ಏಟಿಎಂ ಕಾರ್ಡ್ ಯಾರ್ಟ್ ತಾನೇ ಬಳಕೆ ಮಾಡುವುದಿಲ್ಲ ಹೇಳಿ, ಬ್ಯಾಂಕ್ ಖಾತೆ ಹೊಂದಿರುವ ಪ್ರತಿಯೊಬ್ಬ ಮಾನವ ಕೂಡ ಏಟಿಎಂ ಕಾರ್ಡ್ ಬಳಕೆ ಮಾಡುತ್ತಾನೆ ಎಂದು ಹೇಳಬಹುದು. ಹಣವನ್ನ ಸುಲಭವಾಗಿ ತಗೆಯಬಹುದಾದ ಕಾರಣ ಜನರು ಸಾಮಾನ್ಯವಾಗಿ ಏಟಿಎಂ ಕಾರ್ಡ್ ಬಳಕೆ ಮಾಡುತ್ತಾರೆ ಎಂದು ಹೇಳಬಹುದು. ಇನ್ನು ನಿಮಗೆಲ್ಲ ತಿಳಿದಿರುವ ಹಾಗೆ ಒಂದು ಏಟಿಎಂ ಕಾರ್ಡ್ ನಲ್ಲಿ ದಿನಕ್ಕೆ ಇಂತಿಷ್ಟು ಅಂತ ಹಣವನ್ನ ನಾವು ಬ್ಯಾಂಕ್ ಗೆ ಹೋಗದೆ ತಗೆಯಬಹುದಾಗಿದೆ. ಇನ್ನು ಬ್ಯಾಂಕಿನವರು ಏಟಿಎಂ ಕಾರ್ಡ್ ಬಳಕೆ ಮಾಡುವವರಿಗೆ ವರ್ಷಕ್ಕೆ ಇಂತಿಷ್ಟು ಅಂತ ಶುಲ್ಕವನ್ನ ಕೂಡ ವಿಧಿಸುತ್ತದೆ ಎಂದು ಹೇಳಬಹುದು. ಹೌದು ನಾವು ಏಟಿಎಂ ಬಳಕೆ ಮಾಡಲಿ ಮಾಡದೆ ಇರಲಿ ನಾವು ಬ್ಯಾಂಕಿಂದ ಏಟಿಎಂ ಕಾರ್ಡ್ ಪಡೆದುಕೊಂಡರೆ ಪ್ರತಿ ವರ್ಷ ಇಂತಿಷ್ಟು ಅಂತ ಹಣವನ್ನ ಕಡ್ಡಾಯವಾಗಿ ಶುಲ್ಕವನ್ನ ಕಟ್ಟಬೇಕು ಎಂದು ಹೇಳಬಹುದು.
ಇನ್ನು ಈಗ ವಿಷಯಕ್ಕೆ ಬರುವುದಾದರೆ ದೇಶದಲ್ಲಿ ಏಟಿಎಂ ಕಾರ್ಡ್ ಹೊಂದಿರುವ ಎಲ್ಲರಿಗೂ ಕೂಡ ದೊಡ್ಡ ಸುದ್ದಿಯೊಂದು ಬಂದಿದ್ದು ಜನರು ಈ ಸುದ್ದಿಯನ್ನ ಅವಶ್ಯಕವಾಗಿ ತಿಳಿದುಕೊಳ್ಳಬೇಕು ಎಂದು ಹೇಳಬಹುದು. ಮುಂದಿನ ಆಗಸ್ಟ್ ಒಂದನೇ ತಾರೀಕಿನಿಂದ ದೇಶದಲ್ಲಿ ಏಟಿಎಂ ಕಾರ್ಡ್ ಬಳಕೆ ಮಾಡುವ ಎಲ್ಲಾ ಜನರಿಗೆ ಹೊಸ ನಿಯಮ ಜಾರಿಗೆ ಬರಲಿದ್ದು ಆ ನಿಯಮವನ್ನ ಜನರು ಅವಶ್ಯಕವಾಗಿ ತಿಳಿದುಕೊಳ್ಳಬೇಕು ಎಂದು ಹೇಳಬಹುದು. ಹಾಗಾದರೆ ಆ ಹೊಸ ನಿಯಮ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಹೌದು ಸ್ನೇಹಿತರೆ ಜನರ ಬ್ಯಾಂಕಿನ ವ್ಯವಹಾರದ ಮೇಲೆ ಕಣ್ಣನ್ನ ಇಟ್ಟಿರುವ ಬ್ಯಾಂಕುಗಳ ಬ್ಯಾಂಕ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈಗ ಏಟಿಎಂ ಕಾರ್ಡುಗಳ ಶುಲ್ಕಗಳನ್ನ ಹೆಚ್ಚಳ ಮಾಡಲು ದೇಶದ ಎಲ್ಲಾ ಬ್ಯಾಂಕುಗಳಿಗೆ ಅನುಮತಿಯನ್ನ ನೀಡಿದೆ ಎಂದು ಹೇಳಬಹುದು. ಮಾಸಿಕ ಉಚಿತ ಮಿತಿ ನಂತರ ಎಟಿಎಂ ಬಳಕೆ ಶುಲ್ಕ ಹೆಚ್ಚಾಗಲಿದ್ದು ಜನವರಿ 1, 2022 ರಿಂದ ಜಾರಿಗೆ ಬರಲಿದೆ. ಒಂದು ತಿಂಗಳಲ್ಲಿ ಇಂತಿಷ್ಟು ಉಚಿತ ವಹಿವಾಟು ಮಿತಿ ಮೀರಿದ ನಂತರ ಎಟಿಎಂ ನ ಪ್ರತಿ ವಹಿವಾಟಿಗೆ 20 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ, ಮುಂದಿನ ಜನವರಿ 1 ರಿಂದ 21 ರೂಪಾಯಿಗೆ ಶುಲ್ಕ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಬ್ಯಾಂಕುಗಳಿಗೆ ಅನುಕೂಲ ಆಗಲಿ ಅನ್ನುವ ಉದ್ದೇಶದಿಂದ ಏಟಿಎಂ ಬಳಕೆ ಶುಲ್ಕದಲ್ಲಿ 21 ರೂಪಾಯಿ ಹೆಚ್ಚಳ ಮಾಡಲು ರಿಸರ್ವ್ ಬ್ಯಾಂಕ್ ಅನುಮತಿಯನ್ನ ನೀಡಿದೆ.
ಇನ್ನು ಗ್ರಾಹಕರು ತಮ್ಮ ಖಾತೆ ಹೊಂದಿದ ಬ್ಯಾಂಕಿನ ಎಟಿಎಂ ಗಳಲ್ಲಿ ತಿಂಗಳಿಗೆ 5 ಸಲ ಮತ್ತು ಬೇರೆ ಬ್ಯಾಂಕ್ ಎಟಿಎಂ ಗಳಲ್ಲಿ ಹಾಗು ಮೆಟ್ರೋ ನಗರಗಳಲ್ಲಿ ಮೂರು ಸಲ ಮತ್ತು ಬೇರೆ ಕಡೆಗಳಲ್ಲಿ 5 ಸಲ ಉಚಿತವಾಗಿ ವಹಿವಾಟು ನಡೆಸಬಹುದಾಗಿದೆ ಎಂದು ಹೇಳಲಾಗಿದೆ. ನೀವು ತಿಂಗಳಲ್ಲಿ ಇಂತಿಷ್ಟು ವ್ಯವಹಾರವನ್ನ ಮಾಡಿದ ನಂತರ ನೀವು ಶುಲ್ಕವನ್ನ ಕಟ್ಟಿ ಬ್ಯಾಂಕ್ ವ್ಯವಹಾರವನ್ನ ಮಾಡಬೇಕು ಎಂದು ಹೇಳಬಹುದು. ಸದ್ಯ ನೀವು 20 ರೂಪಾಯಿಗಳ ಶುಲ್ಕವನ್ನ ಕಟ್ಟುತ್ತಿದ್ದು ಮುಂದಿನ ವರ್ಷ 21 ರೂಪಾಯಿಯನ್ನ ಶುಲ್ಕವಾಗಿ ಕಟ್ಟಬೇಕು. ಸ್ನೇಹಿತರೆ ಬ್ಯಾಂಕುಗಳ ನಿಯಮಗಳ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಏಟಿಎಂ ಬಳಕೆ ಮಾಡುವ ಎಲ್ಲರಿಗೂ ತಲುಪಿಸಿ.