ATM Money: ಏಟಿಎಂ ನಿಂದ ಹರಿದ ಅಥವಾ ಕೊಳಕಾದ ನೋಟು ಬಂದರೆ ಏನು ಮಾಡಬೇಕು..? ಇದು ನಿಮ್ಮ ಹಕ್ಕು.
ATM ನಿಂದ ಹರಿದ ಅಥವಾ ಕೊಳಕಾದ ನೋಟುಗಳು ಬಂದರೆ ಏನು ಮಾಡಬೇಕು ಎಂದು ತಿಳಿದುಕೊಳ್ಳಿ.
Torn Currency Exchange: ದೇಶದ ಅನೇಕ ಪ್ರಸ್ತಿತ ಬ್ಯಾಂಕ್ ಗಳು ತನ್ನ ಗ್ರಾಹಕರಿಗೆ ATM ಕಾರ್ಡ್ ಸೌಲಭ್ಯವನ್ನು ನೀಡುತ್ತದೆ. ಗ್ರಾಹಕರು ತಮಗೆ ಬೇಕಾದ ಹಣವನ್ನು ಬ್ಯಾಂಕ್ ಗೆ ಹೋಗದೆ ATM ನಲ್ಲಿಯೇ ಡೆಬಿಟ್ ಕಾರ್ಡ್ ನ ಮೂಲಕ ಹಣ ಪಡೆದುಕೊಳ್ಳಬಹುದು.
ಇನ್ನು ಬ್ಯಾಂಕ್ ಗಳು ಗ್ರಾಹಕರಿಗೆ ಸಾಕಷ್ಟು ಸೌಲಭ್ಯವನ್ನು ನೀಡುತ್ತದೆ. ಇದೀಗ ಎಟಿಎಂ ಕಾರ್ಡ್ ಇದ್ದವರಿಗೆ ಬ್ಯಾಂಕ್ ಹೊಸ ಸೌಲಭ್ಯ ನೀಡಲು ನಿರ್ಧರಿಸಿದೆ. ನೀವು ಎಟಿಎಂ ಕಾರ್ಡ್ ಬಳಕೆದಾರರಾಗಿದ್ದರೆ ಬ್ಯಾಂಕ್ ನೀಡುವ ಈ ಸೌಲಭ್ಯದ ಲಾಭವನ್ನು ಪಡೆದುಕೊಳ್ಳಬಹುದು.
ಎಟಿಎಂ ಕಾರ್ಡ್
ಇತ್ತೀಚೆಗಂತೂ ಆನ್ಲೈನ್ ವಹಿವಾಟುಗಳು ಹೆಚ್ಚುತ್ತಿವೆ. ಅನೇಕ ರೀತಿಯ ಹಣಕಾಸು ವ್ಯವಹಾರವನ್ನು ಜನರು ತಮ್ಮ ಮೊಬೈಲ್ ನ ಮೂಲಕವೇ ಮಾಡಿಕೊಳ್ಳುತ್ತಾರೆ. ಇನ್ನು ವಿವಿಧ ಬ್ಯಾಂಕ್ ಗಳು ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ನೀಡುತ್ತದೆ. ಹೀಗಾಗಿ ನಗದು ವ್ಯವಹಾರ ಇತ್ತೀಚಿಗೆ ಕಡಿಮೆ ಆಗಿದೆ. ಇನ್ನು ಆನ್ಲೈನ್ ಪಾವತಿಗಳು ಇದ್ದರು ಕೂಡ ಕೆಲವರು ATM ನ ಮೂಲಕ ಹಣವನ್ನು ಪಡೆಯುತ್ತಾರೆ. ದೊಡ್ಡ ಮೊತ್ತದ ಹಣ ಹಿಂಪಡೆಯಲು ಎಟಿಎಂ ಅನ್ನು ಗ್ರಾಹಕರು ಬಳಸುತ್ತಾರೆ.
ATM ನಲ್ಲಿ ಹಣ ತೆಗೆಯುವ ಸಮಯದಲ್ಲಿ ಎಚ್ಚರ
ಇನ್ನು ನೀವೂ ಎಟಿಎಂ ನಲ್ಲಿ ಹಣ ತೆಗೆಯುವ ಸಮಯದಲ್ಲಿ ಎಚ್ಚರಿಕೆ ವಹಿಸಬೇಕು. ಎಟಿಎಂ ನಿಂದ ನೀವೂ ಪಡೆಯುವಾಗ ಕೆಲವೊಮ್ಮೆ ಹರಿದ ಅಥವಾ ಇನ್ನಾವುದೇ ರೀತಿ ಹಾನಿಗೊಳಗಾದ ಹಣ ನಿಮಗೆ ಸಿಗುತ್ತದೆ. ಈ ಕಾರಣಕ್ಕೆ ನೀವೂ ಎಟಿಎಂನಿಂದ ಹಣ ಪಡೆದ ತಕ್ಷಣ ಹಣ ಸರಿಯಾಗಿದೆಯೇ ಅಥವಾ ಇಲ್ಲವೇ ಎನ್ನುವುದನ್ನು ಪರಿಶೀಲಿಸಿಕೊಳ್ಳಿ.
ಒಂದು ವೇಳೆ ನೀವೂ ಎಟಿಎಂ ನಿಂದ ಪಡೆದ ಹರಿದಿದ್ದರೆ ಅಥವಾ ಹಾನಿಗೊಳಗಾಗಿದ್ದರೆ ಅದರ ಬಗ್ಗೆ ಚಿಂತಿಸಬೇಕಾಗಿಲ್ಲ. ಆ ಹಣವನ್ನು ನೀವೂ ಸುಲಭವಾಗಿ ವಿನಿಮಯ ಮಾಡಿಕೊಳ್ಳಬಹುದು. ಹರಿದ ನೋಟುಗಳ ವಿನಿಮಯಕ್ಕೆ ಆರ್ ಬಿಐ ಅವಕಾಶವನ್ನು ನೀಡುತ್ತದೆ.
ಹರಿದ ಅಥವಾ ಹಾನಿಗೊಳಗಾದ ನೋಟಿನ ವಿನಿಮಯ ಸುಲಭ
ಹರಿದ ಅಥವಾ ಹಾನಿಗೊಳಗಾದ ನೋಟುಗಳನ್ನು ಖಾಸಗಿ ವಲಯದ ಬ್ಯಾಂಕ್ ನ ಯಾವುದೇ ಕರೆನ್ಸಿ ಚೆಸ್ಟ್ ಶಾಖೆಯಲ್ಲಿ ಮತ್ತು RBI ನ ಯಾವುದೇ ಇಶ್ಯು ಆಫೀಸ್ ನಲ್ಲಿ ವಿನಿಮಯ ಮಾಡಿಕೊಳ್ಳಬಹುದು. ನೋಟು ವಿನಿಮಯ ಪ್ರಕ್ರಿಯೆಗೆ ಯಾವುದೇ ಫಾರ್ಮ್ ಭರ್ತಿ ಮಾಡುವ ಅವಶ್ಯಕತೆ ಇರುವುದಿಲ್ಲ.
RBI ಟ್ರಿಪಲ್ ಲಾಕ್ ರೆಸೆಪ್ಟಾಕಲ್
RBI ಟ್ರಿಪಲ್ ಲಾಕ್ ರೆಸೆಪ್ಟಾಕಲ್ (TLR ) ಕವರ್ ಗಳ ಮೂಲಕ ನೋಟುಗಳ ವಿನಿಮಯ ಸಾಧ್ಯ. TLR ವಿಧಾನದ ಮೂಲಕ ಆರ್ ಬಿಐ ನ ವಿಚಾರಣಾ ಕೌಂಟರ್ ನಿಂದ TLR ಕವರ್ ಪಡೆಯಬಹುದು ಮತ್ತು ಹಾನಿಗೊಳಗಾದ ನೋಟನ್ನು ಅದರೊಳಗೆ ಹಾಕಬಹುದು.
ಟ್ರಿಪಲ್ ಲಾಕ್ ರೆಸೆಪ್ಟಾಕಲ್ ಬಾಕ್ಸ್ ನಲ್ಲಿ ಠೇವಣಿ ಇಡುವ ಮೊದಲು ಕವರ್ ನಲ್ಲಿರುವ ಕಾಲಮ್ ಗಳಲ್ಲಿ ನಿಮ್ಮ ಹೆಸರು, ವಿಳಾಸ ಮತ್ತು ನೋಟುಗಳ ಮುಖಬೆಲೆಯ ವಿವರ ಸೇರಿದಂತೆ ಇನ್ನಿತರ ಮಾಹಿತಿಯನ್ನು ನೀಡಬೇಕು. ಇನ್ನು ಹಾನಿಗೊಳಗಾದ ನೋಟುಗಳನ್ನು ಸಲ್ಲಿಸಿದ ನಂತರ ನಿಮಗೆ ಕಾಗದದ ಟೋಕನ್ ನೀಡಲಾಗುತ್ತದೆ. ನೋಟು ಠೇವಣಿ ಮಾಡಿದ ನಂತರ ಕರೆನ್ಸಿ ನೋಟುಗಳ ಸ್ವೀಕಾರ್ಹ ವಿನಿಮಯ ಮೌಲ್ಯವನ್ನು ಬ್ಯಾಂಕ್ ಡ್ರಾಫ್ಟ್ ಅಥವಾ ಪೇ ಆರ್ಡರ್ ಮೂಲಕ ಠೇವಣಿದಾರರಿಗೆ ನೀಡುತ್ತದೆ.