Atmanirbhar Browser: ಇನ್ನುಮುಂದೆ ಗೂಗಲ್ ಬಳಸುವ ಅಗತ್ಯ ಇಲ್ಲ, ಭಾರತೀಯರಿಗೆ ಹೊಸ ಆಪ್ ಕೇಂದ್ರದಿಂದ ಬಿಡುಗಡೆ.
ಗೂಗಲ್ ಬ್ರೌಸರ್ ಗೆ ಠಕ್ಕರು ಕೊಡಲು ಭಾರತ ಸರ್ಕಾರದಿಂದ್ ಬಂತು ಹೊಸ ಬ್ರೌಸರ್.
India Atmanirbhar Browser: ಸಾಮಾನ್ಯವಾಗಿ ಮೊಬೈಲ್ ಬಳಕೆದಾರರಿಗೆ ಗೂಗಲ್ (G0ogle) ಬಗ್ಗೆ ಮಾಹಿತಿ ತಿಳಿದೇ ಇರುತ್ತದೆ. ಯಾವುದೇ ಒಂದು ವಿಷಯದ ಬಗ್ಗೆ ಮಾಹಿತಿ ತಿಳಿದಿಲ್ಲದಿದ್ದರೆ ಅದನ್ನು ಗೂಗಲ್ ನ ಮೂಲಕ ಬಹಳ ಸುಲಭವಾಗಿ ತಿಳಿದುಕೊಳ್ಳಬಹುದು.
ಇನ್ನು ಗೂಗಲ್ ನಲ್ಲಿ ಮಾಹಿತಿ ಸಿಗದೇ ಇರುವ ವಿಷಯಗಳೇ ಇಲ್ಲ ಎಂದರು ತಪ್ಪಾಗಲಾರದು. ಗೂಗಲ್ ಬಳಕೆದಾರರಿಗೆ ಹೆಚ್ಚಿನ ವಿಷಯವನ್ನು ತಿಳಿಸಿಕೊಡುತ್ತದೆ. ಸ್ಥಳ, ವ್ಯಕ್ತಿ ಸೇರಿದಂತೆ ಯಾವುದೇ ರೀತಿಯ ಮಾಹಿತಿಯನ್ನು ಕೂಡ ಗೂಗಲ್ ನ ಮುಖಾಂತರ ಪಡೆದುಕೊಳ್ಳಬಹುದು.
ಗೂಗಲ್ ಗೆ ಪೈಪೋಟಿ ನೀಡಲು ಹೊಸ ಬ್ರೌಸರ್ ಬಿಡುಗಡೆ
ಸಾಮಾನ್ಯವಾಗಿ ಮೊಬೈಲ್ ಬಳಕೆದಾರರು ಗೂಗಲ್ ಅನ್ನು ಬಳಸೆ ಬಳಸುತ್ತಾರೆ. ಯಾವುದೇ ಪದದ ಅರ್ಥವನ್ನು ಕೂಡ ಗೂಗಲ್ ನ ಮುಖಾಂತರ ಪಡೆಯಬಹುದು. ಇನ್ನು ಎಷ್ಟು ವಿಷಯಗಳ ಬಗ್ಗೆ ಆದರೂ ಕೂಡ ಗೂಗಲ್ ನಲ್ಲಿ ಮಾಹಿತಿ ತಿಳಿದುಕೊಳ್ಳಬಹುದು. ಇದೀಗ ಗೂಗಲ್ ಜೊತೆ ಸ್ಪರ್ದಿಸಲು ಭಾರತ ಸರ್ಕಾರ ಹೊಸ ಬ್ರೌಸರ್ ಅನ್ನು ಪರಿಚಯಿಸಿದೆ.
ಗೂಗಲ್ ನಲ್ಲಿ ಸಿಗುವ ಮಾಹಿತಿಗಳು ಹೆಚ್ಚಿನ ಫೀಚರ್ ಜೊತೆ ಈ ಹೊಸ ಬ್ರೌಸರ್ ನಲ್ಲಿ ಕೂಡ ಸಿಗಲಿದೆ. ಇದೀಗ ಗೂಗಲ್ ಕ್ರೋಮ್, ಮೋಜಿಲ್ಲಾ ಫೈರ್ ಫಾಕ್ಸ್, ಮೈಕ್ರೋ ಸಾಫ್ಟ್ ಎಡ್ಜ್, ಒಪೇರಾ ಮತ್ತು ಇತರ ಬ್ರೌಸರ್ ಗಳೊಂದಿಗೆ ಸ್ಪರ್ಧಿಸಲು ಹೊಸ ಬ್ರೌಸರ್ ಅನ್ನು ಭಾರತ ಸರ್ಕಾರ ಪರಿಚಯಿಸಿದೆ. ಭಾರತ ಸರ್ಕಾರ ಪರಿಚಯಿಸಿರುವ ಹೊಸ ಬ್ರೌಸರ್ ಆತ್ಮನಿರ್ಭರ ಬ್ರೌಸರ್ (Atmanirbhar Browser) ಆಗಿದೆ.
ಆತ್ಮನಿರ್ಭರ ಬ್ರೌಸರ್
ವೆಬ್ ಬ್ರೌಸರ್ ಡೆವಲೆಪಮೆಂಟ್ ಚಾಲೆಂಜ್ ಕಾರ್ಯಕ್ರಮದಡಿ ಕೇಂದ್ರ ಸರ್ಕಾರ 3 ಕೋಟಿ ರೂಪಾಯಿ ಅನುದಾನ ಇರಿಸಲಿದೆ. ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಅದರ ಘಟಕ ಇಲಾಖೆಗಳು ಈ ಕಾರ್ಯಕ್ರಮದ ಮೇಲ್ವಿಚಾರಣೆ ಮಾಡಲಿವೆ. ವಿದೇಶಿ ವೆಬ್ ಬ್ರೌಸರ್ ಗಳ ಮೇಲೆ ಅವಲಂಭಿತರಾಗಿರಬಾರದು ಎನ್ನುವ ಕಾರಣಕ್ಕೆ ಭಾರತ ಸರ್ಕಾರ ಆತ್ಮನಿರ್ಭರ ಬ್ರೌಸರ್ ಅನ್ನು ಪರಿಚಯಿಸಲಿದೆ.