Punjab Nation Bank ATM Charges Hike: ಬ್ಯಾಂಕ್ ಖಾತೆ ಹೊಂದಿರುವ ಪ್ರತಿಯೊಬ್ಬ ಗ್ರಾಹಕರು ಏಟಿಎಂ ಕಾರ್ಡ್ ಹೊಂದಿರುತ್ತಾರೆ .ಇತ್ತೀಚಿನ ದಿನಗಳಲ್ಲಿ ಹಣವನ್ನ ತೆಗೆಯಲು ಮತ್ತು ಡೆಪಾಸಿಟ್ ಮಾಡಲು ಏಟಿಎಂ ಕಾರ್ಡ್(Atm Card) ಬಳಕೆ ಮಾಡುತ್ತಾರೆ. ಹಣವನ್ನು ತೆಗೆಯಲು ಮತ್ತು ವಿತ್ ಡ್ರಾ(Money Withdraw) ಮಾಡಲು ಈಗಾಗಲೇ ಬ್ಯಾಂಕುಗಳು ಅನೇಕ ನಿಯಮಗಳನ್ನು ಜಾರಿಗೆ ತಂದಿದೆ.
ಏಟಿಎಂ ಮೂಲಕ ಹಣ ತೆಗೆಯಲು ಗ್ರಾಹಕರು ಶುಲ್ಕಗಳನ್ನು ಅಗತ್ಯವಾಗಿ ಪಾವತಿ ಮಾಡಬೇಕು.ಏಟಿಎಂ ಮೂಲಕ ಹಣವನ್ನು ತೆಗೆಯಲು ಮಿತಿ ಇದ್ದು ಮಿತಿಗೂ ಹೆಚ್ಚಾಗಿ ಬಳಸಿದರೆ ಶುಲ್ಕ ಪಾವತಿ ಮಾಡಬೇಕು. ಸದ್ಯ ಈ ನಿಯಮದಲ್ಲಿ ಬದಲಾವಣೆ ಮಾಡಿದ್ದು ಏಟಿಎಂ ಬಳಸುವ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ.
ಏಟಿಎಂ ಬಳಕೆಯ ಶುಲ್ಕದಲ್ಲಿ ಬದಲಾವಣೆ ಮಾಡಲಾಗಿದ್ದು ಈ ಬದಲಾವಣೆ ಗ್ರಾಹಕರಿಗೆ ಲಾಭವನ್ನು ತಂದಿದೆ.
ಏಟಿಎಂ ಕಾರ್ಡ್ ಮಿತಿ ಹೆಚ್ಚಳ
ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಇದೀಗ ಡೆಬಿಟ್ ಕಾರ್ಡ್ ಮಿತಿಯನ್ನು ಹೆಚ್ಚಿಸಲು ಯೋಚಿಸಿದೆ .ಇದು ಉನ್ನತ ಮಟ್ಟದ ಡೆಬಿಟ್ ಕಾರ್ಡ್ ರೂಪಾಂತರಗಳಿಗೆ ಅನ್ವಯುಸುತ್ತದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್
ಮಾಸ್ಟರ್ ಕಾರ್ಡ್ ಪ್ಲಾಟಿನಂ ರೂಪಾಂತರಗಳು ,ರೂಪೇ ಕಾರ್ಡ್ ,ವೀಸಾ ಗೋಲ್ಡನ್ ಡೆಬಿಟ್ ಕಾರ್ಡ್,ರೂಪೇ ಸೆಲೆಕ್ಟ್ ಮತ್ತು ವೀಸಾ ಸಿಗ್ನೇಚರ್ ಡೆಬಿಟ್ ಕಾರ್ಡ್ ಗಳ ಮಿತಿ ಯನ್ನು ಹೆಚ್ಚಿಸಲು ಯೋಚಿಸಿದೆ. ಈ ಹಿಂದೆ 50 ಸಾವಿರ ಮಿತಿ ಇದ್ದು ಈಗ 5 ಲಕ್ಷ ಕ್ಕೆ ಹೆಚ್ಚಿಸಲು ಯೋಜೆಸುತ್ತಿದೆ.
ಪಿಒಎಸ್ ಮತ್ತು ಇ- ಕಾಮರ್ಸ್ ಮಿತಿಗಲ್ಲಿ ಹೆಚ್ಚಳ
ಪಿಒಎಸ್ ಯಂತ್ರ ಅಥವಾ ಈ ಕಾಮರ್ಸ್ ವಹಿವಾಟಿನ ಮಿತಿಯನ್ನು ಗಮನಿಸಿದರೆ ;ಇದೀಗ 1,25,000 ಇದ್ದ ಮಾಸ್ಟರ್ ಕಾರ್ಡ್ ಪ್ಲಾಟಿನಂ ರೂಪಾಂತರಗಳು, ರೂಪೇ ಮತ್ತು ವೀಸಾ ಗೋಲ್ಡ್ ಡೆಬಿಟ್ ಕಾರ್ಡ್ ಗಳು ರೂ 3 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಪಿಒಎಸ್ ಮತ್ತು ಇ ಕಾಮರ್ಸ್ ವಹಿವಾಟಿನ ಮಿತಿ ಪ್ರಸ್ತುತ 1.25 ಲಕ್ಷ ರೂ ಇದ್ದು ರೂಪೇ ಸೆಲೆಕ್ಟ್ ಮತ್ತು ವೀಸಾ ಸಿಗ್ನೇಚರ್ ಡೆಬಿಟ್ ಕಾರ್ಡ್ ಗಳಿಗೆ ರೂ 5 ಲಕ್ಷ ಹೆಚ್ಚಿಸಲು ಬ್ಯಾಂಕ್ ಪ್ರಸ್ತಾಪಿಸಿದೆ.ಇವೆಲ್ಲವೂ ದೈನಂದಿನ ವಹಿವಾಟಿನಲ್ಲಿ ಗರಿಷ್ಠ ಮಿತಿಗಳಾಗಿವೆ.
ಹಾಗೆಯೆ, ಪ್ಲಾಟಿನಂ ಕಾರ್ಡ್ ಗಳ ಪ್ರಸ್ತುತ ನಗದು ಹಿಂಪಡೆಯುವ ಮಿತಿಯು ೫೦ ಸಾವಿರ.ಒಂದು ಬರಿ ಹಿಪಡೆಯುವ ಮಿತಿ 20 ಸಾವಿರ ಮುಂದುವರೆದಿದೆ.1 .25 ಲಕ್ಷ ರೂ ಇ ಕಾಮರ್ಸ್ ಮತ್ತು ಪಿಒಎಸ್ ವಹಿವಾಟಿನ ಮಿತಿಯಾಗಿದೆ.