Atma Nirbhar: ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರಿಗೆ ಹೊಸ ಯೋಜನೆಗೆ, ಇಂದೇ ಅರ್ಜಿ ಸಲ್ಲಿಸಿ 50 ಸಾವಿರ ಪಡೆದುಕೊಳ್ಳಿ.
ಕೇಂದ್ರ ಸರ್ಕಾರ ಬೀದಿ ಬದಿಯ ವ್ಯಾಪಾರಿಗಳಿಗೆ ಸಹಾಯವಾಗಲು ಹೊಸ ಯೋಜನೆಯನ್ನು ರೂಪಿಸಿದೆ
Atma Nirbhar Yojana For Street Vendors: ಕೇಂದ್ರ ಸರ್ಕಾರ ದೇಶದ ಜನತೆಯ ಏಳಿಗೆಗಾಗಿ ಈಗಾಗಲೇ ಸಾಕಷ್ಟು ಯೋಜನೆಯನ್ನು ರೂಪಿಸಿದೆ. ದೇಶದ ಲಕ್ಷಾಂತರ ಜನರು ಕೇಂದ್ರ ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯುತ್ತಿದ್ದಾರೆ ಎನ್ನಬಹುದು.
ದೇಶದ ಬಡ ಮತ್ತು ನಿರ್ಗತಿಕರಿಗೆ ಆರ್ಥಿಕವಾಗಿ ನೆರವು ನೀಡುವುದು ಸರ್ಕಾರದ ಪ್ರತಿ ಯೋಜನೆಯ ಉದ್ದೇಶವಾಗಿದೆ. ಈಗಾಗಲೇ ವಿವಿಧ ಸರ್ಕಾರೀ ಯೋಜನೆಯನ್ನು ಪರಿಚಯಿಸಿದ್ದು, ಇದೀಗ ಕೇಂದ್ರ ಸರ್ಕಾರ ಬೀದಿ ಬದಿಯ ವ್ಯಾಪಾರಿಗಳಿಗೆ ಸಹಾಯವಾಗಲು ಹೊಸ ಯೋಜನೆಯನ್ನು ರೂಪಿಸಿದೆ.
ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರಿಗೆ ಹೊಸ ಯೋಜನೆ
ಸದ್ಯ ಕೇಂದ್ರ ಸರ್ಕಾರ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರಿಗೆ ಹೊಸ ಯೋಜನೆಯನ್ನು ಪರಿಚಯಿಸಿದೆ. ಕೇಂದ್ರ ಸರ್ಕಾರ ಇದೀಗ “ಆತ್ಮ ನಿರ್ಭರ್ ಯೋಜನೆ”ಯಡಿ (Atma Nirbhar Yojana) ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ನೀಡಲು ಮುಂದಾಗಿದೆ. ಬಿಡಿ ಬದಿಯ ವ್ಯಪಾರಿಗಳು ಕೇಂದ್ರದ ಈ ಯೋಜನೆಯಡಿ ಅರ್ಜಿ ಸಲ್ಲಿಸುವ ಮೂಲಕ ಬ್ಯಾಂಕ್ ನಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.
ಅರ್ಜಿ ಸಲ್ಲಿಸಿ 50 ಸಾವಿರ ಪಡೆದುಕೊಳ್ಳಿ
ಬೀದಿ ಬದಿ ವ್ಯಾಪಾರಿಗಳು, ಹಾಲು ಮಾರಾಟಗಾರರು, ಪತ್ರಿಕಾ ವಿತರಕರು ಆತ್ಮ ನಿರ್ಭರ್ ಯೋಜನೆಯಡಿ ಸಾಲ ಸೌಲಭ್ಯವನ್ನು ಪಡೆಯಬಹುದು. ಈ ಯೋಜನೆಯಡಿ 3 ಕಂತುಗಳಲ್ಲಿ ಸಾಲವನ್ನು ಪಡೆಯಬಹುದು. ಮೊದಲ ಕಂತಿನಲ್ಲಿ ರೂ 10,000 ಸಾಲ ನೀಡಿ 12 ತಿಂಗಳ ಅವಧಿಯಲ್ಲಿ ಸಾಲ ಮರು ಪಾವತಿ ಮಾಡಿದಲ್ಲಿ ರೂ 20,000 ಸಾಲ ನೀಡಲಾಗುವುದು. ಪಡೆದ ಸಾಲವನ್ನು 18 ತಿಂಗಳ ಅವಧಿಯಲ್ಲಿ ಸಾಲ ಮರು ಪಾವತಿ ಮಾಡಿದಲ್ಲಿ ರೂ 50,000 ಸಾಲ ಸೌಲಭ್ಯ ನೀಡಲಾಗುವುದು.
ಸಾಲ ಸೌಲಭ್ಯದ ಜೊತೆಗೆ QR Code ಅನ್ನು ಮಾಡಿಸಿಕೊಳ್ಳಬೇಕು. ನಗರ ಸ್ಥಳೀಯ ಸಂಸ್ಥೆಗಳಿಂದ ಕೈಗೊಳ್ಳಲಾಗುವ ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಅರ್ಹರು ಅರ್ಜಿ ಸಲ್ಲಿಸುವ ಮೂಲಕ ಬ್ಯಾಂಕುಗಳಲ್ಲಿ ಆತ್ಮ ನಿರ್ಭರ್ ಯೋಜನೆಯಡಿ 50 ಸಾವಿರ ಕಿರು ಸಾಲವನ್ನು ಕಡಿಮೆ ಬಡ್ಡಿದರದಲ್ಲಿ ಪಡೆಯಬಹುದು.