Maruti Hyundai New Hybrid SUVs: ಪೆಟ್ರೋಲ್ ಬೆಲೆ ಏರಿಕೆ ಮತ್ತು ಪರಿಸರ ಕಾಳಜಿಯಿಂದಾಗಿ ಭಾರತದಲ್ಲಿ ಹೈಬ್ರಿಡ್ ಕಾರುಗಳ ಬೇಡಿಕೆ ಗಗನಕ್ಕೇರಿದೆ. ಬಹುತೇಕ ಎಲ್ಲಾ ವಾಹನ ತಯಾಕರ ಕಂಪನಿಗಳು ಈಗ ಹೈಬ್ರಿಡ್ ಕಾರುಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡಲು ಮುಂದಾಗಿದೆ. ಪರಿಸರಕ್ಕೆ ಹೆಚ್ಚಿನ ಹಾನಿಯಾಗಬಾರದು ಮತ್ತು ಜನರಿಗೆ ಹೆಚ್ಚು ಮೈಲೇಜ್ ಕೊಡುವ ಕಾರುಗಳನ್ನು ಕೊಡಬೇಕು ಅನ್ನುವ ಉದ್ದೇಶದಿಂದ ವಾಹನ ತಯಾಕರ ಕಂಪನಿಗಳು ಹೈಬ್ರಿಡ್ ಕಾರುಗಳ ತಯಾರಿಕೆಗೆ ಹೆಚ್ಚು ಗಮನ ಕೊಡುತ್ತಿದೆ. ಈ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಮಾರುತಿ ಸುಜುಕಿ ಮತ್ತು ಹ್ಯುಂಡೈ ತಮ್ಮ 3 ಹೊಸ ಹೈಬ್ರಿಡ್ SUVಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಸಿದ್ಧವಾಗಿವೆ. ಈ ಕಾರುಗಳು ಉತ್ತಮ ಮೈಲೇಜ್‌ನೊಂದಿಗೆ ಗ್ರಾಹಕರ ಮನಗೆಲ್ಲಲಿವೆ.
ಮಾರುತಿ ಸುಜುಕಿಯಿಂದ ಫ್ರಾಂಕ್ಸ್ ಹೈಬ್ರಿಡ್
ಮಾರುತಿ ಸುಜುಕಿಯ ಜನಪ್ರಿಯ SUV ಫ್ರಾಂಕ್ಸ್ ಇದೀಗ ಹೈಬ್ರಿಡ್ ಆವೃತ್ತಿಯಲ್ಲಿ ಬರಲಿದೆ. ಈ ಕಾರು 1.2-ಲೀಟರ್ Z12E ಪೆಟ್ರೋಲ್ ಎಂಜಿನ್ ಜೊತೆಗೆ ಹೈಬ್ರಿಡ್ ತಂತ್ರಜ್ಞಾನವನ್ನು ಹೊಂದಿರಲಿದೆ. ಇದರಿಂದ ಲೀಟರ್‌ಗೆ 30-35 ಕಿ.ಮೀ. ಮೈಲೇಜ್ ನೀಡುವ ಸಾಧ್ಯತೆಯಿದೆ. 2026ರ ಆರಂಭದಲ್ಲಿ ಈ ಕಾರು ಮಾರುಕಟ್ಟೆಗೆ ಬರಲಿದ್ದು, ಸನ್‌ರೂಫ್, 360-ಡಿಗ್ರಿ ಕ್ಯಾಮೆರಾ ಮತ್ತು 6 ಏರ್‌ಬ್ಯಾಗ್‌ಗಳಂತಹ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ.
ಹ್ಯುಂಡೈ ಕ್ರೆಟಾ ಹೈಬ್ರಿಡ್
ಹ್ಯುಂಡೈ ಕ್ರೆಟಾ ಈಗಾಗಲೇ ಭಾರತದಲ್ಲಿ ಸೂಪರ್‌ಹಿಟ್ SUV ಆಗಿದೆ. ಇದೀಗ, ಇದರ ಹೈಬ್ರಿಡ್ ಆವೃತ್ತಿಯನ್ನು 2027ರ ವೇಳೆಗೆ ಬಿಡುಗಡೆ ಮಾಡಲು ಹ್ಯುಂಡೈ ಸಿದ್ಧತೆ ನಡೆಸಿದೆ. ಈ ಕಾರು 1.5-ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಎಲೆಕ್ಟ್ರಿಕ್ ಮೋಟಾರ್ ಹೊಂದಿರಲಿದ್ದು, ಉತ್ತಮ ಇಂಧನ ದಕ್ಷತೆಯನ್ನು ಒದಗಿಸಲಿದೆ. ಹೊಸ ಡಿಸೈನ್ ಮತ್ತು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಇದು ಗ್ರಾಹಕರ ಗಮನ ಸೆಳೆಯಲಿದೆ.
ಮಾರುತಿಯ 7-ಸೀಟರ್ ಗ್ರ್ಯಾಂಡ್ ವಿಟಾರಾ
ಮಾರುತಿ ಸುಜುಕಿಯ ಮತ್ತೊಂದು ದೊಡ್ಡ ಯೋಜನೆಯೆಂದರೆ 7-ಸೀಟರ್ ಗ್ರ್ಯಾಂಡ್ ವಿಟಾರಾ ಹೈಬ್ರಿಡ್. ಈ SUV 2025ರ ಅಂತ್ಯದ ವೇಳೆಗೆ ಬಿಡುಗಡೆಯಾಗಲಿದ್ದು, 1.5-ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿರಲಿದೆ. ಕುಟುಂಬ ಸೌಕರ್ಯಕ್ಕಾಗಿ ವಿಶಾಲವಾದ ಒಳಾಂಗಣ ಮತ್ತು ಆಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಈ ಕಾರು, ಟೊಯೊಟಾದ ಅರ್ಬನ್ ಕ್ರೂಸರ್ ಹೈರೈಡರ್‌ಗೆ ಸೆಡ್ಡು ಹೊಡೆಯಲಿದೆ.