Actor Avinash: ಅವಿನಾಶ್ ಮತ್ತು ಮಾಳವಿಕಾ ನಡುವೆ ಲವ್ ಆಗಿದ್ದು ಹೇಗೆ, ಕ್ಯೂಟ್ ಆಗಿದೆ ಇಬ್ಬರ ಪ್ರೇಮಕತೆ.
ಅವಿನಾಶ್ ಅವರು ವೀಕೆಂಡ್ ವಿಥ್ ರಮೇಶ್ ನಲ್ಲಿ ತಮ್ಮ ಲವ್ ಸ್ಟೋರಿ ಬಗ್ಗೆ ಹೇಳಿಕೊಂಡಿದ್ದಾರೆ.
Actor Avinash And Malavika Love Story: ಕನ್ನಡಿಗರ ನೆಚ್ಚಿನ ವೀಕೆಂಡ್ ವಿಥ್ ರಮೇಶ್ ಶೋ (Weekend With Ramesh Season 5) ಆರಂಭಗೊಂಡು ಈಗಾಗಲೇ ನಾಲ್ಕು ವಾರಗಳನ್ನು ಪೂರೈಸಿದೆ. ನಾಲ್ಕು ವಾರಗಳಲ್ಲಿ ಐದು ಸಾಧಕರ ಪರಿಚಯವನ್ನು ವೀಕೆಂಡ್ ವಿಥ್ ವೇದಿಕೆ ಪರಿಚಯಿಸಿದೆ.
ಇನ್ನು ಈ ವಾರ ಆರನೇ ಸಾಧಕರಾಗಿ ಕನ್ನಡದ ಹೆಸರಾಂತ ನಟರಾದ ಅವಿನಾಶ್ ಅವರು ಸಾಧಕರ ಕುರ್ಚಿಯನ್ನು ಏರಲಿದ್ದಾರೆ. ಈ ವೇಳೆ ನಟ ಅವಿನಾಶ್ (Avinash) ಅವರು ತಮ್ಮ ಪ್ರೀತಿಯ ವಿಚಾರಗಳನ್ನು ವೇದಿಕೆಯ ಮೇಲೆ ಹಂಚಿಕೊಡಿದ್ದಾರೆ.
ಅವಿನಾಶ್ ಅವರ ಪತ್ನಿ ಮಾಳವಿಕಾ
ಇನ್ನು ಈ ವಾರದ ವೀಕೆಂಡ್ ವಿಥ್ ಸೀಸನ್ 5 ನ ಪ್ರೊಮೊ ಜೀ ವಾಹಿನಿ ಬಿಡುಗಡೆ ಮಾಡಿದೆ. ಈ ವಾರದಲ್ಲಿ ನಟ ಅವಿನಾಶ್ ಅವರ ವೃತ್ತಿ ಜೀವನ, ಬಾಲ್ಯ ಜೀವನ, ವೈವಾಹಿಕ ಜೀವನ, ಸಿನಿ ಪಯಣದ ಬಗ್ಗೆ ಕೆಲವು ಕುತೂಹಲಕಾರಿ ವಿಷಯಗಳು ರಿವೀಲ್ ಆಗಲಿದೆ.
ಇನ್ನು ಅವಿನಾಶ್ ಅವರು ಕನ್ನಡದ ಹೆಸರಾಂತ ನಟಿ ಆಗಿರುವ ಮಾಳವಿಕಾ (Malavika) ಅವರನ್ನು ವಿವಾಹ ಆಗಿದ್ದಾರೆ. ಇನ್ನು ವೀಕೆಂಡ್ ವಿಥ್ ವೇದಿಕೆಯಲ್ಲಿ ಮಾಳವಿಕಾ ಅವರ ಮೇಲೆ ಲವ್ ಆಗಿದ್ದು ಹೇಗೆ ಎನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಅವಿನಾಶ್ ಮತ್ತು ಮಾಳವಿಕಾ ನಡುವೆ ಲವ್ ಆಗಿದ್ದು ಹೇಗೆ
ಅವಿನಾಶ್ ಅವರು ತಮ್ಮ ಪತ್ನಿ ಮಾಳವಿಕಾ ಅವರ ಮೇಲೆ ಹೇಗೆ ಪ್ರೀತಿ ಹುಟ್ಟಿತು ಎನ್ನುವ ಬಗ್ಗೆ ಹೇಳಿಕೊಂಡಿದ್ದಾರೆ. “ಕೃಷ್ಣಾವತಾರ ಎಂಬ ಸೀರಿಯಲ್ ಮಾಡ್ತಾ ಇದ್ವಿ. ನಾನು ಒಂದು ಪಾತ್ರ ಮಾಡಲು ಹೋಗಿದ್ದೆ. ಮತ್ತು ಆ ಸಮಯದಲ್ಲಿ ಗೊತ್ತಿಲ್ಲದೇ ಒಂದು ಸಂಬಂಧ ಹುಟ್ಟಿಕೊಂಡಿದೆ” ಎಂದು ಅವಿನಾಶ್ ಹೇಳಿದ್ದಾರೆ.
“ನನಗೆ ಮಾಳವಿಕಾ ಮೇಲೆ ಪ್ರೀತಿ ಇದ್ದಿತ್ತು. ಆದರೆ ಹೇಳಿಕೊಳ್ಳುವಷ್ಟು ಧೈರ್ಯ ಇರಲಿಲ್ಲ. ನಂತರ ನಮ್ಮ ಅತ್ತೆಯವರೇ ಕೇಳಿದರು ಮದುವೆ ಆಗ್ತೀರಾ ಎಂದು. ಆಗ ನನಗೆ ಖುಷಿ ಆಗಿತ್ತು. ಪ್ರೀತಿ ಬಗ್ಗೆ ಮಾತನಾಡುವುದು ಸುಲಭ, ಆದರೆ ಜವಾಬ್ದಾರಿ ಬಂದಾಗ ಭಯ ಶುರುವಾಗುತ್ತದೆ” ಎಂದು ನಟ ಅವಿನಾಶ್ ಅವರು ಹೇಳಿದ್ದಾರೆ.