ATM Charges : ಇನ್ನುಮುಂದೆ ATM ನಲ್ಲಿ ಹಣ ಪಡೆಯಲು ಇಷ್ಟು ಶುಲ್ಕ ಕಡ್ಡಾಯವಾಗಿ ಪಾವತಿ ಮಾಡಬೇಕು, RBI ನಿಯಮ.
ATM ನಲ್ಲಿ ನಗದು ಹಿಂಪಡೆಯಲು ಇನ್ನುಮುಂದೆ ಶುಲ್ಕ ಪಾವತಿಸಬೇಕು.
ATM Withdrawal Charges : ದೇಶದ ಪ್ರತಿಷ್ಠಿತ ಸರಕಾರಿ ಬ್ಯಾಂಕ್ ಹಾಗೂ ಖಾಸಗಿ ಬ್ಯಾಂಕ್ ಗಳು ತನ್ನ ಗ್ರಾಹಕರಿಗೆ Debit Card ಸೌಲಭ್ಯವನ್ನು ನೀಡುತ್ತದೆ. ಗ್ರಾಹಕರು ಬ್ಯಾಂಕ್ ನೀಡುವ ಡೆಬಿಟ್ ಕಾರ್ಡ್ ನ (Debit Card) ಮೂಲಕ ATM ನಲ್ಲಿ ನಗದು ಹಿಂಪಡೆಯಬಹುದು. ಬ್ಯಾಂಕ್ ನಲ್ಲಿ ಖಾತೆ ಹೊಂದಿರುವವರು ಹೆಚ್ಚಿನ ಗ್ರಾಹಕರು ATM ಸೌಲಭ್ಯವನ್ನು ಬಳಸಿಕೊಳ್ಳುತ್ತಾರೆ.
ಸದ್ಯ ದೇಶದಲ್ಲಿ UPI Payment ಜನಸ್ನೇಹಿಯಾಗಿದೆ ಕೂಡ UPI ಪಾವತಿಗೆ ಹಣದ ಮಿತಿ ಇರುವುದರಿಂದ ಈಗಲೂ ಕೂಡ ಕೆಲವರು ATM ನಿಂದ ಹಣವನ್ನು ಹಿಂಪಡೆಯುತ್ತಾರೆ. ಸದ್ಯ RBI ನಗದು ಹಿಂಪಡೆಯುವಿಕೆಯಲ್ಲಿ ಮಹತ್ವದ ಬದಲಾವಣೆಯನ್ನು ಜಾರಿಗೊಳಿಸಿದೆ. ATM ನ ನಗದು ಹಿಂಪಡೆಯುವಿಕೆಗೆ ದೇಶದ ವಿವಿಧ ಬ್ಯಾಂಕ್ ಗಳು ಶುಲ್ಕವನ್ನು ವಿಧಿಸಿದೆ.
ಇನ್ನುಮುಂದೆ ATM ನಲ್ಲಿ ಹಣ ಪಡೆಯಲು ಇಷ್ಟು ಶುಲ್ಕ ಕಡ್ಡಾಯವಾಗಿ ಪಾವತಿ ಮಾಡಬೇಕು
*SBI Bank ATM Cash Withdrawal Charges
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 5 ಉಚಿತ ಎಟಿಎಂ ವಹಿವಾಟುಗಳನ್ನು ಮಾಸಿಕ ರೂ.25,000 ವರೆಗೆ ನೀಡುತ್ತದೆ. ಇದಕ್ಕಿಂತ ಹೆಚ್ಚಿನ ಹಣ ತೆಗೆದರೆ ಪ್ರತಿ ವಹಿವಾಟಿಗೆ 10 ರೂ. ಮತ್ತು ಜಿಎಸ್ಟಿ ಪಾವತಿಸಬೇಕಾಗುತ್ತದೆ. ಇತರ ಬ್ಯಾಂಕ್ ಎಟಿಎಂನಲ್ಲಿ ಪ್ರತಿ ವಹಿವಾಟಿಗೆ 20 ರೂ. ಮತ್ತು GST ಪಾವತಿಸಬೇಕಾಗುತ್ತದೆ.
*PNB Bank ATM Cash Withdrawal Charges
ಪಂಜಾಬ್ ನ್ಯಾಷನಲ್ ಬ್ಯಾಂಕ್ 5 ಉಚಿತ ಎಟಿಎಂ ವಹಿವಾಟುಗಳನ್ನು ನೀಡುತ್ತದೆ. ಪ್ರತಿ ವಹಿವಾಟಿಗೆ 10 ರೂ. ಮತ್ತು ಜಿಎಸ್ಟಿ ಪಾವತಿಸಬೇಕಾಗುತ್ತದೆ. ಇತರ ಬ್ಯಾಂಕ್ ಎಟಿಎಂನಲ್ಲಿ ಪ್ರತಿ ವಹಿವಾಟಿಗೆ 21 ರೂ. ಮತ್ತು ಜಿಎಸ್ಟಿ ಪಾವತಿಸಬೇಕಾಗುತ್ತದೆ.
*HDFC Bank ATM Cash Withdrawal Charges
HDFC ಬ್ಯಾಂಕ್ 5 ಉಚಿತ ಎಟಿಎಂ ವಹಿವಾಟುಗಳನ್ನು ನೀಡುತ್ತದೆ. ಪ್ರತಿ ವಹಿವಾಟಿಗೆ 10 ರೂ. ಮತ್ತು GST ಪಾವತಿಸಬೇಕಾಗುತ್ತದೆ. ಇತರ ಬ್ಯಾಂಕ್ ಎಟಿಎಂ ನಲ್ಲಿ ಪ್ರತಿ ವಹಿವಾಟಿಗೆ 21 ರೂ. ಮತ್ತುGST ಪಾವತಿಸಬೇಕಾಗುತ್ತದೆ.
*ICICI Bank ATM Cash Withdrawal Charges
ICICI ಬ್ಯಾಂಕ್ 5 ಉಚಿತ ಎಟಿಎಂ ವಹಿವಾಟುಗಳನ್ನು ಮತ್ತು ಇತರ ಬ್ಯಾಂಕ್ ಗಳಿಗೆ 3 ಉಚಿತ ವಹಿವಾಟನ್ನು ನೀಡುತ್ತದೆ. ಪ್ರತಿ ವಹಿವಾಟಿಗೆ 20 ರೂ. ಮತ್ತು ಹಣಕಾಸೇತರ ವಹಿವಾಟಿಗೆ 8 .50 ರೂ.ಪಾವತಿಸಬೇಕಾಗುತ್ತದೆ.
*Axis Bank ATM Cash Withdrawal Charges
Axis ಬ್ಯಾಂಕ್ ಗ್ರಾಹಕರು ಮೆಟ್ರೋ ನಗರಗಳಲ್ಲಿ ಪ್ರತಿ ತಿಂಗಳು 3 ಬಾರಿ ಮತ್ತು ಮೆಟ್ರೋ ಅಲ್ಲದ ನಗರಗಳಲ್ಲಿ 5 ಬಾರಿ ಉಚಿತ ಹಣವನ್ನು ಪಡೆಯಬಹುದು. ಇನ್ನು ಬ್ಯಾಂಕ್ ಪ್ರತಿ ಹಿಂಪಡೆಯುವಿಕೆಯ ಮೇಲೆ 21 ರೂಪಾಯಿ ಹೆಚ್ಚು ತೆರಿಗೆ ವಿಧಿಸುತ್ತದೆ. ಈ ಬ್ಯಾಂಕ್‌ನ ಗ್ರಾಹಕರು ಎಟಿಎಂ ಮೂಲಕ ಪ್ರತಿದಿನ 40 ರೂ. ಹೆಚ್ಚಿನ ವಹಿವಾಟಿಗೆ ನೀಡಬೇಕಾಗುತ್ತದೆ.