Aviva And Abishek: ಭಾವಿ ಪತ್ನಿ ಹಣೆಗೆ ಮುತ್ತು ನೀಡಿದ ಅಭಿಷೇಕ್ ಅಂಬರೀಷ್, ಫೋಟೋ ಶೇರ್ ಮಾಡಿದ ಅವೀವಾ.
Abishek Ambareesh Kiss Aviva Bidapa: ಕನ್ನಡ ಖ್ಯಾತ ಹಿರಿಯ ನಟ ಅಂಬರೀಷ್ ಅವರ ಪುತ್ರ ಅಭಿಷೇಕ್ ಅಂಬರೀಷ್ (Abhishek Ambareesh) ಅವರು ಇದೀಗ ತಮ್ಮ ಹೊಸ ಹೊಸ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ನಟ ಅಭಿಷೇಕ್ ಅಂಬರೀಷ್ ಅವರು ಇದೀಗ ಮದುವೆಗೆ ಸಿದ್ದರಾಗಿದ್ದಾರೆ.
ತಮ್ಮ ಬಹುಕಾಲದ ಗೆಳತಿಯ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇದೀಗ ಅಭಿಷೇಕ್ ಭಾವಿ ಪತ್ನಿ ಅವಿವಾ ತಮ್ಮ ಇನ್ಸ್ಟಾಗ್ರಾಮ್ (Aviva Instagram) ನಲ್ಲಿ ಅಭಿಷೇಕ್ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಇವರ ಫೋಟೋಗಳಿಗೆ ಅಭಿಮಾನಿಗಳು ಬಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಅಭಿಷೇಕ್ ಜೊತೆಗಿನ ಫೋಟೋ ಹಂಚಿಕೊಂಡ ಅವಿವಾ
ಸ್ಯಾಂಡಲ್ ವುಡ್ ಖ್ಯಾತ ನಟ ಅಭಿಷೇಕ್ ಅಂಬರೀಷ್ ಅವರು ಅವಿವಾ ಬಿದ್ದಪ್ಪ ಜೊತೆ ಡಿಸೆಂಬರ್ 11 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇನ್ನು ಇವರ ನಿಶ್ಚಿತಾರ್ಥಕ್ಕೆ ಸ್ಯಾಂಡಲ್ ವುಡ್ ನ ಅನೇಕ ಗಣ್ಯರು ಸಾಕ್ಷಿಯಾಗಿದ್ದರು.
ಈ ಹಿಂದೆ ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ನಿಶ್ಚಿತಾರ್ಥದ ಫೋಟೋಗಳು ಸೋಶಿಯಲ್ ಮಿಡಿಯಾಡಳಿ ವೈರಲ್ ಆಗಿದ್ದವು. ಇದೀಗ ಹಲವು ಸಮಯ ನಂತರ ಅಭಿಷೇಕ್ ಹಾಗೂ ಅವಿವಾ ತಮ್ಮ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಇವರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
View this post on Instagram
ತಮ್ಮ ಭಾವಿ ಪತಿ ಹಣೆಗೆ ಮುತ್ತು ನೀಡುತ್ತಿರುವ ಫೋಟೋ ಶೇರ್ ಮಾಡಿದ ಅವಿವಾ
ಅಭಿಷೇಕ್ ಅಂಬರೀಷ್ ತಮ್ಮ ಬಹುಕಾಲದ ಗೆಳತಿ ಅವಿವಾ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ನಟಿ, ಸಂಸದೆ ಸುಮಲತಾ ಅಂಬರೀಷ್ ಅವರು ಸೊಸೆಯನ್ನು ಮನೆಗೆ ಬರಮಾಡಿಕೊಳ್ಳುವ ಸಂಭ್ರಮದಲ್ಲಿದ್ದಾರೆ.
ಇದೀಗ ಸುಮಲತಾ ಅಂಬರೀಷ್ ಅವರ ಭಾವಿ ಸೊಸೆ ಅವಿವಾ ತಮ್ಮ ಭಾವಿ ಪತಿ ಹಣೆಗೆ ಮುತ್ತು ನೀಡುತ್ತಿರುವ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇನ್ನು ಅಭಿಷೇಕ್ ಅಂಬರೀಷ್ ಅವರ ಅಭಿಮಾನಿಗಳು ಈ ಜೋಡಿಯ ಮದುವೆಗೆ ಕಾಯುತ್ತಿದ್ದಾರೆ.