Ather EV: ಕೇವಲ 86 ಸಾವಿರಕ್ಕೆ ಮನೆಗೆ ತನ್ನಿ 105 Km ರೇಂಜ್ ನ Ather 450s ಎಲೆಕ್ಟ್ರಿಕ್ ಸ್ಕೂಟರ್, ದಿವಾಳಿ ಹಬ್ಬದ ಆಫರ್.

ಸಿಂಗಲ್ ಚಾರ್ಜ್ ನಲ್ಲಿ 105 Km ಮೈಲೇಜ್ ನೀಡುವ ನೂತನ ಎಲೆಕ್ಟ್ರಿಕ್ ಸ್ಕೂಟರ್.

Ather 450S Electric Scooter Discount: ಮಾರುಕಟ್ಟೆಯಲ್ಲಿ Electric ಮಾದರಿಯಲ್ಲಿ ವಿವಿದ Car , Bike Scooter ಗಳು ಹೆಚ್ಚು ಪರಿಚಯವಾಗುತ್ತಿದೆ. ಮಾರುಕಟ್ಟೆಯಲ್ಲಿ Electric Scooter ಗಳು ಕೂಡ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ಭಾರತೀಯ ಆಟೋ ವಲಯದಲ್ಲಿ Electric ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಗ್ರಾಹಕರ ಹೆಚ್ಚಾಗಿ Electric ವಾಹನಗಳ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ.

ಇನ್ನು ಮಾರುಕಟ್ಟೆಯಲ್ಲಿ ಕಚ್ಚಾ ತೈಲಗಳ ಬೆಲೆ ಏರಿಕೆಯು ಒಂದು ರೀತಿಯಲ್ಲಿ Electric ವಾಹನಗಳ ಬೇಡಿಕೆಗೆ ಕಾರಣವಾಗಿದೆ ಎನ್ನಬಹುದು. ಇದೀಗ ದೇಶದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ Ather Energy ತನ್ನ ನೂತನ ಮಾದರಿಯ Electric Scooter ಅನ್ನು ಪರಿಚಯಿಸುವ ಮೂಲಕ ಕಂಪನಿಯು ಸ್ಕೂಟರ್ ಖರೀದಿಗೆ ಆಕರ್ಷಕ ರಿಯಾಯಿತಿಯನ್ನು ಘೋಷಿಸಿದೆ. Ather ನ ಯಾವ ಮಾದರಿಯ ಖರೀದಿಗೆ ಆಫರ್ ಲಭ್ಯವಿದೆ…? ಹಾಗೆಯೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಯಲ್ಲಿ ಏನೆಲ್ಲಾ ರಿಯಾಯಿತಿ ಸಿಗಲಿದೆ? ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

Ather 450S Electric Scooter
Image Credit: Bikewale

Ather 450S Electric Scooter
ಇದೀಗ ದೇಶದ ಜನಪ್ರಿಯ Electric ದ್ವಿಚಕ್ರ ವಾಹನ ತಯಾರಕ ಕಂಪನಿಯಾದ Ather ತನ್ನ ಹೊಸ EV ಯನ್ನು ಪರಿಚಯಿಸಿದೆ. Ather Energy ತನ್ನ ಹೊಚ್ಚ ಹೊಸ Ather 450S Electric Scooter ಬಿಡುಗಡೆ ಮಾಡಿದೆ. ಹೆಚ್ಚಿನ ಮೈಲೇಜ್ ನೊಂದಿಗೆ ಗ್ರಾಹಕರಿಗೆ ಕಡಿಮೆ ಬೆಲೆಗೆ ಲಭ್ಯವಾಗುವಂತೆ ಕಂಪನಿ ತನ್ನ EV ಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಒಮ್ಮೆ ಚಾರ್ಜ್ ಮಾಡಿದರೆ 105 Km ಮೈಲೇಜ್
ನೂತನ ಮಾದರಿಯ Ather 450S Electric Scooter ನಲ್ಲಿ 2.9 kWh ಗಿಂತಲೂ ಹೆಚ್ಚಿನ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ. ಈ ಬ್ಯಾಟರಿ ಪ್ಯಾಕಪ್ ನ ಮೂಲಕ ಒಂದೇ ಚಾರ್ಜ್ ನಲ್ಲಿ ಬರೋಬ್ಬರಿ 105 ಕಿಲೋಮೀಟರ್ ದೂರ ಚಲಿಸಬಹುದಾಗಿದೆ. ಇನ್ನು August 11 ರಂದು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ನೂತನ Ather 450S Electric Scooter 18 ಕ್ಕೂ ಹೆಚ್ಚು ನ್ಯಾವಿಗೇಶನ್ ಪಾಯಿಂಟ್ ಗಳನ್ನೂ ಪಡೆಯಲಿದೆ.

Ather 450S Electric Scooter Discount
Image Credit: Hindustantimes

Ather 450S ಸ್ಕೂಟರ್ ಖರೀದಿಗೆ ಏನೆಲ್ಲಾ ಆಫರ್ ಲಭ್ಯವಿದೆ..?
ಮಾರುಕಟ್ಟೆಯಲ್ಲಿ Ather 450S Electric Scooter ನ ಮೂಲ ಬೆಲೆ 1,32,550 ರೂ. ಆಗಿದೆ. ನೀವು Ather 450S Electric Scooter ಅನ್ನು ಖರೀದಿಸಿದರೆ, ರೂ. 5000 ಹಬ್ಬದ ರಿಯಾಯಿತಿಯನ್ನು ಪಡೆಯಬಹುದು. ಇದರ ಜೊತೆಗೆ ಕೊರ್ಪೊರೇಟ್ ರಿಯಾಯಿತಿ ರೂ. 1500, 2 ವಾಟ್ ನ ವಿನಿಮಯ ಮೌಲ್ಯ ರೂ. 40,000 ಅನ್ನು ಪಡೆಯಬಹುದು. ನೀವು ಈ ಎಲ್ಲ ರಿಯಾಯಿತಿಯನ್ನು ಬಳಸಿಕೊಳ್ಳುವ ಮೂಲಕ Ather 450S Electric Scooter ಅನ್ನು ಕೇವಲ 86,050 ರೂ. ಗಳಲ್ಲಿ ಖರೀದಿಸದಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group