August Holiday: ಬರೋಬ್ಬರಿ 14 ದಿನ ದೇಶದ ಎಲ್ಲಾ ಬ್ಯಾಂಕ್ ಬಂದ್, ಬ್ಯಾಂಕ್ ವ್ಯವಹಾರ ಮಾಡುವವರೇ ಬೇಗ ಕೆಲಸ ಮುಗಿಸಿರಿ.
ಆಗಸ್ಟ್ ನಲ್ಲಿ 14 ದಿನ ಬ್ಯಾಂಕ್ ರಜೆ, ಬ್ಯಾಂಕ್ ನೌಕರರು ಹಾಗೂ ಗ್ರಾಹಕರು ಬ್ಯಾಂಕ್ ರಜಾ ದಿನಗಳ ಬಗ್ಗೆ ಮಾಹಿತಿ ತಿಳಿಯಿರಿ.
August Bank Holiday For 14 Day: ಇದೀಗ ಆಗಸ್ಟ್ ತಿಂಗಳುಗಳಲ್ಲಿ ಬ್ಯಾಂಕ್ ರಜಾ ದಿನಗಳ ಪಟ್ಟಿ ಬಿಡುಗಡೆಯಾಗಿದೆ. ಬ್ಯಾಂಕ್ ನ ನೌಕರರು ಬ್ಯಾಂಕ್ ರಜಾ (Bank Holyday) ದಿನಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು. ಇದೀಗ 2023 ರ ಜುಲೈ ತಿಂಗಳು ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿದೆ.
ಇನ್ನು ಮೇಯಿಂದ ಜುಲೈ ನಲ್ಲಿ ಸಾಕಷ್ಟು ನಿಯಮಗಳು ಬದಲಾಗಿದ್ದವು. ಜುಲೈ ತಿಂಗಳು ಮುಗಿದ ನಂತರ ಆಗಸ್ಟ್ (August) ಪ್ರಾರಂಭವಾಗಲಿದೆ. ಬ್ಯಾಂಕ್ ನೌಕರರಿಗೆ ಸಾಮಾನ್ಯವಾಗಿ ಪ್ರತಿ ತಿಂಗಳಿನಲ್ಲಿ ಸಾಕಷ್ಟು ರಜೆ ಸಿಗುತ್ತದೆ.
ಆಗಸ್ಟ್ ನಲ್ಲಿ 14 ದಿನಗಳು ಬ್ಯಾಂಕ್ ರಜೆ
ದೇಶದಾದ್ಯಂತ ಪ್ರತಿ ಭಾನುವಾರ ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ಹಾಗೆಯೆ ಎರಡನೇ ಮತ್ತು ನಾಲ್ಕನೇ ಶನಿವಾರ ಕೂಡ ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ಮುಂಬರುವ ಆಗಸ್ಟ್ ತಿಂಗಳಲ್ಲಿ ಬ್ಯಾಂಕ್ ಗೆ ಬರೋಬ್ಬರಿ 14 ದಿನಗಳು ರಜೆ ಸಿಗಲಿದೆ. ಗ್ರಾಹಕರ ಈ 14 ದಿನಗಳ ಬ್ಯಾಂಕ್ ಸೇವೆಯಿಂದ ವಂಚಿತರಾಗುತ್ತಾರೆ.
ಬ್ಯಾಂಕ್ ಗೆ ಸಂಬಂಧಿಸಿದ ಆನ್ಲೈನ್ ಸೇವೆಗಳು ಗ್ರಾಹಕರಿಗೆ ಲಭ್ಯವಾಗುತ್ತದೆ. ಇನ್ನು ಬ್ಯಾಂಕ್ 14 ದಿನಗಳು ಯಾವ ಕಾರಣಕ್ಕೆ ಬಂದ್ ಆಗಿರುತ್ತದೆ ಆರ್ ಬಿಐ ಮಾಹಿತಿ ನೀಡಿದೆ.
ಮುಂದಿನ ತಿಂಗಳ ಬ್ಯಾಂಕ್ ರಜಾ ದಿನಗಳ ವಿವರ
*ಆಗಸ್ಟ್ 6: ಭಾನುವಾರ ರಜಾದಿನ.
*ಆಗಸ್ಟ್ 8: ಟೆಂಡಾಂಗ್ ಲ್ಹೋ ರಮ್ ಫಾಟ್.
*ಆಗಸ್ಟ್ 12: ಎರಡನೇ ಶನಿವಾರ ರಜಾ ದಿನ.
*ಆಗಸ್ಟ್ 13: ಭಾನುವಾರ- ರಜಾದಿನ.
*ಆಗಸ್ಟ್ 15: ಸ್ವಾತಂತ್ರ ದಿನಾಚರಣೆ ಪ್ರಯುಕ್ತ ದೇಶದಾದ್ಯಂತ ರಜೆ.
*ಆಗಸ್ಟ್ 16: ಪರ್ಷಿಯನ್ ಹೊಸ ಹಬ್ಬ, ಪಾರ್ಸಿ ಹೊಸ ವರ್ಷದ ಸಂದರ್ಭದಲ್ಲಿ ಬೇಲಾಪುರ, ಮುಂಬೈ ಮತ್ತು
ನಾಗ್ಪುರ ವಲಯಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
*ಆಗಸ್ಟ್ 18: ಶಂಕರ್ ದೇವಾಸ್ ದಿನಾಚರಣೆ ಕಾರಣ ಗುಹಾವಟಿ ವಲಯದ ಬ್ಯಾಂಕ್ ಗಳು ರಜೆ ಬಂಧ್ ಇರುತ್ತದೆ.
*ಆಗಸ್ಟ್ 26: ನಾಲ್ಕನೇ ಶನಿವಾರ ರಜಾದಿನ.
*ಆಗಸ್ಟ್ 28: ಮೊದಲ ಓಣಂ ಕಾರಣ ಕೊಚ್ಚಿ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕ್ ಗಳು ರಜೆ ಬಂಧ್ ಇರುತ್ತದೆ.
*ಆಗಸ್ಟ್ 27: ಭಾನುವಾರ- ರಜಾದಿನ.
*ಆಗಸ್ಟ್ 29: ತಿರುವೋಣಂ ಪ್ರಯುಕ್ತ ಕೊಚ್ಚಿ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕ್ ಗಳು ರಜೆ ಬಂಧ್ ಇರುತ್ತದೆ.
*ಆಗಸ್ಟ್ 30: ರಕ್ಷಾ ಬಂಧನ ಕಾರಣ ಜೈಪುರ ಮತ್ತು ಶಿಮ್ಲಾ ವಲಯಗಳಲ್ಲಿ ಬ್ಯಾಂಕುಗಳಿಗೆ ರಜೆ ಇರುತ್ತದೆ.
*ಆಗಸ್ಟ್ 31: ಶ್ರೀ ನಾರಾಯಣ್ ಗುರು ಜಯಂತಿ, ಗ್ಯಾಂಗ್ಟಾಕ್, ಕಾನ್ಪುರ, ಕೊಚ್ಚಿ, ಲಕ್ನೋ ಮತ್ತು ತಿರುವಂತಪುರಂನಲ್ಲಿ ಪಾಂಗ್ ಲಾಭ್ಸೋಲ್ ಸಂದರ್ಭದಲ್ಲಿ ಬ್ಯಾಂಕ್ ಗಳು ಬಂಧ್ ಆಗಿರುತ್ತದೆ.