World Cup Prize: ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡಕ್ಕೆ ಸಿಕ್ಕ ಬಹುಮಾನದ ಹಣ ಎಷ್ಟು…? ಭಾರತಕ್ಕೆ ಸಿಕ್ಕಿದ್ದೆಷ್ಟು…?
ವಿಶ್ವಕಪ್ ನಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದುಕೊಂಡ ತಂಡಗಳಿಗೆ ಸಿಕ್ಕ ಬಹುಮಾನವೆಷ್ಟು..?
Australia Winning Prize Money In World Cup: November 19 ರಂದು ಅಹಮದಾಬಾದ್ ನಲ್ಲಿ ನಡೆದ India v/s Australia ತಂಡದ ಪಂದ್ಯದಲ್ಲಿ ಮೊದಲು Team India ಬ್ಯಾಟಿಂಗ್ ಮಾಡಿದೆ. ಟೀಮ್ ಇಂಡಿಯಾ ಗೆಲ್ಲುತ್ತದೆ ಎಂದು ಕೋಟ್ಯಾಂತರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಆದರೆ ಕೋಟ್ಯಾಂತರ ಅಭಿಮಾನಿಗಳ ಕಾತುರತೆಗೆ ನಿನ್ನೆ ಬ್ರೇಕ್ ಬಿದ್ದಿದೆ. ನಿನ್ನೆ ನಡೆದ ICC World cup 2023 ರ ಫೈನಲ್ ನ ಹಣಾಹಣಿಯಲ್ಲಿ ಟೀಮ್ ಇಂಡಿಯಾದ ವಿರುದ್ಧ ಆಸ್ಟ್ರೇಲಿಯಾ ಜಯ ಸಾಧಿಸಿದೆ.
ಟೀಮ್ ಇಂಡಿಯಾದ ಗೆಲುವಿನ ನಿರೀಕ್ಷೆಯಲ್ಲಿದ್ದ ಇಡೀ ಭಾರತೀಯರು ಸದ್ಯ ಬಾರಿ ಬೇಸರದಲ್ಲಿದ್ದಾರೆ.ICC World cup 2023 ರ ಫೈನಲ್ ನಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ತಂಡಕ್ಕೆ ಕೇವಲ 241 ರನ್ ಗಳ ಗುರಿಯನ್ನು ನೀಡಿದ್ದು, ಟೀಮ್ ಇಂಡಿಯಾ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ 6 ವಿಕೆಟ್ ಗಳನ್ನು ಟೀಮ್ ಇಂಡಿಯಾವನ್ನು ಸೋಲಿಸಿದೆ. ICC World Cup 2023 ರ Cup ಅನ್ನು ಆಸ್ಟ್ರೇಲಿಯಾ ತನ್ನ ಮುಡಿಗೇರಿಸಿಕೊಂಡರೆ Team India Runner UP ಆಗಿದೆ. ಇದೀಗ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡಕ್ಕೆ ನಗದು ಬಹುಮಾನ ಎಷ್ಟು ಸಿಕ್ಕಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.
ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡಕ್ಕೆ ಸಿಕ್ಕ ಬಹುಮಾನದ ಹಣ ಎಷ್ಟು…?
ICC World cup 2023 ರ ಪಂದ್ಯಕ್ಕೆ ಈ ಬಾರಿ ಒಟ್ಟಾರೆ US$10 ಮಿಲಿಯನ್ ಅಂದರೆ ಭಾರತೀಯ ರೂ. ಗಳಲ್ಲಿ ಸುಮಾರು 83 ಕೋಟಿ ಬಹುಮಾನದ ಮೊತ್ತವನ್ನು ಮೀಸಲಿಡಲಾಗಿದೆ. IND vs AUS ODI ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ತಂಡ ಜಯ ಸಾಧಿಸಿದ್ದು, ವಿಜೇತ ತಂಡಕ್ಕೆ US$4 ಮಿಲಿಯನ್ ಅಂದರೆ ಭಾರತೀಯ ರೂ. ಗಳಲ್ಲಿ ಸುಮಾರು 33 ಕೋಟಿ ನಗದು ಬಹುಮಾನವನ್ನು ನೀಡಲಾಗಿದೆ. Australia ತಂಡ ಕಪ್ ನ ಜೊತೆಗೆ ಭರ್ಜರಿ ಬಹುಮಾನವನ್ನೇ ಪಡೆದುಕೊಂಡಿದೆ.
2023 ವಿಶ್ವಕಪ್ ನಲ್ಲಿ ಎರಡನೇ ಸ್ಥಾನ ಪಡೆದ ಭಾರತಕ್ಕೆ ಸಿಕ್ಕ ಬಹುಮಾನದ ಹಣ ಎಷ್ಟು…?
ಇನ್ನು 2023 ರ ಪಂದ್ಯದಲ್ಲಿ Team India Runner Up ಸ್ಥಾನವನ್ನು ಪಡೆದುಕೊಂಡಿದೆ. ICC ODI ವಿಶ್ವಕಪ್ ನಲ್ಲಿ ರನ್ನರ್ ಅಪ್ ಗೆ US$2 ಮಿಲಿಯನ್ ಅಂದರೆ ಭಾರತೀಯ ರೂ. ಗಳಲ್ಲಿ ಸುಮಾರು 16 ಕೋಟಿ ನೀಡಲಾಗಿದೆ. ಇನ್ನು ಸೆಮಿ ಫೈನಲ್ ನಲ್ಲಿ ನಿರ್ಗಮಿಸಿರುವ New Zeland ಮತ್ತು South Africa ತಂಡಗಳು ತಲಾ US$800,000 ಅಂದರೆ ಭಾರತೀಯ ರೂ. ಗಳಲ್ಲಿ ಸುಮಾರು 6 ಕೋಟಿ ನೀಡಲಾಗಿದೆ.
ICC ಕ್ರಿಕೆಟ್ ODI ವರ್ಲ್ಡ್ ಕಪ್ 2023 ರ ಗುಂಪು ಹಂತದಲ್ಲಿ ಹೊರಹಾಕಲ್ಪಟ್ಟ ಆರು ತಂಡಗಳಿಗೆ ತಲಾ $100,000 ಅಂದರೆ ಭಾರತೀಯ ರೂ. ಗಳಲ್ಲಿ ಸುಮಾರು 80 ಲಕ್ಷ ಮೊತ್ತವನ್ನು ನೀಡಲಾಗುತ್ತದೆ. ಹಾಗೆಯೆ ಗುಂಪು ಹಂತದಲ್ಲಿ ಪ್ರತಿ ಪಂದ್ಯದ ವಿಜೇತರಿಗೆ ಬೋನಸ್ ಆಗಿ ಹೆಚ್ಚುವರಿ $40,000 ಅಂದರೆ ಭಾರತೀಯ ರೂ. ಗಳಲ್ಲಿ ಸುಮಾರು 33 ಲಕ್ಷ ರೂಪಾಯಿ ಮೊತ್ತವನ್ನು ನೀಡಲಾಗುತ್ತದೆ.