ಏಟಿಎಂ ಕಾರ್ಡ್ ಹೊಂದಿರುವ ಎಲ್ಲಾ ಜನರಿಗೆ ದೊಡ್ಡ ಶಾಕಿಂಗ್ ಸುದ್ದಿ, ಜನವರಿ 1 ರಿಂದ ಹೊಸ ನಿಯಮ, ಕೇಂದ್ರದ ಆದೇಶ.

ಸಾಮಾನ್ಯವಾಗಿ ಏಟಿಎಂ ಕಾರ್ಡುಗಳನ್ನ ಎಲ್ಲಾ ಜನರು ಹೊಂದಿರುತ್ತಾರೆ ಎಂದು ಹೇಳಬಹುದು. ಇತ್ತೀಚಿನ ದಿನಗಳಲ್ಲಿ ಜನರು ಬ್ಯಾಂಕುಗಳಿಗೆ ಹೋಗದೆ ಏಟಿಎಂ ಮೂಲಕ ತಮಗೆ ಬೇಕಾದ ಹಣವನ್ನ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಈಗ ಏಟಿಎಂ ಕಾರ್ಡುಗಳನ್ನ ಹೊಂದಿರುವ ಎಲ್ಲಾ ಜನರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ದೊಡ್ಡ ಶಾಕಿಂಗ್ ಸುದ್ದಿ ನೀಡಿದ್ದು ನಿಯಮದಲ್ಲಿ ಬದಲಾವಣೆಯನ್ನ ಮಾಡುವುದರ ಮೂಲಕ ಜನರ ಜೇಬಿಗೆ ಕತ್ತರಿ ಹಾಕಿದೆ ಭಾರತೀಯ ರಿಸರ್ವ್ ಬ್ಯಾಂಕ್ ಎಂದು ಹೇಳಬಹುದು. ಇನ್ನು ಹೊಸ ನಿಯಮ ಜನವರಿ 1 ನೇ ತಾರೀಕಿನಿಂದ ಜಾರಿಗೆ ಬರಲಿದ್ದು ಯಾವುದೇ ಬ್ಯಾಂಕಿನ ಏಟಿಎಂ ಕಾರ್ಡ್ ಹೊಂದಿರುವ ಜನರಿಗೆ ಈ ನಿಯಮ ಅನ್ವಯ ಆಗಲಿದೆ ಎಂದು ಹೇಳಿದರೆ ತಪ್ಪಾಗಲ್ಲ.

ಹಾಗಾದರೆ ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿರುವ ಆ ಆದೇಶ ಏನು ಮತ್ತು ನಿಯಮದಲ್ಲಿ ಆಗಲಿರುವ ದೊಡ್ಡ ಬದಲಾವಣೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಏಟಿಎಂ ಕಾರ್ಡುಗಳ ನಗದು ಹಿಂಪಡೆಯುವಿಕೆಯಲ್ಲಿನ ಶುಲ್ಕವನ್ನ ಭಾರತೀಯ ರಿಸರ್ವ್ ಬ್ಯಾಂಕ್ ಈಗ ಹೆಚ್ಚಳ ಮಾಡಿದ್ದು ಜನರು ಇನ್ನುಮುಂದೆ ಯಾವುದೇ ಏಟಿಎಂ ನಲ್ಲಿ ಅವಧಿಗಿಂತ ಹೆಚ್ಚಿನ ಭಾರಿ ಏಟಿಎಂ ನಲ್ಲಿ ನಗದು ಹಿಂಪಡೆದರೆ ಅವರು ಮೊದಲಿಗಿಂತ ಹೆಚ್ಚಿನ ಶುಲ್ಕವನ್ನ ಕಟ್ಟಬೇಕು ಎಂದು ರಿಸರ್ವ್ ಆದೇಶವನ್ನ ಹೊರಡಿಸಿದೆ.

Atm usage news

ಇನ್ನು ಈ ಹೊಸ ನಿಯಮ ಹೊಸ ವರ್ಷದಿಂದ ದೇಶಾದ್ಯಂತ ಜಾರಿಗೆ ಬರಲಿದ್ದು ಎಲ್ಲಾ ಬ್ಯಾಂಕಿನ ಏಟಿಎಂ ಕಾರ್ಡ್ ಹೊಂದಿರುವವರಿಗೆ ಈ ನಿಯಮ ಅನ್ವಯಿಸಲಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಅಧೀನದಲ್ಲಿ ಇರುವ ಎಲ್ಲಾ ಬ್ಯಾಂಕುಗಳಿಗೆ ಆದೇಶವನ್ನ ಹೊರಡಿಸಿದ್ದು ಗ್ರಾಹಕರು ಅವಧಿಗಿಂತ ಹೆಚ್ಚಿನ ಬಾರಿ ಏಟಿಎಂ ಗಳಲ್ಲಿ ನಗದು ಹಿಂಪಡೆದರೆ ಅವರಿಗೆ ಪ್ರತಿ ಬಾರಿ ನಗದು ಹಿಂಪಡೆಯುವಿಕೆಯಲ್ಲಿ 21 ರೂಪಾಯಿ ಶುಲ್ಕದ ಜೊತೆಗೆ GST ಸೇರಿಸುವಂತೆ ಆದೇಶವನ್ನ ಹೊರಡಿಸಿದೆ.

ಇನ್ನುಮುಂದೆ ಜನರು ಅವಧಿಗಿಂತ ಹೆಚ್ಚಿನ ಬಾರಿ ಏಟಿಎಂ ಗಳಲ್ಲಿ ನಗದು ಹಿಂಪಡೆದರೆ ಅವರು ಹೆಚ್ಚಿನ ಶುಲ್ಕವನ್ನ ಬ್ಯಾಂಕಿಗೆ ಪಾವತಿ ಮಾಡಬೇಕು. ಸದ್ಯ ಈ ನಿಯಮ ಜನರ ಜೇಬಿಗೆ ಕತ್ತರಿ ಹಾಕಲಿದೆ ಎಂದು ಹೇಳಿದರೆ ತಪ್ಪಾಗಲ್ಲ. ಸ್ನೇಹೀರ್ತಾರೆ ಇನ್ನುಮುಂದೆ ಏಟಿಎಂ ಗಳಲ್ಲಿ ನೀವು ನಗದು ಹಿಂಪಡೆಯುವ ಸಮಯದಲ್ಲಿ ಎಷ್ಟುಬಾರಿ ನಗದು ಹಿಂಪಡೆದಿದ್ದಿರಿ ಅನ್ನುವುದನ್ನ ಗಮನದಲ್ಲಿ ಇರಿಸಿಕೊಳ್ಳುವುದು ಅತ್ಯವಶ್ಯಕ ಎಂದು ಹೇಳಬಹುದು. ಸ್ನೇಹಿತರೆ ಭಾರತೀಯ ರಿಸರ್ವ್ ಬ್ಯಾಂಕಿನ ಈ ಹೊಸ ನಿಯಮದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಏಟಿಎಂ ಕಾರ್ಡ್ ಹೊಂದಿರುವ ಎಲ್ಲಾ ಗ್ರಾಹಕರಿಗೆ ತಲುಪಿಸಿ.

Join Nadunudi News WhatsApp Group

Atm usage news

Join Nadunudi News WhatsApp Group