ಏಟಿಎಂ ಕಾರ್ಡ್ ಹೊಂದಿರುವ ಎಲ್ಲರಿಗೂ ಜನವರಿ 1 ರಿಂದ ಹೊಸ ನಿಯಮ, ಹಣ ತೆಗೆಯುವ ಮುನ್ನ ಎಚ್ಚರ.

ಬ್ಯಾಂಕ್ ಖಾತೆ ಹೊಂದಿರುವವರು ಏಟಿಎಂ ಕಾರ್ಡುಗಳನ್ನ ತಪ್ಪದೆ ಹೊಂದಿರುತ್ತಾರೆ ಎಂದು ಹೇಳಬಹುದು. ಹೌದು ಬ್ಯಾಂಕುಗಳಿಗೆ ಹೋಗಿ ಹಣವನ್ನ ತೆಗೆಯುವುದು ತಮ್ಮ ಸಮಯವನ್ನ ಹಾಳು ಮಾಡುತ್ತದೆ ಅನ್ನುವ ಕಾರಣಕ್ಕೆ ಬ್ಯಾಂಕ್ ಖಾತೆ ಹೊಂದಿರುವ ಜನರು ಏಟಿಎಂ ಕಾರ್ಡುಗಳನ್ನ ಮಾಡಿಕೊಂಡು ಏಟಿಎಂ ಮೂಲಕ ತಮಗೆ ಎಷ್ಟು ಬೇಕೋ ಅಷ್ಟು ಹಣವನ್ನ ಪಡೆದುಕೊಳ್ಳುತ್ತಾರೆ. ಇನ್ನು ಏಟಿಎಂ ಕಾರ್ಡುಗಳನ್ನ ಹೊಂದಿರುವ ಜನರಿಗೆ ಕೆಲವು ಷರತ್ತುಗಳು ಆ ಷರತ್ತುಗಳನ್ನ ಅವರು ಸರಿಯಾಗಿ ತಿಳಿದುಕೊಳ್ಳುವುದು ಅತ್ಯವಶ್ಯಕ ಎಂದು ಹೇಳಬಹುದು. ಇನ್ನು 2022 ರ ಆರಂಭದಿಂದಲೇ ಏಟಿಎಂ ಕಾರ್ಡ್ ಹೊಂದಿರುವ ಜನರಿಗೆ ಹೊಸ ನಿಯಮ ಅನ್ವಯ ಆಗಲಿದ್ದು ಅದನ್ನ ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಅತ್ಯವಶ್ಯಕ ಎಂದು ಹೇಳಬಹುದು.

ಹಾಗಾದರೆ ಏನದು ಹೊಸ ನಿಯಮ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಹೊಸ ನಿಯಮದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಮುಂದಿನ ವರ್ಷದಿಂದ ಎಲ್ಲಾ ಏಟಿಎಂ ಶುಲ್ಕವನ್ನ ಹೆಚ್ಚಳ ಮಾಡುವಂತೆ ಬ್ಯಾಂಕುಗಳ ಬ್ಯಾಂಕ್ ಅನಿಸಿಕೊಂಡಿರುವ ಭಾರತೀಯ ರಿಸರ್ವ್ ಬ್ಯಾಂಕ್ ಎಲ್ಲಾ ಬ್ಯಾಂಕುಗಳಿಗೆ ಆದೇಶವನ್ನ ಹೊರಡಿಸಿದೆ. ಹೊಸ ವರ್ಷ ಅನ್ನುವುದು ಹಣದುಬ್ಬರದ ವರ್ಷದಿಂದ ಆರಂಭ ಆಗುತ್ತಿದ್ದು ಎಟಿಎಂ ನಿಂದ ನಗದು ಹಿಂಪಡೆಯುವಿಕೆ ಹೆಚ್ಚು ದುಬಾರಿಯಾಗಲಿದೆ.

atm transaction

ಮುಂದಿನ ತಿಂಗಳಿಂದ ಈ ಹೊಸ ನಿಯಮ ಜಾರಿಗೆ ಬರಲಿದ್ದು ಏಟಿಎಂ ಬಳಕೆ ಮಾಡುವ ಈ ನಿಯಮಗಳನ್ನ ಗಮನದಲ್ಲಿ ಇರಿಸಿಕೊಳ್ಳುವುದು ಮುಖ್ಯ ಎಂದು ಹೇಳಬಹುದು. ಉಚಿತ ಮಿತಿಗಿಂತ ನಡೆಸುವ ಹೆಚ್ಚಿನ ಹಣಕಾಸು ವಹಿವಾಟುಗಳಿಗೆ 21 ರೂಪಾಯಿ ಜೊತೆಗೆ GST ವಿಧಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಎಲ್ಲಾ ಬ್ಯಾಂಕುಗಳಿಗೆ ಆದೇಶವನ್ನ ಹೊರಡಿಸಿದೆ. ಹೌದು ಉಚಿತ ಮಿತಿಗಿಂತ ಹೆಚ್ಚಿನ ಸಮಯ ಏಟಿಎಂ ಗಳಲ್ಲಿ ನೀವು ನಗದು ಹಣವನ್ನ ಪಡೆದುಕೊಂಡರೆ ನೀವು ಪ್ರತಿ ವಹಿವಾಟಿಗೆ 21 ರೂಪಾಯಿಯ ಜೊತೆಗೆ GST ಹಣವನ್ನ ಶುಲ್ಕದ ರೂಪದಲ್ಲಿ ಪಾವತಿ ಮಾಡಬೇಕು.

ಈ ಹಿಂದೆ 19 ರೂಪಾಯಿಗಳು ಇದ್ದು ಈಗ 2 ರೂಪಾಯಿ ಏರಿಕೆ ಮಾಡಲಾಗಿದ್ದು ಜನರು ಇನ್ನುಮುಂದೆ ಉಚಿತ ವಹಿವಾಟನ್ನ ಬಿಟ್ಟು ಹೆಚ್ಚಿನ ಬಾರಿ ನಗದು ಹಣವನ್ನ ಏಟಿಎಂ ಗಳಲ್ಲಿ ಹಿಂಪಡೆದರೆ 21 ರೂಪಾಯಿ ಜೊತೆಗೆ GST ಹಣವನ್ನ ಪ್ರತಿ ವಹಿವಾಟಿಗೆ ಶುಲ್ಕದ ರೂಪದಲ್ಲಿ ಕಟ್ಟಬೇಕು. ಅದೇ ಬ್ಯಾಂಕಿನ ಏಟಿಎಂ ನಲ್ಲಿ ಐದು ವಹಿವಾಟು ಉಚಿತ ಮತ್ತು ಇತರೆ ಬ್ಯಾಂಕಿನ ಏಟಿಎಂ ನಲ್ಲಿ ಮೂರೂ ಉಚಿತ ವಹಿವಾಟನ್ನ ಪೂರೈಸಿದ ನಂತರ ಏಟಿಎಂ ಬಳಕೆದಾರರು ಶುಲ್ಕವನ್ನ ಪಾವತಿ ಮಾಡಬೇಕು. ಇನ್ನು ಈ ನಿಯಮ ಹೊಸ ವರ್ಷದಿಂದಿಗೆ ಆರಂಭ ಆಗಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದ್ದು ಈ ಮಾಹಿತಿಯನ್ನ ಹೆಚ್ಚು ಏಟಿಎಂ ಬಳಕೆ ಮಾಡುವ ಎಲ್ಲಾ ಜನರಿಗೆ ತಲುಪಿಸಿ.

Join Nadunudi News WhatsApp Group

atm transaction

Join Nadunudi News WhatsApp Group