್ ಬೈಕ್.

Atam GP Race Bike Price: ದೇಶಿಯ ಮಾರುಕಟ್ಟೆಯಲ್ಲಿ ಹೊಸ ಹೊಸ ಬೈಕ್ ಗಳು, ಸ್ಕೂಟರ್ ಗಳು ಬಿಡುಗಡೆಯಾಗುತ್ತಲೇ ಇದೆ. ಭಾರತದಲ್ಲಿ ಇದೀಗ ಸಣ್ಣ ಮಕ್ಕಳಿಗಾಗಿಯೇ ಹೊಸ ಬೈಕ್ ಒಂದು ಬಿಡುಗಡೆಯಾಗಿದೆ. ಸಿ ಆರ್ ಎ ಮೋಟಾರ್ ಸ್ಪೋರ್ಟ್ಸ್ ಮಕ್ಕಳಿಗಾಗಿಯೇ ಮೋಟಾರ್ ಸೈಕಲನ್ನು ಪರಿಚಯಿಸಿದೆ.

ಅಟಂ ಜಿಪಿ 1 ರೇಸ್ ಬೈಕ್ ನ ಬೆಲೆ
ಕೊಯಮತ್ತೂರು ಕಂಪನಿ ಮಕ್ಕಳಿಗಾಗಿಯೇ ವಿಶೇಷ ಅಟಂ ಜಿಪಿ 1 ರೇಸ್ ಬೈಕ್ ವಿನ್ಯಾಸ ಮಾಡಿದೆ. 10 ರಿಂದ 17 ವರ್ಷ ವಯಸ್ಸಿನ ಮಕ್ಕಳನ್ನು ಗುರಿಯಾಗಿಸಿ ಈ ಬೈಕನ್ನು ಬಿಡುಗಡೆ ಮಾಡಲಾಗಿದೆ. ಇದರ ಬೆಲೆ 2.75 ಲಕ್ಷ ರೂಪಾಯಿ ಆಗಿದೆ. ಹೆಚ್ಚುವರಿಯಾಗಿ ಜಿ ಎಸ್ ಟಿ ಪಾವತಿಸಬೇಕಾಗುತ್ತದೆ. ಇದು ಭಾರತದಲ್ಲಿ ಮಿನಿ ಜಿಪಿ ಮೋಟಾರ್ ಸೈಕಲ್ ಸೆಗ್ ಮೆಂಟ್ ರಚನೆಯಾಗಲು ನೆರವಾಗುವ ನಿರೀಕ್ಷೆಯಿದೆ.

Atom GP race bike launched for kids in India
Image Credit: Autox

ಅಟಂ ಜಿಪಿ 1 ರೇಸ್ ಬೈಕ್
ಭವಿಷ್ಯದಲ್ಲಿ ಬೈಕ್ ರೇಸರ್ ಆಗಲು ಇಷ್ಟಪಡುವ ಮಕ್ಕಳಿಗೆ ಈ ಮೋಟಾರ್ ಸೈಕಲ್ ದೊಡ್ಡ ನೆರವಾಗುತ್ತದೆ. ದೊಡ್ಡ ದೊಡ್ಡ ರೇಸ್ ಬೈಕ್ ಗಳಿಗೆ ಕಾಲಿಡುವ ಮೊದಲು ಈ ಪುಟ್ಟ ಬೈಕ್ ಗಳಲ್ಲಿ ಮಕ್ಕಳು ಬೈಕ್ ರೇಸ್ ಕೌಶಲ ಕಲಿಯಬಹುದು. ಆದರೆ ಅಟಂ ಜಿಪಿ 1 ಬೈಕನ್ನು ರಸ್ತೆಯಲ್ಲಿ ಚಲಾಯಿಸಲು ಭಾರತದ ಕಾನೂನಿನಲ್ಲಿ ಅವಕಾಶವಿಲ್ಲ. ಇದಕ್ಕಾಗಿಯೇ ವಿಶೇಷ ಟ್ರ್ಯಾಕ್ ರಚಿಸಿ ಅದರಲ್ಲಿ ಮಕ್ಕಳು ಕಲಿಯಬಹುದಾಗಿದೆ.

ಕಂಪನಿಯು ಸತತ ಮೂರೂ ವರ್ಷಗಳ ಪ್ರಯತ್ನದ ಬಳಿಕ ಅಟಂ ಜಿಪಿ 1 ಎಂಬ ಮಕ್ಕಳ ರೇಸ್ ಬೈಕನ್ನು ಅಭಿವೃದ್ಧಿಪಡಿಸಿದೆ. 2020 ರಲ್ಲಿ ಕಂಪನಿಯು ಈ ಬೈಕ್ ನ ಮೊದಲ ಪ್ರೋಟೋಟೈಪ್ ಮಾದರಿಯನ್ನು ಬಿಡುಗಡೆ ಮಾಡಿತ್ತು. ಬಳಿಕ ಒಂದು ವರ್ಷದ ಬಳಿಕ ಎರಡನೇ ಪ್ರೋಟೊಟೈಪ್ ಮಾದರಿಯನ್ನು ಬಿಡುಗಡೆ ಮಾಡಿ ಹಲವು ಟ್ರಕ್ ಗಳಲ್ಲಿ ಟೆಸ್ಟ್ ಮಾಡಲಾಗಿತ್ತು. ಕರಿ ಮೊಟ್ಟಾರ್ ಸ್ಪೀಡ್ ವೇ, ಮದ್ರಾಸ್ ಮೋಟಾರ್ ರೇಸ್ ಟ್ರಾಕ್, ಚಿಕಾನ್ ಸರ್ಕ್ಯೂಟ್, ಹೈದರಾಬಾದ್ ಯು ಎ ಇ ಯ ಕರಿ ಟೌನ್, ಮಾಕೋ ಕಾರ್ಟೋಪಿಯಾ ಮುಂತಾದ ಟ್ರಕ್ ಗಳಲ್ಲಿ ಇದನ್ನು ಟೆಸ್ಟ್ ಮಾಡಲಾಗಿತ್ತು.

Atom GP race bike launched for kids in India
Image Credit: Autox

ಅಟಂ ಜಿಪಿ 1 ರೇಸ್ ಬೈಕ್ ನ ವಿಶೇಷತೆ
ಅಟಂ ಜಿಪಿ 1 ರೇಸ್ ಬೈಕ್ ನಲ್ಲಿ 159.3 ಸಿಸಿಯ ಸಿಂಗಲ್ ಸಿಲಿಂಡರ್, ಎರಡು ಕವಾಟ, ಕಾರ್ಬೋರೇಟರ್ ಎಂಜಿನ್ ಇದೆ. ಇದು 8 ಸಾವಿರ ಆವರ್ತನಕ್ಕೆ 15 ಬಿ ಎಚ್ ಪಿ ಮತ್ತು 7 ಸಾವಿರ ಆವರ್ತನಕ್ಕೆ 13.85 ಟಾರ್ಕ್ ಬಿಡುಗಡೆ ಮಾಡುತ್ತದೆ. ಈ ಎಂಜಿನ್ ಗೆ ಐದು ಸೀಡ್ ನ ಗಿಯರ್ ಬಾಕ್ಸ್ ಇದೆ. ಈ ಬೈಕ್ ಗೆ ಕಸ್ಟಮ್ ವಿನ್ಯಾಸದ ಫ್ರೆಮ್ ಗಳನ್ನೂ ಹಾಕಲಾಗಿದೆ.

Join Nadunudi News WhatsApp Group

Join Nadunudi News WhatsApp Group