ATM Charges: SBI , HDFC ಮತ್ತು ICICI ಏಟಿಎಂ ಹೊಂದಿರುವ ಜನರಿಗೆ ಇಂದಿನಿಂದ ಹೊಸ ನಿಯಮ, ಬ್ಯಾಂಕುಗಳ ದಿಡೀರ್ ನಿರ್ಧಾರ.
SBI , PNB, HDFC ಮತ್ತು ICICI ಬ್ಯಾಂಕುಗಳ ಮಹತ್ವದ ನಿರ್ಧಾರ.
ATM Withdrawal Charges: ಪ್ರಸ್ತುತ ದೇಶದಲ್ಲಿ ಯುಪಿಐ ಪಾವತಿ ಹೆಚ್ಚುತ್ತಿದೆ. ಸದ್ಯ ಜನರು ಕೈಯಲ್ಲಿ ನಗದು ಇಟ್ಟುಕೊಳ್ಳುವುದು ಕಡಿಮೆಯಾಗಿದೆ. ಅನೇಕ ರೀತಿಯ ಹಣಕಾಸಿನ ವಹಿವಾಟನ್ನು ಜನರು ಹೆಚ್ಚಾಗಿ ಯುಪಿಐ ಅಪ್ಲಿಕೇಶನ್ ನ ಮೂಲಕ ಮಾಡುತ್ತಾರೆ. ದಿನದಿಂದ ದಿನಕ್ಕೆ ಯುಪಿಐ ಅಪ್ಲಿಕೇಶನ್ ಗಳು ಬಳಕೆದಾರರಿಗೆ ಹೆಚ್ಚಿನ ಸೇವೆಯನ್ನು ನೀಡುತ್ತಿದೆ. ಯುಪಿಐ ಅಪ್ಲಿಕೇಶನ್ ನ ಬಳಕೆಯಿಂದಾಗಿ ಜನರು ಬ್ಯಾಂಕಿಗೆ ಹೋಗುವುದನ್ನು ಹಾಗೂ ಎಟಿಎಂ ನಲ್ಲಿ ನಗದು ಹಿಂಪಡೆಯುವುದನ್ನು ಕಡಿಮೆ ಮಾಡಿದ್ದಾರೆ.
ಯುಪಿಐ ಪಾವತಿಗಳು ಬಳಕೆಯಲ್ಲಿದ್ದರೂ ಕೂಡ ಬ್ಯಾಂಕ್ ಗಳು ತನ್ನ ಗ್ರಾಹಕರಿಗೆ ನೆಟ್ ಬ್ಯಾಂಕಿಂಗ್ ಮತ್ತು ಎಟಿಎಂ ಕಾರ್ಡ್ ಸೌಲಭ್ಯವನ್ನು ನೀಡುತ್ತವೆ. ಗ್ರಾಹಕರು ಡೆಬಿಟ್ ಕಾರ್ಡ್ ನ ಮೂಲಕ ಎಟಿಎಂ ಗಳಲ್ಲಿ ನಗದು ಹಿಂಪಡೆಯಬಹುದು. ಇನ್ನು ವಿವಿಧ ಬ್ಯಾಂಕ್ ಗಳು ನಗದು ಹಿಂಪಡೆಯುವಿಕೆಗೆ ಶುಲ್ಕವನ್ನು ವಿಧಿಸುತ್ತದೆ. ಬ್ಯಾಂಕುಗಳು ಇತರ ಬ್ಯಾಂಕ್ ನ ಎಟಿಎಂನಿಂದ ಉಚಿತ ವಹಿವಾಟಿಗೆ ಮಿತಿಯನ್ನು ಕೂಡ ನಿಗದಿಪಡಿಸಿದೆ.
ಎಟಿಎಂ ವಹಿವಾಟಿನ ಶುಲ್ಕ
ರಿಸರ್ವ್ ಬ್ಯಾಂಕ್ ಎಟಿಎಂ ಕಾರ್ಡ್ ಗಳಿಗೆ ಮಾಸಿಕ ಶುಲ್ಕವನ್ನು ವಿಧಿಸಿದೆ. ಮಾಸಿಕ ಶುಲ್ಕವನ್ನು ಹೊರತುಪಡಿಸಿ ಗ್ರಾಹಕರು ಪ್ರತಿ ವಹಿವಾಟಿಗೆ 21 ರೂ. ನೀಡಲು ಆರ್ ಬಿಐ ಬ್ಯಾಂಕ್ ಗಳಿಗೆ ಆದೇಶ ನೀಡಿದೆ. ನಿಮ್ಮ ಬ್ಯಾಂಕಿನ ಎಂಟಿಎಮ್ ನಿಂದ ಮೊದಲ ಐದು ವಹಿವಾಟುಗಳು ಗ್ರಾಹಕರಿಗೆ ಸಂಪೂರ್ಣವಾಗಿ ಉಚಿತವಾಗಿದೆ. ಐದು ವಹಿವಾಟಿನ ನಂತರ ಗ್ರಾಹಕರು ಪ್ರತಿ ನಗದು ಹಿಂಪಡೆಯುವಿಕೆಗೆ ಗರಿಷ್ಟ ರೂ. 21 ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಕಳೆದ ಜನವರಿಯಲ್ಲಿಯೇ ಈ ನಿಯಮವನ್ನು ಆರ್ ಬಿಐ ಜಾರಿಗೊಳಿಸಿದೆ.
SBI , HDFC ಮತ್ತು ICICI ಏಟಿಎಂ ಹೊಂದಿರುವ ಜನರಿಗೆ ಇಂದಿನಿಂದ ಹೊಸ ನಿಯಮ
*SBI ಎಟಿಎಂ ನಗದು ಹಿಂಪಡೆಯುವಿಕೆಯ ಶುಲ್ಕದ ವಿವರ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 5 ಉಚಿತ ಎಟಿಎಂ ವಹಿವಾಟುಗಳನ್ನು ಮಾಸಿಕ ರೂ.25,000 ವರೆಗೆ ನೀಡುತ್ತದೆ. ಇದಕ್ಕಿಂತ ಹೆಚ್ಚಿನ ಹಣ ತೆಗೆದರೆ ಪ್ರತಿ ವಹಿವಾಟಿಗೆ 10 ರೂ. ಮತ್ತು ಜಿಎಸ್ಟಿ ಪಾವತಿಸಬೇಕಾಗುತ್ತದೆ. ಇತರ ಬ್ಯಾಂಕ್ ಎಟಿಎಂನಲ್ಲಿ ಪ್ರತಿ ವಹಿವಾಟಿಗೆ 20 ರೂ. ಮತ್ತು ಜಿಎಸ್ಟಿ ಪಾವತಿಸಬೇಕಾಗುತ್ತದೆ.
*PNB ಎಟಿಎಂ ನಗದು ಹಿಂಪಡೆಯುವಿಕೆಯ ಶುಲ್ಕದ ವಿವರ
ಪಂಜಾಬ್ ನ್ಯಾಷನಲ್ ಬ್ಯಾಂಕ್ 5 ಉಚಿತ ಎಟಿಎಂ ವಹಿವಾಟುಗಳನ್ನು ನೀಡುತ್ತದೆ. ಪ್ರತಿ ವಹಿವಾಟಿಗೆ 10 ರೂ. ಮತ್ತು ಜಿಎಸ್ಟಿ ಪಾವತಿಸಬೇಕಾಗುತ್ತದೆ. ಇತರ ಬ್ಯಾಂಕ್ ಎಟಿಎಂನಲ್ಲಿ ಪ್ರತಿ ವಹಿವಾಟಿಗೆ 21 ರೂ. ಮತ್ತು ಜಿಎಸ್ಟಿ ಪಾವತಿಸಬೇಕಾಗುತ್ತದೆ.
*HDFC ಬ್ಯಾಂಕ್ ಎಟಿಎಂ ನಗದು ಹಿಂಪಡೆಯುವಿಕೆಯ ಶುಲ್ಕದ ವಿವರ
HDFC ಬ್ಯಾಂಕ್ 5 ಉಚಿತ ಎಟಿಎಂ ವಹಿವಾಟುಗಳನ್ನು ನೀಡುತ್ತದೆ. ಪ್ರತಿ ವಹಿವಾಟಿಗೆ 10 ರೂ. ಮತ್ತು ಜಿಎಸ್ಟಿ ಪಾವತಿಸಬೇಕಾಗುತ್ತದೆ. ಇತರ ಬ್ಯಾಂಕ್ ಎಟಿಎಂನಲ್ಲಿ ಪ್ರತಿ ವಹಿವಾಟಿಗೆ 21 ರೂ. ಮತ್ತು ಜಿಎಸ್ಟಿ ಪಾವತಿಸಬೇಕಾಗುತ್ತದೆ.
*ICICI ಬ್ಯಾಂಕ್ ಎಟಿಎಂ ನಗದು ಹಿಂಪಡೆಯುವಿಕೆಯ ಶುಲ್ಕದ ವಿವರ
ICICI ಬ್ಯಾಂಕ್ 5 ಉಚಿತ ಎಟಿಎಂ ವಹಿವಾಟುಗಳನ್ನು ಮತ್ತು ಇತರ ಬ್ಯಾಂಕ್ ಗಳಿಗೆ 3 ಉಚಿತ ವಹಿವಾಟನ್ನು ನೀಡುತ್ತದೆ. ಪ್ರತಿ ವಹಿವಾಟಿಗೆ 20 ರೂ. ಮತ್ತು ಹಣಕಾಸೇತರ ವಹಿವಾಟಿಗೆ 8 .50 ರೂ.ಪಾವತಿಸಬೇಕಾಗುತ್ತದೆ.