ATM: ATM ನಲ್ಲಿ ಹಣ ತಗೆಯುವವರಿಗೆ ಹೊಸ ನಿಯಮ, ಈ ತಪ್ಪು ಮಾಡಿದರೆ ಜೈಲು ಶಿಕ್ಷೆ ಖಂಡಿತ.
ATM ನಿಂದ ಹಣ ಹಿಂಪಡೆಯುವವರು ಈ ಕೆಲವು ನಿಯಮಗಳನ್ನು ತಿಳಿದುಕೊಳ್ಳುದು ಉತ್ತಮ.
ATM Rules: ಇತ್ತೀಚಿನ ದಿನದಲ್ಲಿ ಆನ್ ಲೈನ್ ಮೂಲಕವೇ ಎಲ್ಲಾ ಕೆಲಸವನ್ನು ಮಾಡಬಹುದಾಗಿದೆ. ಬ್ಯಾಂಕ್ ಗೆ ಸಂಬಂಧಪಟ್ಟ ಕೆಲಸವನ್ನು ಸಹ ಈಗಿನ ಕಾಲದಲ್ಲಿ ಮನೆಯಲ್ಲಿಯೇ ಕುಳಿತು ಮಾಡಲಾಗುತ್ತದೆ. ಇನ್ನು ಹಣ ತೆಗೆಯಲು ಈಗ ಬ್ಯಾಂಕ್ ಗೆ ಹೋಗಿ ತೆಗೆಯುವ ಅವಶ್ಯಕತೆ ಸಹ ಇಲ್ಲ. ಏಕೆಂದರೆ ಇದಕ್ಕೆ ಎಟಿಎಂ ಕಾರ್ಡ್ ಸಹ ಇರುತ್ತದೆ.
ನೀವು ನಿಮ್ಮ ಖಾತೆಯಲ್ಲಿದ್ದ ಹಣವನ್ನು ಎಟಿಎಂ ಮೂಲಕವೇ ತೆಗೆಯಬಹುದಾಗಿದೆ. ಆದರೆ ಇತರೆ ವ್ಯಕ್ತಿಯ ಎಟಿಎಂ ನಿಂದ ಹಣವನ್ನು ಪಡೆಯಲು ಸಾಧ್ಯವಿಲ್ಲ. ಈ ರೀತಿ ಮಾಡಿದರೆ ಜೈಲು ಶಿಕ್ಷೆಗೆ ಒಳಗಾಗಬಹುದು. ಎಟಿಎಂ ಬಗ್ಗೆ ನೀವು ಕೆಲವು ನಿಯಮಗಳನ್ನು ತಿಳಿದಿರುವುದು ಉತ್ತಮವಾಗಿದೆ.
ಎಟಿಎಂ ನಿಯಮಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಿ
ಒಬ್ಬ ವ್ಯಕ್ತಿಯು ಸತ್ತಾಗ ಅವನ ಕುಟುಂಬದ ಸದಸ್ಯರು ಅವನ ಎಟಿಎಂ ನಿಂದ ಹಣವನ್ನು ಡ್ರಾ ಮಾಡುತ್ತಾರೆ. ಆದರೆ ಇಲ್ಲಿ ಹಾಗೆ ಮಾಡುವುದು ಕಾನೂನುಬಾಹಿರವಾಗಿದೆ. ನಾಮಿನಿಯು ಬ್ಯಾಂಕ್ ಗೆ ಮಾಹಿತಿ ನೀಡದೆ ಮೃತ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ ಹಣವನ್ನು ಹಿಂಪಡೆದರು ಸಹ ಅದು ತಪ್ಪು. ಇದರಲ್ಲಿ ಸಿಕ್ಕಿಬಿದ್ದರೆ ಶಿಕ್ಷೆ ವಿಧಿಸುವ ನಿಯಮವಿದೆ.
ನೀವು ಸತ್ತು ಹೋದ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ ಹಣವನ್ನು ಹಿಂಪಡೆದರೆ, ನೀವು ಬ್ಯಾಂಕ್ ನಿಯಮಗಳನ್ನು ಅನುಸರಿಸಬೇಕು. ಇದರ ಅಡಿಯಲ್ಲಿ ವ್ಯಕ್ತಿಯ ಮರಣದ ನಂತರ ಅವನ ಎಲ್ಲ ಆಸ್ತಿಯನ್ನು ಅವನ ಹೆಸರಿಗೆ ವರ್ಗಾಯಿಸಿದ ನಂತರ ಅವನ ಹಣವನ್ನು ಹಿಂಪಡೆಯಬಹುದು. ಈ ಬಾಗ್ಗೆ ಬ್ಯಾಂಕ್ ಗೆ ಮಾಹಿತಿ ನೀಡಬೇಕಾಗುತ್ತದೆ.
ಇನ್ನು ನಾಮಿನಿ ಒಬ್ಬರಾಗಿದ್ದರೆ ಅವನು ಮೃತ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ ಹಣವನ್ನು ಹಿಂಪಡೆಯಬಹುದು. ಆದರೆ ಒಂದಕ್ಕಿಂತ ಹೆಚ್ಚು ನಾಮಿನಿಗಳಿದ್ದರೆ ನೀವು ಬ್ಯಾಂಕ್ ಗೆ ಒಪ್ಪಿಗೆ ಪತ್ರವನ್ನು ತೋರಿಸಬೇಕು ಮತ್ತು ನಂತರ ನೀವು ಮೃತ ವ್ಯಕ್ತಿಯ ಖಾತೆಯ ಹಣವನ್ನು ಹಿಂಪಡೆಯಬಹುದು.
ಮೃತ ವ್ಯಕ್ತಿಯ ಖಾತೆಯಲ್ಲಿನ ಹಣವನ್ನು ತೆಗೆಯುವುದು ಹೇಗೆ
ನೀವು ಮೃತ ವ್ಯಕ್ತಿಯ ಬ್ಯಾಂಕ್ ಖಾತೆಯ ನಾಮಿನಿಯಾಗಿದ್ದರೆ ನೀವು ಫಾರ್ಮ್ ಅನ್ನು ತುಂಬಬೇಕಾಗುತ್ತದೆ. ನಂತರ ನೀವು ಸತ್ತವರ ಪಾಸ್ ಬುಕ್ ಖಾತೆಯ ಟಿಡಿಆರ್, ಮರಣ ಪ್ರಮಾಣಪತ್ರ ಮತ್ತು ನಿಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಅನ್ನು ಒದಗಿಸಬೇಕು. ಈ ಪ್ರಕ್ರಿಯೆಯು ಪೂರ್ಣಗೊಂಡ ನಂತರ ನೀವು ಹಣವನ್ನು ಹಿಂಪಡೆಯಬಹುದು.