ATM Card: ATM ನಿಂದ ಹಣ ತಗೆಯುವಾಗ ಈ ತಪ್ಪು ಮಾಡಿದರೆ ನಿಮ್ಮ ಖಾತೆ ಖಾಲಿಯಾಗಲಿದೆ, ATM ಇದ್ದವರಿಗೆ ಹೊಸ ರೂಲ್ಸ್.
ATM ನಲ್ಲಿ ಹಣ ತೆಗೆಯುವ ಸಂದರ್ಭದಲ್ಲಿ ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಖಾತೆಯಲ್ಲಿನ ಸಂಪೂರ್ಣ ಹಣವನ್ನು ಕಳೆದುಕೊಳ್ಳೊಬೇಕಾಗುತ್ತದೆ.
ATM Card Fraud: ATM ಕಾರ್ಡ್ ಸಾಮಾನ್ಯವಾಗಿ ಎಲ್ಲರು ಬಳಸುತ್ತಾರೆ. ಬ್ಯಾಂಕ್ ಖಾತೆ ಹೊಂದಿರುವ ಜನರು ATM ಕಾರ್ಡ್ ಬಳಸುವುದು ಸರ್ವೇ ಸಾಮಾನ್ಯ ಕೂಡ ಆಗಿದೆ. ATM ಕಾರ್ಡ್ ಬಳಸುವವರು ಮಾಡಿದ ಕೆಲವು ತಪ್ಪುಗಳ ಕಾರಣ ದೇಶದಲ್ಲಿ ವಂಚನೆ ಹೆಚ್ಚಾಗುತ್ತಿದೆ.
ಗ್ರಾಹಕರು ATM ನಲ್ಲಿ ಹಣವನ್ನು ತೆಗೆಯಲು ಸಾಮಾನ್ಯವಾಗಿ ಡೆಬಿಟ್ ಕಾರ್ಡ್ ಅನ್ನು ಬಳಸುತ್ತಾರೆ. ಇನ್ನು ನೀವು ಎಟಿಎಂ ನಲ್ಲಿ ಹಣ ತೆಗೆಯುವ ಸಂದರ್ಭದಲ್ಲಿ ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಖಾತೆಯಲ್ಲಿನ ಸಂಪೂರ್ಣ ಹಣವನ್ನು ಕಳೆದುಕೊಳ್ಳೊಬೇಕಾಗುತ್ತದೆ.
*ATM ಪರಿಶೀಲನೆ
ನೀವು ಎಟಿಎಂಗೆ ಪ್ರವೇಶಿಸಿದಾಗ ಮಾಡಿದಾಗ ಅಲ್ಲಿ ಯಾವುದಾದರು ಕ್ಯಾಮರಾ ಇದೆಯೇ ಎಂದು ಪರಿಶೀಲನೆ ಮಾಡಬೇಕು. ಹಾಗೆ ನೀವು ATM Card ಸ್ಲಾಟ್ ಅನ್ನು ಸಹ ಪರಿಶೀಲಿಸಬೇಕು. ಅನೇಕ ಬಾರಿ ದುಷ್ಕರ್ಮಿಗಳು ಕಾರ್ಡ್ ಸ್ಲಾಟ್‌ಗಳ ಸುತ್ತಲೂ ಕಾರ್ಡ್ ಚಿಪ್‌ಗಳನ್ನು ಇರಿಸುತ್ತಾರೆ ಅದು ATM Card Deta ಮತ್ತು Pin Code ಮಾಹಿತಿಯನ್ನು ಕದಿಯಬಹುದು.
*ATM ಪಿನ್
ATM ಕಾರ್ಡ್ ನಲ್ಲಿ ಮುಖ್ಯವಾದದ್ದು ATM ಪಿನ್. ನಮ್ಮ ATM ಕಾರ್ಡ್ ಪಿನ್ ಅನ್ನು ಯಾರೊಬ್ಬರಿಗೂ ಸಹ ನೀಡಬಾರದು. ನೀವು ATM ನಲ್ಲಿ ಹಣ ಡ್ರಾ ಮಾಡುವಾಗ ಯಾರಾದರೂ ಅಲ್ಲಿ ಇದ್ದರೆ ಅವರನ್ನು ಹೊರಗೆ ಹೋಗಲು ಹೇಳಿ ನಂತ್ರ ಪಿನ್ ನಮೂದಿಸಿ.
Pin ನಮೂದಿಸುವಾಗ ನಿಮ್ಮ ಕೈಯಿಂದ ATM ಕೀಬೋರ್ಡ್ ಅನ್ನು ಮುಚ್ಚಿ ಮತ್ತು ನಿಮ್ಮ ಪಿನ್ ಅನ್ನು ಯಾರೂ ನೋಡದಂತೆ ಯಂತ್ರಕ್ಕೆ ಸಾಧ್ಯವಾದಷ್ಟು ಹತ್ತಿರ ನಿಂತುಕೊಳ್ಳಿ.
*ATM ಕಾರ್ಡ್ ಅನ್ನು ಇನ್ನೊಬ್ಬರಿಗೆ ಕೊಡಬೇಡಿ
ಆತುರದಲ್ಲಿ ನಾವು ಹಣ ಡ್ರಾ ಮಾಡಲು ಸ್ನೇಹಿತರಿಗೆ ಅಥವಾ ಸಂಬಂಧಿಕರಿಗೆ ATM ಕಾರ್ಡ್‌ಗಳನ್ನು ನೀಡುತ್ತೇವೆ. ಇಂತಹ ತಪ್ಪುಗಳನ್ನು ಯಾವತ್ತೂ ಮಾಡಬಾರದು ಏಕೆಂದರೆ ವಂಚನೆಯಲ್ಲಿ ಆಪ್ತರೇ ಹೆಚ್ಚು ಭಾಗಿಯಾಗಿದ್ದಾರೆ ಎಂಬಂತಹ ವರದಿಗಳು ಬರುತ್ತಿವೆ.
*ATM ನಲ್ಲಿ ಅಪರಿಚಿತರ ಸಹಾಯ ಪಡೆಯಬೇಡಿ
ATM ನಲ್ಲಿ ಇನ್ನೊಬ್ಬರ ಸಹಾಯ ತೆಗೆದುಕೊಳ್ಳುದು ಉತ್ತಮವಲ್ಲ. ATM ಬಳಿ ಯಾರನ್ನೂ ಕರೆಯಬೇಡಿ ಮತ್ತು ನಿಮ್ಮ ಕಾರ್ಡ್ ಮತ್ತು ಪಿನ್ ಮರೆತುಹೋದರೂ ಅವರಿಗೆ ಹೇಳಬೇಡಿ.
*ATM ನಿಂದ ಹಣ ತೆಗೆದ ನಂತರ ಕ್ಯಾನ್ಸಲ್ ಬಟನ್ ಒತ್ತುವುದು ಕಡ್ಡಾಯ
ಹೌದು ATM ನಿಂದ ಹಣ ಹಿಂಪಡೆದ ನಂತರ ಕ್ಯಾನ್ಸಲ್ ಬಟನ್ ಒತ್ತುವುದು ಬಹಳ ಮುಖ್ಯ. ಆಗ ನಿಮ್ಮ ವಹಿವಾಟು ಪೂರ್ಣಗೊಂಡಿದೆ ಎಂದು ಖಚಿತವಾಗುತ್ತದೆ. ಹೀಗೆ ಮಾಡುದರಿಂದ ನಿಮ್ಮ ಕಾರ್ಡ್ ನ ಮಾಹಿತಿ ಕಳೆದುಹೋಗುದಿಲ್ಲ.